ಹೃದಯ ವಿದ್ರಾವಕ ಘಟನೆ; ಬಿಲ್ ಪಾವತಿಸಲಾಗದೆ ಗಂಡನ ಶವಕ್ಕಾಗಿ ಆಸ್ಪತ್ರೆ ಮುಂದೆ ರಾತ್ರಿಯಿಂದ ಕುಳಿತ ಪತ್ನಿ

ಪತ್ನಿ ಶಶಿಕಲಾ ಚಿಕಿತ್ಸೆ ವೇಳೆ 90 ಸಾವಿರ ಹಣ ಪಾವತಿಸಿದ್ದರು. ಆದರೆ ಒಟ್ಟು 2 ಲಕ್ಷ 81 ಸಾವಿರ ಬಿಲ್ ಆಗಿದೆ. ಬಿಲ್ ಕಟ್ಟಲಾಗದೆ ಪತ್ನಿ ಗಂಡನ ಶವಕ್ಕಾಗಿ ಆಸ್ಪತ್ರೆ ಮುಂದೆ ರಾತ್ರಿಯಿಂದ ಕಾದು ಕುಳಿತಿದ್ದಾರೆ. ಪತಿ ರಂಗನಾಥ ರಾತ್ರಿ 8 ಗಂಟೆಗೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದರು. ಸಾಲ ಮಾಡಿ 90 ಸಾವಿರ ಹಣ ಕಟ್ಟಿದ್ದೆ.

ಹೃದಯ ವಿದ್ರಾವಕ ಘಟನೆ; ಬಿಲ್ ಪಾವತಿಸಲಾಗದೆ ಗಂಡನ ಶವಕ್ಕಾಗಿ ಆಸ್ಪತ್ರೆ ಮುಂದೆ ರಾತ್ರಿಯಿಂದ ಕುಳಿತ ಪತ್ನಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: sandhya thejappa

Updated on:Jun 05, 2021 | 5:12 PM

ನೆಲಮಂಗಲ: ಬಿಲ್ ಪಾವತಿಸಲಾಗದೆ ಗಂಡನ ಶವಕ್ಕಾಗಿ ಆಸ್ಪತ್ರೆ ಮುಂದೆ ಪತ್ನಿ ರಾತ್ರಿಯಿಂದ ಕುಳಿತಿರುವ ಹೃದಯ ವಿದ್ರಾವಕ ಘಟನೆ ಹೆಸರಘಟ್ಟ ರಸ್ತೆಯಲ್ಲಿರುವ ಎನ್ಆರ್ಆರ್ ಅಸ್ಪತ್ರೆ ಮುಂದೆ ಕಂಡುಬಂದಿದೆ. ಕೊರೊನಾ ಸೋಂಕಿನಿಂದ ನೆಲಗದರನಹಳ್ಳಿ ನಿವಾಸಿಯಾದ 35 ವರ್ಷದ ರಂಗನಾಥ ಮೃತಪಟ್ಟಿದ್ದಾರೆ. ರಂಗನಾಥ ಆಸ್ಪತ್ರೆಯಲ್ಲಿ ಕಳೆದ 6 ದಿನದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಕೇವಲ ಆರು ದಿನಕ್ಕೆ 2 ಲಕ್ಷ 81 ಸಾವಿರ ಬಿಲ್ ಆಗಿದೆ.

ಪತ್ನಿ ಶಶಿಕಲಾ ಚಿಕಿತ್ಸೆ ವೇಳೆ 90 ಸಾವಿರ ಹಣ ಪಾವತಿಸಿದ್ದರು. ಆದರೆ ಒಟ್ಟು 2 ಲಕ್ಷ 81 ಸಾವಿರ ಬಿಲ್ ಆಗಿದೆ. ಬಿಲ್ ಕಟ್ಟಲಾಗದೆ ಪತ್ನಿ ಗಂಡನ ಶವಕ್ಕಾಗಿ ಆಸ್ಪತ್ರೆ ಮುಂದೆ ರಾತ್ರಿಯಿಂದ ಕಾದು ಕುಳಿತಿದ್ದಾರೆ. ಪತಿ ರಂಗನಾಥ ರಾತ್ರಿ 8 ಗಂಟೆಗೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದರು. ಸಾಲ ಮಾಡಿ 90 ಸಾವಿರ ಹಣ ಕಟ್ಟಿದ್ದೆ. ಬದುಕಿದ್ದರೆ ಕೂಲಿ ಮಾಡಿ ಸಾಲ ತೀರಿಸಬಹುದಿತ್ತು. ಪತಿ ಇಲ್ಲ, ಸಾಲ ಮಾಡಿದರೆ ತೀರಿಸುವುದು ಯಾರು. ಚಿಕ್ಕ ಚಿಕ್ಕ ಎರಡು ಮಕ್ಕಳು ಇದ್ದಾರೆ ಸರ್ಕಾರದವರು ನಮ್ಮಂಥವರ ಕಡೆ ಗಮನ ಹರಿಸಬೇಕು ಎಂದು ನೊಂದ ಮಹಿಳೆ ಕಣ್ಣೀರಾಕಿದ್ದಾರೆ.

ಆಸ್ಪತ್ರೆ ಆಡಳಿತ ಮಂಡಳಿಯವರು ಹೃದಯ ಇಲ್ಲದ ರೀತಿಯಲ್ಲಿ ವರ್ತನೆ ಮಾಡುತ್ತಾರೆ. ಕೂದಳತೆ ದೂರದಲ್ಲಿ ಸೋಲದೇವನಹಳ್ಳಿ ಪೋಲಿಸ್ ಠಾಣೆ ಇದೆ. ಯಾರು ಕೂಡ ರಾತ್ರಿಯಿಂದ ನಮ್ಮ ನೆರವಿಗೆ ಬಂದಿಲ್ಲ. 1ಲಕ್ಷ 80 ಸಾವಿರ ಹಣ ಕಟ್ಟಿ ಶವ ತೆಗೆದುಕೊಂಡು ಹೋಗಿ ಅಂತಿದ್ದಾರೆ. ಬಿಬಿಎಂಪಿ ಅಧಿಕಾರಿಗಳು, ಪೊಲೀಸರು, ಎಲ್ಲರೂ ಇಲ್ಲೇ ಇದ್ದರೂ ನಮ್ಮ ನೆರವಿಗೆ ಬಂದಿಲ್ಲ. ಒಂದೊತ್ತಿನ ಊಟಕ್ಕೂ ಗತಿ ಇಲ್ಲದೆ ಪರದಾಡುತ್ತಿದ್ದೇವೆ ಎಂದು ಟಿವಿ9ಗೆ ಪತ್ನಿ ಶಶಿಕಲಾ ತಿಳಿಸಿದರು.

ಮಕ್ಕಳನ್ನು ತಬ್ಬಲಿ ಮಾಡಿದ ತಾಯಿ ಮಹಾಮಾರಿ ಕೊರೊನಾ ಇಬ್ಬರು ಮಕ್ಕಳನ್ನು ತಬ್ಬಲಿ ಮಾಡಿದೆ. 29 ವರ್ಷ ಲಕ್ಷ್ಮಿದೇವಿ ಎಂಬ ಮಹಿಳೆ ಕೊರೊನಾಗೆ ಬಲಿಯಾಗಿದ್ದಾರೆ. ಕಳೆದ ಒಂದು ವರ್ಷದ ಹಿಂದೆ ಅನಾರೋಗ್ಯದಿಂದ ಈಕೆಯ ಪತಿ ಸಾವನ್ನಪ್ಪಿದ್ದಾರೆ. ಕೊರೊನಾ ದೃಢಪಟ್ಟಾಗ ಕಳೆದ 15 ದಿನಗಳ ಹಿಂದೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದ ಕಾರಣ ಮಹಿಳೆ ಸಾವನ್ನಪ್ಪಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆ ಸಿಬ್ಬಂದಿ ರೋಗಿಯ ಬಳಿ ಮಾತನಾಡಲು ಫೋನ್ ಕೊಡುತ್ತಿರಲಿಲ್ಲ. ಕಾಲ್ ಮಾಡಿದ್ದರೆ ಕಟ್ ಮಾಡಿ ಮೊಬೈಲ್ನ ಸೈಡಿಗೆ ಇಡುತ್ತಿದ್ದರು. ಮಕ್ಕಳ ಮುಖ ಕೊನೆ ಭಾರೀ ನೋಡಬೇಕು ಅಂತ ಹೇಳಿದ್ದರೂ ತೋರಿಸಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಯುವತಿಯನ್ನು ಕೋಲಾರಕ್ಕೆ ಮದುವೆ ಮಾಡಿಕೊಡಲಾಗಿತ್ತು. ಗಂಡ ಸತ್ತ ನಂತರ ಚಿಕ್ಕಬಳ್ಳಾಪುರದ ತನ್ನ ತವರು ಮನೆಯಲ್ಲಿ ಇದ್ದರು. ಕೂಲಿ ಕೆಲಸ ಮಾಡಿ ಮಕ್ಕಳನ್ನ ಸಾಕುತ್ತಿದ್ದರು. ಆದರೆ ಇದೀಗ ಕೊರೊನಾ ಸೋಂಕಿಗೆ ಬಲಿಯಾಗಿ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಇದನ್ನೂ ಓದಿ

ಕೊವಿಡ್ 2ನೇ ಅಲೆಯಲ್ಲಿ ದೇಶದಲ್ಲಿ 646, ಕರ್ನಾಟಕದಲ್ಲಿ 9 ವೈದ್ಯರು ನಿಧನ

ಕೊವಿಡ್​ ಸಮಯದಲ್ಲಿ ಪ್ರಥಮ್​ ಕೆಲಸ ನೋಡಿ ಮಂಡ್ಯದಿಂದ ಫುಡ್​​ ಕಿಟ್​ ಕಳುಹಿಸಿಕೊಟ್ಟ ಶಾಸಕ ಪುಟ್ಟರಾಜು

(wife is sitting overnight in front of hospital for her husband dead body without paying the hospital bill in Bengaluru)

Published On - 5:10 pm, Sat, 5 June 21