AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್‌ಗೆ ಔಷಧ ಕೊರತೆ ಇಲ್ಲ ಎಂದ ಆರೋಗ್ಯ ಸಚಿವರು; ಶಿವಮೊಗ್ಗದಲ್ಲಿ ಔಷಧ ಕೊರತೆ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಗಳು!

ರಾಜ್ಯಕ್ಕೆ 9 ಸಾವಿರ ವಯಲ್ ಇಂಜೆಕ್ಷನ್ ಹಂಚಿಕೆಯಾಗಿದೆ. ಖಾಸಗಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಇಂಜೆಕ್ಷನ್ ಲಭ್ಯವಿದೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿಕೆ ನೀಡಿದ್ದಾರೆ.

ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್‌ಗೆ ಔಷಧ ಕೊರತೆ ಇಲ್ಲ ಎಂದ ಆರೋಗ್ಯ ಸಚಿವರು; ಶಿವಮೊಗ್ಗದಲ್ಲಿ ಔಷಧ ಕೊರತೆ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಗಳು!
ಸಾಂಕೇತಿಕ ಚಿತ್ರ
TV9 Web
| Edited By: |

Updated on:Jun 05, 2021 | 4:31 PM

Share

ಶಿವಮೊಗ್ಗ: ಜಿಲ್ಲೆಯಲ್ಲಿ ಬ್ಲ್ಯಾಕ್​ ಫಂಗಸ್​ ಚಿಕಿತ್ಸೆಗೆ ಔಷಧ ಕೊರತೆ ಉಂಟಾಗಿದೆ ಎಂಬ ವಿಚಾರವನ್ನು ಅಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಗಮನಕ್ಕೆ ತಂದಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ 41 ಬ್ಲ್ಯಾಕ್ ಫಂಗಸ್​ ಪ್ರಕರಣಗಳಿವೆ. ಪ್ರತಿಯೊಬ್ಬ ರೋಗಿಗೆ 4 ವಯಲ್​ ಇಂಜೆಕ್ಷನ್​ ಅಗತ್ಯವಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಇಂದು (ಜೂನ್ 5) ಕೆ.ಎಸ್. ಈಶ್ವರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳು ಹೀಗೆ ತಿಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಈ ವೇಳೆ ಅಧಿಕಾರಿಗಳು ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಬೇಕಾಗಿರುವ ಔಷಧ ಕೊರತೆ ಬಗ್ಗೆ ಹೇಳಿದ್ದಾರೆ. ಸದ್ಯ 1 ವಯಲ್ ಇಂಜೆಕ್ಷನ್​ ಜೊತೆ ಮಾತ್ರೆ ನೀಡಲಾಗ್ತಿದೆ. 41 ಬ್ಲ್ಯಾಕ್ ಫಂಗಸ್​ ರೋಗಿಗಳ ಪೈಕಿ 10 ಜನ ಡಿಸ್ಚಾರ್ಜ್ ಆಗಿದ್ದಾರೆ. ಬ್ಲ್ಯಾಕ್ ಫಂಗಸ್ ಸೋಂಕಿತ 26 ರೋಗಿಗಳಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. 26 ರೋಗಿಗಳ ಪೈಕಿ 11 ರೋಗಿಗಳಿಗೆ ಸರ್ಜರಿ ಮಾಡಲಾಗಿದೆ. ಬ್ಲ್ಯಾಕ್ ಫಂಗಸ್​ನಿಂದ ಐವರು ರೋಗಿಗಳು ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಬೆಂಗಳೂರು: ಬ್ಲ್ಯಾಕ್ ಫಂಗಸ್‌ಗೆ ಔಷಧ ಕೊರತೆ ಇಲ್ಲ ಎಂದ ಆರೋಗ್ಯ ಸಚಿವ ಸುಧಾಕರ್ ಮತ್ತೊಂದೆಡೆ, ರಾಜ್ಯ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಕರ್ನಾಟಕದಲ್ಲಿ ಬ್ಲ್ಯಾಕ್ ಫಂಗಸ್​ಗೆ ಔಷಧ ಕೊರತೆ ಇಲ್ಲ ಎಂದು ಹೇಳಿಕೆ ನೀಡಿದ್ಧಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್‌ಗೆ ಔಷಧ ಕೊರತೆ ಇಲ್ಲ ಎಂದು ತಿಳಿಸಿದ್ದಾರೆ.

ರಾಜ್ಯಕ್ಕೆ 9 ಸಾವಿರ ವಯಲ್ ಇಂಜೆಕ್ಷನ್ ಹಂಚಿಕೆಯಾಗಿದೆ. ಖಾಸಗಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಇಂಜೆಕ್ಷನ್ ಲಭ್ಯವಿದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದರ ನಿಗದಿ ಮಾಡುತ್ತೇವೆ. ಮುಂದಿನ ವಾರ ಚಿಕಿತ್ಸೆಗೆ ದರ ನಿಗದಿ ಮಾಡಲಾಗುವುದು ಎಂದು ಸುಧಾಕರ್ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: Black Fungus: ಕರ್ನಾಟಕಕ್ಕೆ 9750 ವಯಲ್ಸ್ ಬ್ಲ್ಯಾಕ್ ಫಂಗಸ್ ಔಷಧ ಹಂಚಿಕೆ: ಸದಾನಂದ ಗೌಡ

ಭಾರತದಲ್ಲಿಂದು 1.20 ಹೊಸ ಕೊರೊನಾ ಸೋಂಕಿನ ಕೇಸ್​​ಗಳು ದಾಖಲು; ಚೇತರಿಕೆಯ ಪ್ರಮಾಣ ಶೇ. 93.08ಕ್ಕೆ ಏರಿಕೆ

Published On - 4:27 pm, Sat, 5 June 21

Follow Us
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ