ವಿಶ್ವ ಪರಿಸರ ದಿನಾಚರಣೆ: ಕೊವಿಡ್ ಕೇರ್ ಸೆಂಟರ್​ಗಳಿಗೆ ಸಸಿ ವಿತರಿಸಿದ ಧಾರವಾಡ ಅರಣ್ಯ ಇಲಾಖೆ

ಕೊರೊನಾದಿಂದ ಉಂಟಾದ ಆಮ್ಲಜನಕ ಕೊರತೆ ನೈಸರ್ಗಿಕವಾಗಿ ಆಮ್ಲಜನಕ ನೀಡುವ ಗಿಡ-ಮರಗಳ ಬಗ್ಗೆ ಕಾಳಜಿಯುಂಟುಮಾಡಿದೆ. ಇದನ್ನೇ ಗಮನದಲ್ಲಿಟ್ಟುಕೊಂಡು ಅರಣ್ಯ ಇಲಾಖೆ ಸಿಬ್ಬಂದಿ ನೈಸರ್ಗಿಕ ಆಮ್ಲಜನಕ ಸಾಂದ್ರಕಗಳಾಗಿರುವ ಗಿಡಗಳನ್ನು ಬೆಳೆಸಲು ಹೊಸ ಯೋಜನೆಯೊಂದನ್ನು ಹಾಕಿಕೊಂಡಿದ್ದಾರೆ.

ವಿಶ್ವ ಪರಿಸರ ದಿನಾಚರಣೆ: ಕೊವಿಡ್ ಕೇರ್ ಸೆಂಟರ್​ಗಳಿಗೆ ಸಸಿ ವಿತರಿಸಿದ ಧಾರವಾಡ ಅರಣ್ಯ ಇಲಾಖೆ
ಕೊವಿಡ್ ಕೇರ್ ಸೆಂಟರ್​ಗಳಿಗೆ ಸಸಿ ವಿತರಿಸಿದ ಧಾರವಾಡ ಅರಣ್ಯ ಇಲಾಖೆ
Follow us
TV9 Web
| Updated By: preethi shettigar

Updated on: Jun 05, 2021 | 5:31 PM

ಧಾರವಾಡ: ಕೊರೊನಾ ಎರಡನೇ ಅಲೆಯಿಂದ ದೇಶವೇ ತತ್ತರಿಸಿ ಹೋಗಿದೆ. ಮೊದಲನೇ ಅಲೆಯ ವೇಳೆ ಆಮ್ಲಜನಕದ ಸಮಸ್ಯೆ ಅಷ್ಟೊಂದು ಎದುರಾಗಿರಲಿಲ್ಲ. ಆದರೆ ಎರಡನೇ ಅಲೆಯಲ್ಲಿ ಆಮ್ಲಜನಕದ ಸಮಸ್ಯೆ ಹೆಚ್ಚಾಗಿ ಎಲ್ಲ ಕಡೆಗಳಲ್ಲೂ ಸೋಂಕಿತರು ಪರದಾಡುವಂತಾಯಿತು. ಇದೀಗ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಾ ಬಂದಿರುವ ಹಿನ್ನೆಲೆಯಲ್ಲಿ ಆಮ್ಲಜನಕದ ಕೊರತೆ ಕೂಡ ಕಡಿಮೆಯಾಗುತ್ತಾ ಹೋಗುತ್ತಿದೆ. ಈ ಎಲ್ಲ ಘಟನೆಗಳಿಂದಾಗಿ ಆಮ್ಲಜನಕದ ಅವಶ್ಯಕತೆ ಎಷ್ಟಿದೆ ಎನ್ನುವುದು ಎಲ್ಲರಿಗೂ ಮನವರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಧಾರವಾಡ ಅರಣ್ಯ ಇಲಾಖೆ ಅಧಿಕಾರಿಗಳು ನೈಸರ್ಗಿಕ ಆಮ್ಲಜನಕದ ಸಾಂದ್ರಕದ ಕಡೆಗೆ ದೃಷ್ಟಿ ಹರಿಸಿ, ಹೊಸದೊಂದು ಯೋಜನೆಯನ್ನು ಜಾರಿಗೆ ತಂದಿದ್ದಾರೆ.

ಏನಿದು ನೈಸರ್ಗಿಕ ಆಮ್ಲಜನಕ ಸಾಂದ್ರಕ? ಆಸ್ಪತ್ರೆಗಳಲ್ಲಿ ಆಮ್ಲಜನಕ ಕೊರತೆಯುಂಟಾಗಿ ಕೊರೊನಾ ಸೋಂಕಿತರು ಪರದಾಡುತ್ತಿದ್ದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಆಮ್ಲಜನಕ ಪೂರೈಸಲು ಆಮ್ಲಜನಕ ಸಾಂದ್ರಕಗಳನ್ನು ಬಳಸಲು ಶುರು ಮಾಡಲಾಯಿತು. ಬೇರೆ ಬೇರೆ ದೇಶಗಳಿಂದ ಈ ಸಾಂದ್ರಕಗಳನ್ನು ಖರೀದಿಸಲಾಯಿತು. ಇಂಥ ಸಾಂದ್ರಕಗಳನ್ನು ರೋಗಿಯ ಪಕ್ಕದಲ್ಲಿಯೇ ಇಟ್ಟು, ರೋಗಿಗೆ ಅವಶ್ಯಕತೆಗೆ ತಕ್ಕಷ್ಟು ಆಮ್ಲಜನಕವನ್ನು ಪೂರೈಸಲು ಅವಕಾಶ ಕಲ್ಪಿಸಲಾಯಿತು. ಇನ್ನು ಎಷ್ಟೋ ಜನ ಸೋಂಕಿತರು ಗುಣಮುಖರಾಗಿ ಮನೆಗೆ ಹೋದ ಬಳಿಕವೂ ಇಂಥ ಸಾಂದ್ರಕವನ್ನು ಮನೆಯಲ್ಲಿಯೇ ಇಟ್ಟುಕೊಂಡರು. ಈ ಘಟನೆಗಳ ಬಳಿಕ ಇದೀಗ ಎಲ್ಲರಿಗೂ ಆಮ್ಲಜನಕದ ಅವಶ್ಯಕತೆ ಬಗ್ಗೆ ಅರಿವು ಮೂಡಲಾರಂಭಿಸಿದೆ.

ಈ ಹಿನ್ನೆಲೆಯಲ್ಲಿ ನೈಸರ್ಗಿಕವಾಗಿ ಆಮ್ಲಜನಕ ನೀಡುವ ಗಿಡ-ಮರಗಳ ಬಗ್ಗೆ ಕಾಳಜಿಯುಂಟಾಗುತ್ತಿದೆ. ಇದನ್ನೇ ಗಮನದಲ್ಲಿಟ್ಟುಕೊಂಡು ಅರಣ್ಯ ಇಲಾಖೆ ಸಿಬ್ಬಂದಿ ನೈಸರ್ಗಿಕ ಆಮ್ಲಜನಕ ಸಾಂದ್ರಕಗಳಾಗಿರುವ ಗಿಡಗಳನ್ನು ಬೆಳೆಸಲು ಹೊಸ ಯೋಜನೆಯೊಂದನ್ನು ಹಾಕಿಕೊಂಡಿದ್ದಾರೆ.

ಕೊವಿಡ್ ಕೇರ್ ಸೆಂಟರ್​ಗಳಿಗೆ ಸಸಿಗಳು ವಿವಿಧ ಕೊವಿಡ್ ಕೇರ್ ಸೆಂಟರ್​ಗಳಿಗೆ ಹಾಗೂ ಆಸ್ಪತ್ರೆಗಳಿಗೆ ಸಸಿಗಳನ್ನು ಅರಣ್ಯ ಇಲಾಖೆ ವತಿಯಿಂದ ನೀಡಲಾಗುತ್ತಿದೆ. ಆಸ್ಪತ್ರೆ ಹಾಗೂ ಕೊವಿಡ್ ಕೇರ್ ಸೆಂಟರ್​ಗಳಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗುತ್ತಿರೋರಿಗೆ ಈ ಸಸಿಗಳನ್ನು ನೀಡಲಾಗುತ್ತಿದೆ. ಸೋಂಕಿತರು ಗುಣಮುಖರಾಗಿ ಮನೆಗೆ ಹೋಗುವಾಗ ಈ ಸಸಿಗಳನ್ನು ಒಯ್ದು, ಅವುಗಳನ್ನು ನೆಟ್ಟು ಪೋಷಿಸಬೇಕಿದೆ. ಈ ವೇಳೆಯಲ್ಲಿ ಹೇರಳವಾಗಿ ಆಮ್ಲಜನಕ ನೀಡುವ ಸಸ್ಯಗಳನ್ನೇ ನೀಡಲಾಗುತ್ತಿದೆ.

ಹುಬ್ಬಳ್ಳಿಯ ನವನಗರದ ಕ್ಯಾನ್ಸರ್ ಆಸ್ಪತ್ರೆ, ಅಂಚಟಗೇರಿಯ ಆರೋಗ್ಯ ಕೇಂದ್ರ, ಕಲಘಟಗಿ ತಾಲೂಕಾ ಆಸ್ಪತ್ರೆಗಳಿಗೆ ಈಗಾಗಲೇ ಸಸಿಗಳನ್ನು ಕಳಿಸಿಕೊಡಲಾಗಿದೆ. ಜಿಲ್ಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ನೆಡಲು ಒಟ್ಟು 1.33 ಲಕ್ಷ ಸಸಿಗಳನ್ನು ಬೆಳೆಸಲಾಗಿದೆ. ಇವುಗಳಲ್ಲಿ 1.30 ಲಕ್ಷ ಸಸಿಗಳನ್ನು ರೈತರಿಗೆ, ಆಸಕ್ತರಿಗೆ ಹಾಗೂ ಕೊವಿಡ್ ಸೋಂಕಿತರಿಗೆ ನೀಡಲು ತೀರ್ಮಾನಿಸಲಾಗಿದೆ. ನೆಟ್ಟ ಸಸಿ ಬೆಳವಣಿಗೆ ಕಾಣದಿದ್ದಲ್ಲಿ, ಆ ಜಾಗದಲ್ಲಿ ಮತ್ತೊಂದು ಸಸಿ ನೆಡಲು ಉಳಿದ ಸಸಿಗಳನ್ನು ಇಟ್ಟುಕೊಳ್ಳಲು ನಿರ್ಧರಿಸಲಾಗಿದೆ.

ಈ ಬಾರಿ ವಿಶ್ವ ಪರಿಸರ ದಿನಕ್ಕೆ ಆಮ್ಲಜನಕ ಪಡೆಯಲು ಗಿಡ ಬೆಳೆಸಿ, ಆರೋಗ್ಯ ಕಾಪಾಡಿಕೊಳ್ಳಿ ಎನ್ನುವ ಧ್ಯೇಯ ವಾಕ್ಯದೊಂದಿಗೆ ಸಸಿ ನೆಡುವ ಅಭಿಯಾನವನ್ನು ಆರಂಭಿಸಲಾಗಿದೆ. ಸಾಮಾನ್ಯವಾಗಿ ಒಬ್ಬ ಮನುಷ್ಯ ಒಂದು ದಿನಕ್ಕೆ 3 ಸಿಲೆಂಡರ್​ನಷ್ಟು ಆಮ್ಲಜನಕವನ್ನು ಬಳಸುತ್ತಾನೆ. ಒಂದು ಸಿಲೆಂಡರ್ ಆಮ್ಲಜನಕಕ್ಕೆ 700 ರೂಪಾಯಿ ದರ ಇದೆ. ಒಂದು ದಿನಕ್ಕೆ ಒಬ್ಬ ವ್ಯಕ್ತಿ 2100 ರೂಪಾಯಿಯಷ್ಟು ಆಮ್ಲಜನಕವನ್ನು ಬಳಸುತ್ತಾನೆ. ಹೀಗಾಗಿ ಮರಗಳೇ ಇಲ್ಲದೇ ಕೃತಕ ಆಮ್ಲಜನಕ ಸೇವನೆಯನ್ನೇ ಅವಲಂಬಿಸಿದರೆ ವರ್ಷಕ್ಕೆ ಪ್ರತಿ ವ್ಯಕ್ತಿಗೆ 7.66 ಲಕ್ಷ ರೂಪಾಯಿ ಹಣ ಖರ್ಚಾಗಲಿದೆ ಎಂದು ಧಾರವಾಡದ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ್ ತಿಳಿಸಿದ್ದಾರೆ.

ಇವೆಲ್ಲವನ್ನು ತಪ್ಪಿಸಬೇಕೆಂದರೆ ಹೆಚ್ಚು ಗಿಡ-ಮರಗಳನ್ನು ಬೆಳೆಸಬೇಕು. ತಾವು ನೆಟ್ಟ ಗಿಡದೊಂದಿಗೆ ಸೆಲ್ಫಿ ತೆಗೆದುಕೊಂಡು ಹಂಚಿಕೊಳ್ಳುವ ಮೂಲಕ ತಮ್ಮ ಹಾಗೂ ಗಿಡದ ಸಂಬಂಧವನ್ನು ಗಟ್ಟಿಗೊಳಿಸಬೇಕು ಎನ್ನುವ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್, ಪ್ರತಿಯೊಬ್ಬರೂ ಒಂದು ಸಸಿ ನೆಡುವ ಮೂಲಕ ವಾತಾವರಣದಲ್ಲಿ ಪ್ರಾಣವಾಯುವನ್ನು ಹೆಚ್ಚಿಸಿ, ಹಿಂದೆ ಆಗಿರುವ ಲೋಪದೋಷಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:

ಕೊವಿಡ್​ನಿಂದ ಗುಣಮುಖರಾದವರಿಂದ ಗಿಡ ನೆಟ್ಟು ಪರಿಸರ ಸಂರಕ್ಷಣೆ ಶಪಥ; ವಿಶ್ವ ಪರಿಸರ ದಿನದಂದು ಮಾದರಿ ಕಾರ್ಯ

Indian Railway: ವಿಶ್ವದಲ್ಲೇ ಬೃಹತ್ ಪರಿಸರ ಸ್ನೇಹಿ ರೈಲ್ವೆ ವ್ಯವಸ್ಥೆಯಾಗಿ ಮಾರ್ಪಡಲು ಭಾರತೀಯ ರೈಲ್ವೆಯ ಸಿದ್ಧತೆ

ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ