ಕೊವಿಡ್ 2ನೇ ಅಲೆಯಲ್ಲಿ ದೇಶದಲ್ಲಿ 646, ಕರ್ನಾಟಕದಲ್ಲಿ 9 ವೈದ್ಯರು ನಿಧನ

Covid 2nd Wave: ರಾಜಸ್ಥಾನ 43, ಜಾರ್ಖಂಡ 39, ಗುಜರಾತ್ 37, ಆಂಧ್ರ ಪ್ರದೇಶ 35, ತೆಲಂಗಾಣ 34, ಪಶ್ಚಿಮ ಬಂಗಾಳ 30 ವೈದ್ಯರು ಮೃತಪಟ್ಟಿದ್ದಾರೆ

ಕೊವಿಡ್ 2ನೇ ಅಲೆಯಲ್ಲಿ ದೇಶದಲ್ಲಿ 646, ಕರ್ನಾಟಕದಲ್ಲಿ 9 ವೈದ್ಯರು ನಿಧನ
ಸಾಂಕೇತಿಕ ಚಿತ್ರ
Follow us
TV9 Web
| Updated By: guruganesh bhat

Updated on: Jun 05, 2021 | 5:01 PM

ದೆಹಲಿ: ಕೊವಿಡ್ 2ನೇ ಅಲೆಯಲ್ಲಿ ಜೂನ್ 5ರವರೆಗೆ ಕರ್ನಾಟಕ 9 ವೈದ್ಯರೂ ಸೇರಿ ದೇಶಾದ್ಯಂತ 646 ವೈದ್ಯರು ನಿಧನರಾಗಿದ್ದಾರೆ ಎಂದು ಭಾರತೀಯ ವೈದ್ಯಕೀಯ ಮಂಡಳಿ (ಐಎಂಎ) ಮಾಹಿತಿ ನೀಡಿದೆ. ಕೊವಿಡ್ 2ನೇ ಅಲೆಯಲ್ಲಿ ಕೊವಿಡ್​ಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅತಿ ಹೆಚ್ಚು ವೈದ್ಯರು ನಿಧನರಾಗಿದ್ದು, 109 ವೈದ್ಯರು ಮೃತಪಟ್ಟಿದ್ದಾರೆ. ಬಿಹಾರ 97, ಉತ್ತರ ಪ್ರದೇಶದಲ್ಲಿ 79 ವೈದ್ಯರು ಕೊವಿಡ್​ 2ನೇ ಅಲೆಯಿಂದ ಮೃತಪಟ್ಟಿದ್ದಾರೆ.

ದೇಶದ ಇತರ ವಿವಿಧ ರಾಜ್ಯಗಳಲ್ಲಿ ಕೊವಿಡ್ 2ನೇ ಅಲೆಯಿಂದ ಮೃತಪಟ್ಟಿರುವ ವೈದ್ಯರ ಅಂಕಿ ಅಂಶವನ್ನೂ ಹಂಚಿಕೊಂಡಿರುವ ಭಾರತೀಯ ವೈದ್ಯಕೀಯ ಮಂಡಳಿ ರಾಜಸ್ಥಾನ 43, ಜಾರ್ಖಂಡ 39, ಗುಜರಾತ್ 37, ಆಂಧ್ರ ಪ್ರದೇಶ 35, ತೆಲಂಗಾಣ 34, ಪಶ್ಚಿಮ ಬಂಗಾಳ 30 ವೈದ್ಯರು ಮೃತಪಟ್ಟಿದ್ದಾರೆ. ಕೊವಿಡ್ ಮೊದಲ ಅಲೆಯಲ್ಲಿ 748 ವೈದ್ಯರು ದೇಶಾದ್ಯಂತ ಮೃತಪಟ್ಟಿದ್ದರು.

ದೇಶದಲ್ಲಿ ಕೊವಿಡ್ ಪರಿಸ್ಥಿತಿ ’ಭಾರತದಲ್ಲಿ ಒಂದು ದಿನದಲ್ಲಿ ಪತ್ತೆಯಾಗುವ ಕೊರೊನಾ ಸೋಂಕಿನ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗುತ್ತಿದೆ. ಆದರೆ ಸೋಂಕಿನಿಂದ ಸಾವನ್ನಪ್ಪುವವರ ಸಂಖ್ಯೆಯಲ್ಲಿ ಕಸಿಮೆಯಾಗುತ್ತಿಲ್ಲ. ಕಳೆದ 24ಗಂಟೆಯಲ್ಲಿ 1,20,529 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 3380 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಹಾಗೇ ಒಂದು ದಿನದಲ್ಲಿ 1,97,894 ಮಂದಿ ಚೇತರಿಸಿಕೊಂಡು ಡಿಸ್​ಚಾರ್ಜ್​ ಆಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಭಾರತದಲ್ಲಿ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 2,86,94,879ಕ್ಕೆ ಏರಿಕೆಯಾಗಿದ್ದು, ಇದುವರೆಗೆ 3,44,082 ಮಂದಿ ಮೃತಪಟ್ಟಿದ್ದಾರೆ. ಹಾಗೇ ಗುಣಮುಖರಾದವರು 2,67,95,549 ಮಂದಿ ಎಂದು ಆರೋಗ್ಯ ಇಲಾಖೆಯ ಡಾಟಾ ಉಲ್ಲೇಖಿಸಿದೆ.

ಕಳೆದ 20ಕ್ಕೂ ಹೆಚ್ಚು ದಿನಗಳಿಂದ ಒಂದು ದಿನದಲ್ಲಿ ಪತ್ತೆಯಾಗುವ ಕೊರೊನಾ ಸೋಂಕಿನ ಪ್ರಕರಣಗಳಿಗಿಂತ, ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್​ಚಾರ್ಜ್​ ಆಗುವವರ ಸಂಖ್ಯೆಯೇ ಹೆಚ್ಚಾಗಿದೆ. ಸದ್ಯ ದೇಶದಲ್ಲಿ ಸಾವಿನ ಪ್ರಮಾಣ ಶೇ.1.19ರಷ್ಟಿದೆ. ಪಾಸಿಟಿವಿಟಿ ದರ ಶೇ.6.89ಕ್ಕೆ ಕುಸಿತಗೊಂಡಿದ್ದು, ಕಳೆದ 58 ದಿನಗಳಲ್ಲಿ ಇದೇ ಮೊದಲ ಬಾರಿಗೆ ಅತ್ಯಂತ ಕಡಿಮೆ ಹೊಸ ಕೇಸ್​​ಗಳು ದಾಖಲಾಗಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಶುಕ್ರವಾರದವರೆಗೆ ಒಟ್ಟು 22,78,60,317 ಜನರಿಗೆ ಲಸಿಕೆ ಕೊಟ್ಟು ಮುಗಿದಿದೆ ಎಂದು ತಿಳಿಸಿದೆ.

ದೇಶದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 15,55,248ಕ್ಕೆ ಇಳಿದಿದೆ. ಅಂದರೆ ಒಟ್ಟಾರೆ ಸೋಂಕಿತರ ಸಂಖ್ಯೆಗಿಂತ ಸಕ್ರಿಯ ಪ್ರಕರಣಗಳ ಸಂಖ್ಯೆ ಶೇ. 5.73ರಷ್ಟು ಕಡಿಮೆಯಾಗಿದೆ. ಚೇತರಿಕೆಯ ಪ್ರಮಾಣ ಶೇ. 93.08ಕ್ಕೆ ಏರಿಕೆಯಾಗಿದೆ. ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೊರೊನಾ ಸ್ಥಿತಿಗತಿಗೆ ಸಂಬಂಧಪಟ್ಟಂತೆ ಉನ್ನತ ಮಟ್ಟದ ಸಭೆ ನಡೆದಿದೆ. ಲಸಿಕೆ ಅಭಿಯಾನದ ಬಗ್ಗೆಯೂ ಅವರು ಮಾಹಿತಿ ಪಡೆದಿದ್ದಾರೆ. ದೇಶದಲ್ಲಿ ಲಸಿಕೆ ಉತ್ಪಾದನೆ ಹೆಚ್ಚಿಸಲು ಕೈಗೊಂಡ ಕ್ರಮಗಳ ಬಗ್ಗೆಯೂ ಸಭೆಯಲ್ಲಿ ಪ್ರಧಾನಿ ಮೋದಿ ವರದಿ ಪಡೆದಿದ್ದಾರೆ.

ಇದನ್ನೂ ಓದಿ: Ease of Living Index: ದೇಶದಲ್ಲಿ ಜೀವಿಸಲು ಬೆಂಗಳೂರು ನಗರವೇ ಬೆಸ್ಟ್; ಮಹಾನಗರಗಳ ಪೈಕಿ ಕರ್ನಾಟಕ ರಾಜಧಾನಿಗೆ ಪ್ರಥಮ ಸ್ಥಾನ

CET 2021: ಪಿಯು ಪರೀಕ್ಷೆ ರದ್ದುಗೊಂಡರೂ ಸಿಇಟಿ ನಡೆಯಲಿದೆ: ಡಿಸಿಎಂ ಅಶ್ವತ್ಥ್ ನಾರಾಯಣ

(646 doctors died in Covid 2nd wave in India 9 from Karnataka)