Indian Railway: ವಿಶ್ವದಲ್ಲೇ ಬೃಹತ್ ಪರಿಸರ ಸ್ನೇಹಿ ರೈಲ್ವೆ ವ್ಯವಸ್ಥೆಯಾಗಿ ಮಾರ್ಪಡಲು ಭಾರತೀಯ ರೈಲ್ವೆಯ ಸಿದ್ಧತೆ

ಕೊವಿಡ್​ನಂತಹ ದುರಿತ ಕಾಲದಲ್ಲಿ ಆಹಾರ, ತರಕಾರಿ, ಹಣ್ಣು ಮುಂತಾದ ಜೀವನಾವಶ್ಯಕ ವಸ್ತುಗಳ ಜತೆ ,ಮೆಡಿಕಲ್ ಆಕ್ಸಿಜನ್ ಸರೆಬರಾಜನ್ನು ಸಹ ಭಾರತೀಯ ರೈಲ್ವೆ ಸಾಗಣೆ ಮಾಡಿದೆ. ಏಪ್ರಿಲ್ 2021ರಿಂದಮೇ 2021ರವರೆಗೆ ಭಾರತೀಯ ರೈಲ್ವೆ 73 ಲಕ್ಷ ಟನ್​ಗಳಷ್ಟು ಆಹಾರ ವಸ್ತುಗಳನ್ನು ಭಾರತೀಯ ರೈಲ್ವೆ ರವಾನಿಸಿದೆ.

Indian Railway: ವಿಶ್ವದಲ್ಲೇ ಬೃಹತ್ ಪರಿಸರ ಸ್ನೇಹಿ ರೈಲ್ವೆ ವ್ಯವಸ್ಥೆಯಾಗಿ ಮಾರ್ಪಡಲು ಭಾರತೀಯ ರೈಲ್ವೆಯ ಸಿದ್ಧತೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: guruganesh bhat

Updated on:Jun 04, 2021 | 7:52 PM

ಭಾರತೀಯ ರೈಲ್ವೇ ಇಲಾಖೆಯು ಪರಿಸರ ಮತ್ತು ಪ್ರಯಾಣಿಕ ಸ್ನೇಹಿ, ಕಡಿಮೆ ವೆಚ್ಚದಾಯಕದಂತಹ ಹಲವು ಉಪಕ್ರಮಗಳನ್ನು ಕೈಗೊಳ್ಳುವತ್ತ ಹಲವು ಪ್ರಮುಖ ಕ್ರಮಗಳನ್ನು ಕೈಗೊಂಡಿದೆ. ಬೃಹತ್ ವಿದ್ಯುದೀಕರಣ, ನೀರು ಮತ್ತು ಕಾಗದ ಸಂರಕ್ಷಣೆಯಿಂದ ಹಿಡಿದು ರೈಲ್ವೆ ಹಳಿಗಳಲ್ಲಿ ಪ್ರಾಣಿಗಳು ಗಾಯಗೊಳ್ಳದಂತೆ ಉಳಿಸುವ ಯೋಜನೆಗಳ ಮೂಲಕ ಇನ್ನಷ್ಟು ಪರಿಸರ ಸ್ನೇಹಿ ಕ್ರಮಗಳನ್ನು ಭಾರತೀಯ ರೈಲ್ವೆ ಕೈಗೊಳ್ಳುತ್ತಿದೆ. ಈ ಮೂಲಕ ವಿಶ್ವದ ಅತ್ಯಂತ ಪರಿಸರ ಸ್ನೇಹಿ ರೈಲ್ವೆ ವ್ಯವಸ್ಥೆಯನ್ನಾಗಿ ರೂಪಿಸಲು ಭಾರತೀಯ ರೈಲ್ವೆ ಯೋಜನೆ ರೂಪಿಸಿದೆ.

ರೈಲ್ವೆ ವಿದ್ಯುದ್ದೀಕರಣ ಕೈಗೊಂಡಿರುವುದರಿಂದ ಮಾಲಿನ್ಯವು 2014 ರ ನಂತರ ಸುಮಾರು ಹತ್ತು ಪಟ್ಟು ಕಡಿಮೆಯಾಗಿದೆ. ರೈಲ್ವೆ ಇಲಾಖೆಯು 2023ರವರೆಗೆ ಬ್ರಾಡ್ ಗೇಜ್​ ಮಾರ್ಗದಲ್ಲಿ ಶೇ 100ರಷ್ಟು ವಿದ್ಯುದೀಕರಣವನ್ನು ಸಾಧಿಸುವ ಮೂಲಕ ಆರ್ಥಿಕ ಉಳಿತಾಯವನ್ನು ಸಾಧಿಸುವ ಯೋಜನೆಯನ್ನು ಸಹ ರೈಲ್ವೆ ಇಲಾಖೆ ಹಾಕಿಕೊಂಡಿದೆ. ಬ್ರಾಡ್ ಗೇಜ್ ಮಾರ್ಗಗಳಲ್ಲಿ ಹೆಡ್-ಆನ್-ಜನರೇಷನ್ ವ್ಯವಸ್ಥೆಗಳು, ಜೈವಿಕ ಶೌಚಾಲಯಗಳು ಮತ್ತು ಎಲ್ಇಡಿ ದೀಪಗಳನ್ನು ಇನ್ನಷ್ಟು ಹೆಚ್ಚಿಸಲು ರೈಲ್ವೆ ಇಲಾಖೆ ಯೋಜಿಸುತ್ತಿದೆ.

ಸರಕು ಸಾರಿಗೆ ರೈಲುಗಳು ಕಡಿಮೆ ಇಂಗಾಲವನ್ನು ಹೊರಸೂಸುವ ರೀತಿ ಹಲವು ಬದಲಾವಣೆಗಳನ್ನು ರೈಲ್ವೆ ಇಲಾಖೆ ತರುತ್ತಿದೆ. ಈ ಮೂಲಕ ಸರಕು ರೈಲುಗಳು ಹಸಿರು ಸಾರಿಗೆ ಜಾಲವಾಗಿ ಮಾರ್ಪಡಲಿದ್ದು, ಹೆಚ್ಚು ಶಕ್ತಿ-ಸಮರ್ಥ ಮತ್ತು ಇಂಗಾಲ ಸ್ನೇಹಿ ತಂತ್ರಜ್ಞಾನಗಳನ್ನು ಹೊಂದಲು ರೈಲ್ವೆ ಇಲಾಖೆ ಬದಲಾವಣೆಗಳನ್ನು ತರುತ್ತಿದೆ.

ರಸ್ತೆ ಸಾರಿಗೆಗಿಂತ ಅತ್ಯಂತ ಕಡಿಮೆ ವೆಚ್ಚದಲ್ಲಿ ಸರಕು ಸೇವೆ ಸಾಗಣೆ ಮಾಡಬಲ್ಲ ವ್ಯವಸ್ಥೆಯನ್ನು ರೈಲ್ವೆ ಇಲಾಖೆ ಅಭಿವೃದ್ಧಿಪಡಿಸಿದೆ. ಕೊವಿಡ್​ನಂತಹ ದುರಿತ ಕಾಲದಲ್ಲಿ ಆಹಾರ, ತರಕಾರಿ, ಹಣ್ಣು ಮುಂತಾದ ಜೀವನಾವಶ್ಯಕ ವಸ್ತುಗಳ ಜತೆ ,ಮೆಡಿಕಲ್ ಆಕ್ಸಿಜನ್ ಸರೆಬರಾಜನ್ನು ಸಹ ಭಾರತೀಯ ರೈಲ್ವೆ ಸಾಗಣೆ ಮಾಡಿದೆ. ಏಪ್ರಿಲ್ 2021ರಿಂದಮೇ 2021ರವರೆಗೆ ಭಾರತೀಯ ರೈಲ್ವೆ 73 ಲಕ್ಷ ಟನ್​ಗಳಷ್ಟು ಆಹಾರ ವಸ್ತುಗಳನ್ನು ಭಾರತೀಯ ರೈಲ್ವೆ ರವಾನಿಸಿದೆ. 241 ಮೆಡಿಕಲ್ ಆಕ್ಸಿಜನ್​ ರೈಲುಗಳನ್ನು ಓಡಿಸಿದೆ. 922 ಟ್ಯಾಂಕರ್​ಗಳನ್ನು ಅಗತ್ಯವಿರುವ ಸ್ಥಳಗಳಿಗೆ ರವಾನಿಸಿದೆ. ಒಟ್ಟು 15,046 ಟನ್​ಗಳಷ್ಟು ಮೆಡಿಕಲ್ ಆಕ್ಸಿಜನ್​ಗಳನ್ನು ರವಾನಿಸಿದೆ.

ಅಷ್ಟೇ ಅಲ್ಲದೇ, ರೈಲುಗಳನ್ನು ಪರಿಸರ ಸ್ನೇಹಿಯನ್ನಾಗಿ ರೂಪಿಸಲೂ ಇಲಾಖೆ ಶ್ರಮಿಸುತ್ತಿದೆ. ಇದನ್ನು ಸಾಧಿಸಲು 39 ವರ್ಕ್​ಶಾಪ್​ಗಳು, 7 ಉತ್ಪಾದನಾ ಘಟಕಗಳು, 8 ಸ್ಥಳೀಯ ಘಟಕಗಳು, ಗ್ರೀನ್​ಗೋ ಸರ್ಟಿಫಿಕೇಟ್ ಪಡೆದುಕೊಂಡಿವೆ.

ಇದಲ್ಲದೇ, ಕಳೆದ ಎರಡು ವರ್ಷಗಳಲ್ಲಿ 600 ಕ್ಕೂ ಹೆಚ್ಚು ರೈಲ್ವೆ ನಿಲ್ದಾಣಗಳ ಪರಿಸರ ನಿರ್ವಹಣಾ ವ್ಯವಸ್ಥೆಯನ್ನು ಐಎಸ್‌ಒ 14001 ಕ್ಕೆ ಪ್ರಮಾಣೀಕರಿಸಲಾಗಿದೆ. ಜತೆಗೆ ಇನ್ನೂ ಹೆಚ್ಚಿನ ಐಎಸ್​ಒ ಪ್ರಮಾಣೀಕರಣಕ್ಕಾಗಿ ಒಟ್ಟು 718 ನಿಲ್ದಾಣಗಳನ್ನು ಗುರುತಿಸಲಾಗಿದೆ.

ಹವಾಮಾನ ಬದಲಾವಣೆಯ ಕುರಿತಾದ ಪ್ಯಾರಿಸ್ ಒಪ್ಪಂದ, ಯುನೈಟೆಡ್ ನೇಶನ್​ನ ಸುಸ್ಥಿರ ಅಭಿವೃದ್ಧಿ ಗುರಿಗಳು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಯೋಜನೆಗಳಂತಹ ಸರ್ಕಾರದ ಗುರಿಗಳನ್ನು ಸಾಧಿಸಲು ರೈಲ್ವೆ ಇಲಾಖೆ ಪ್ರಯತ್ನಿಸುತ್ತಿದೆ. ಸಾವಿರಾರು ಎಂಜಿನಿಯರ್​ಗಳು, ತಂತ್ರಜ್ಞರು ಮತ್ತು ಇಲಾಖೆಯ ಎಲ್ಲ ವಿಭಾಗದ ಸಿಬ್ಬಂದಿ ಭಾರತೀಯ ರೈಲ್ವೆಯನ್ನು ಇನ್ನಷ್ಟು ಪರಿಸರ ಮತ್ತು ಪ್ರಯಾಣಿಕ ಸ್ನೇಹಿಯನ್ನಾಗಿ ಮಾರ್ಪಡಿಸಲು ಶ್ರಮಿಸುತ್ತಿದ್ದಾರೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಇದನ್ನೂ ಓದಿ: Kerala budget: ಕೇರಳ ಬಜೆಟ್​ನಲ್ಲಿ ₹20,000 ಕೋಟಿ ಕೊವಿಡ್ ಪ್ಯಾಕೇಜ್ ಘೋಷಿಸಿದ ವಿತ್ತ ಸಚಿವ ಬಾಲಗೋಪಾಲ್

ಕೊವಿಡ್ ನಿರ್ವಹಣೆಗೆ ಪ್ರತಿ ಗ್ರಾಮ ಪಂಚಾಯತ್​ಗೂ 50 ಸಾವಿರ ಅನುದಾನ ಬಿಡುಗಡೆ: ಸಿಎಂ ಯಡಿಯೂರಪ್ಪ

(Indian Railway in the way of largest green railways in the world)

Published On - 7:48 pm, Fri, 4 June 21

ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ