ರೆಮ್​ಡೆಸಿವಿರ್ ಕಾಳಸಂತೆಕೋರರಿಗೆ ಬಿಸಿಮುಟ್ಟಿಸಿದ ನ್ಯಾಯಾಧೀಶೆ; 11 ಆರೋಪಿಗಳ ಜಾಮೀನು ಅರ್ಜಿ ವಜಾ

remdesivir: ರೆಮ್​ಡೆಸಿವಿರ್ ಕಾಳಸಂತೆಕೋರರಿಗೆ ಬಿಸಿಮುಟ್ಟಿಸಿದ ನ್ಯಾಯಾಧೀಶೆ. ಎಲ್ಲಾ 11 ಆರೋಪಿಗಳು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಇಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಕಲ್ಪನಾ ಕುಲಕರ್ಣಿ ಅವರು ಆರೋಪಿಗಳಿಗೆ ಜಾಮೀನು ನಿರಾಕರಿಸಿದರು. ಅಷ್ಟೂ ಆರೋಪಿಗಳ ಜೈಲುವಾಸ ಮುಂದುವರಿದಿದೆ.

ರೆಮ್​ಡೆಸಿವಿರ್ ಕಾಳಸಂತೆಕೋರರಿಗೆ ಬಿಸಿಮುಟ್ಟಿಸಿದ ನ್ಯಾಯಾಧೀಶೆ; 11 ಆರೋಪಿಗಳ ಜಾಮೀನು ಅರ್ಜಿ ವಜಾ
ರೆಮ್​ಡೆಸಿವಿರ್ ಕಾಳಸಂತೆಕೋರರಿಗೆ ಬಿಸಿಮುಟ್ಟಿಸಿದ ನ್ಯಾಯಾಧೀಶೆ; 11 ಆರೋಪಿಗಳ ಜಾಮೀನು ಅರ್ಜಿ ವಜಾ
Follow us
ಸಾಧು ಶ್ರೀನಾಥ್​
|

Updated on: Jun 05, 2021 | 6:13 PM

ಬಾಗಲಕೋಟೆ: ಕೊರೊನಾ ಸೋಂಕಿಗೆ ಕಡಿವಾಣ ಹಾಕುವಲ್ಲಿ ಪರಿಣಾಮಕಾರಿ ಔಷಧ ಎನಿಸಿರುವ ರೆಮ್​ಡೆಸಿವಿರ್ ಇಂಜೆಕ್ಷನ್​ಅನ್ನು ಕದ್ದುಮುಚ್ಚಿ ದುಬಾರಿ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದ ಕಾಳಸಂತೆಕೋರರಿಗೆ ನ್ಯಾಯಾಲಯ ಬಿಸಿಮುಟ್ಟಿಸಿದೆ. ಬಾಗಲಕೋಟೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯವು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ 11 ಆರೋಪಿಗಳ ಅರ್ಜಿಗಳನ್ನು ವಜಾಗೊಳಿಸಿ, ಆದೇಶಿಸಿದೆ. ಇದು ಇತರೆ ಕಾಳಸಂತೆಕೋರರಿಗೂ ಎಚ್ಚರಿಕೆಯ ಪಾಠವಾಗಿದೆ.

ಮೇ 3ರಂದು ಬಾಗಲಕೋಟೆಯಲ್ಲಿ ಸಿಇಎನ್​ ಠಾಣೆ ಪೊಲೀಸರು ಕೋವಿಡ್ ಆಸ್ಪತ್ರೆ ಸೇರಿದಂತೆ ನಗರದ ವಿವಿಧ ಖಾಸಗಿ ಆಸ್ಪತ್ರೆಗಳ ಮೇಲೆ ದಾಳಿ ನಡೆಸಿದ್ದರು. ವಿಪತ್ತು ನಿರ್ವಹಣೆ ಕಾಯ್ದೆ-2005 ಮತ್ತು ಭಾರತೀಯ ದಂಡ ಸಂಹಿತೆ ಕಾಯ್ದೆ ಅನ್ವಯ ಕಾನೂನು ಕ್ರಮ ಜರುಗಿಸಿದ್ದರು. ಜಾಲದಲ್ಲಿ ಭಾಗಿಯಾಗಿದ್ದ ವಿವಿಧ ಆಸ್ಪತ್ರೆಗಳ ಸಿಬ್ಬಂದಿ ಸೇರಿದಂತೆ 11 ಆರೋಪಿಗಳನ್ನು ಬಂಧಿಸಿದ್ದರು. ತಿಮ್ಮಣ್ಣ ಗಡದನ್ನವರ, ಬಾಲಚಂದ್ರ ಭಜಂತ್ರಿ, ಮಂಜುನಾಥ ಗಾಣಿಗೇರ, ಶ್ರೀಕಾಂತ ಲಮಾಣಿ, ಗಣೇಶ್ ನಾಟಿಕಾರ್, ಪ್ರವೀಣ ಕೊಳ್ಳಿ, ಮಹಾಂತೇಶ್ ಬಿರಾದಾರ, ವಿಠ್ಠಲ ಚಲವಾದಿ, ರಂಗಪ್ಪ ದಿನ್ನಿ, ರಾಜು ಗುಡಿಮನಿ, ಭೀಮಪ್ಪ ಘಂಟಿ ಜಾಲದಲ್ಲಿ ಸಿಲುಕಿದ್ದ ಆರೋಪಿಗಳು. ಆರೋಪಿಗಳಿಂದ ಪೊಲೀಸರು 14 ರೆಮ್​ಡೆಸಿವಿರ್​​ ಇಂಜೆಕ್ಷನ್​ಗಳನ್ನು ಜಪ್ತಿ ಮಾಡಿದ್ದರು. ಜೊತೆಗೆ, ಅಷ್ಟೂ ಮಂದಿಯನ್ನು ಜೈಲಿಗಟ್ಟಿದ್ದರು.

remdesivir injection black market in bagalkot 11 accused bail plea rejected by judge kalpana kulkarni 1

ರೆಮ್​ಡೆಸಿವಿರ್ ಕಾಳಸಂತೆ: ಬಾಗಲಕೋಟೆಯಲ್ಲಿ ಸಿಇಎನ್​ ಠಾಣೆ ಪೊಲೀಸರು 11 ಆರೋಪಿಗಳನ್ನು ಬಂಧಿಸಿದ್ದರು

ಎಲ್ಲಾ 11 ಆರೋಪಿಗಳು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಇಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಕಲ್ಪನಾ ಕುಲಕರ್ಣಿ ಅವರು ಆರೋಪಿಗಳಿಗೆ ಜಾಮೀನು ನಿರಾಕರಿಸಿದರು. ಅಷ್ಟೂ ಆರೋಪಿಗಳ ಜೈಲುವಾಸ ಮುಂದುವರಿದಿದೆ.

(remdesivir injection black market in bagalkot 11 accused bail plea rejected by judge kalpana kulkarni)

ಬಾಗಲಕೋಟೆಯಲ್ಲೂ ಹೆಚ್ಚಿದ ರೆಮ್​ಡೆಸಿವಿರ್ ಬೇಡಿಕೆ; ಕೊರೊನಾಗಿಂತಲೂ ಇಂಜೆಕ್ಷನ್ ಸಿಗುತಿಲ್ಲ ಎನ್ನುವ ಆತಂಕವೇ ಹೆಚ್ಚು