World Environment Day 2021: ಟೆರೇಸ್ ಮೇಲೆ ಪುಟ್ಟ ಕಾಡು ನಿರ್ಮಾಣ ಮಾಡಿದ ಮಧ್ಯಪ್ರದೇಶದ ವ್ಯಕ್ತಿ..2500ಕ್ಕೂ ಹೆಚ್ಚು ಮರಗಳು
ಸೋಹನ್ಲಾಲ್ ಅವರ ಮನೆ ಟೆರೇಸ್ ಮೇಲೆ ಸೇಬು, ಹುಣಸೆ ಸೇರಿ ಒಟ್ಟು 40 ವಿವಿಧ ತಳಿಗಳು ಇವೆ. ನಾನು ನನ್ನ ಸಂಬಳದ ಬಹುತೇಕ ಭಾಗವನ್ನು ಈ ಹಸಿರು ಮರಗಳಿಗಾಗಿ ಬಳಕೆ ಮಾಡಿದ್ದೇನೆ ಎನ್ನುತ್ತಾರೆ ಸೋಹನ್ ಲಾಲ್ ದ್ವಿವೇದಿ.
ಮಧ್ಯಪ್ರದೇಶದ ವ್ಯಕ್ತಿಯೊಬ್ಬರು ತಮ್ಮ ಮನೆ ಮೇಲೆ ಒಂದು ಸಣ್ಣ ಅರಣ್ಯವನ್ನೇ ಸೃಷ್ಟಿಸಿದ್ದಾರೆ. ಇಂದಿನ ವಿಶ್ವ ಪರಿಸರ ದಿನಾಚರಣೆ ದಿನ ಆ ಫೋಟೋಗಳು ಸಿಕ್ಕಾಪಟೆ ವೈರಲ್ ಆಗಿವೆ. ಇವರ ಹೆಸರು ಸೋಹನ್ ಲಾಲ್ ದ್ವಿವೇದಿ. ಮನೆಯ ಟೆರೇಸ್ಮೇಲೆ 40 ಪ್ರಭೇದದ, 2500ಕ್ಕೂ ಹೆಚ್ಚು ಬೋನ್ಸಾಯ್ ಮರಗಳನ್ನು ಬೆಳೆಸಿ ಅರಣ್ಯ ನಿರ್ಮಿಸಿದ್ದಾರೆ.
ಸೋಹನ್ ಲಾಲ್ ಅವರು ವಿದ್ಯುತ್ ಮಂಡಳಿಯಲ್ಲಿ ಕೆಲಸ ಮಾಡುತ್ತಿದ್ದರು. ಉದ್ಯೋಗದಿಂದ ನಿವೃತ್ತಿಹೊಂದಿದ ನಂತರ ಈ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಹೀಗೆ ಬೋನ್ಸಾಯ್ ಅರಣ್ಯ ನಿರ್ಮಾಣ ಮಾಡಲು ಮುಂಬೈ ಮೂಲದ ಮಹಿಳೆಯೊಬ್ಬರೇ ಸ್ಫೂರ್ತಿ ಎನ್ನುತ್ತಾರೆ ಸೋಹನ್ ಲಾಲ್. ಆಕೆ ಟೆರೇಸ್ ಮೇಲೆ 250 ಬೋನ್ಸಾಯ್ ಮರಗಳನ್ನು ನೆಟ್ಟಿ-ಬೆಳೆಸಿದ್ದರು. ಆಕೆಯ ಬಗ್ಗೆ ಪತ್ರಿಕೆಯಲ್ಲಿ ಓದಿದ್ದ ಸೋಹನ್ ಲಾಲ್ ತಾನೂ ಯಾಕೆ ಅದನ್ನು ಮಾಡಬಾರದು ಎಂದು ಯೋಚಿಸಿ, ಕಾರ್ಯಪ್ರವೃತ್ತರಾದರು. ಇದೀಗ ಇವರ ಮನೆ ಟೆರೇಸ್ಗೆ ಹೋದರೆ ಅಲ್ಲೊಂದು ಬೋನ್ಸಾಯ್ ಕಾಡು ನಿರ್ಮಾಣವಾಗಿದ್ದನ್ನು ನೋಡಬಹುದಾಗಿದೆ.
ಬೋನ್ಸಾಯ್ ಮರಗಳೆಂದರೆ ಪುಟ್ಟಪುಟ್ಟ ಮರಗಳು. ಅವು ನೋಡಲೂ ಅಷ್ಟೇ ಸುಂದರವಾಗಿರುತ್ತದೆ. ಸೋಹನ್ಲಾಲ್ ಅವರ ಮನೆ ಟೆರೇಸ್ ಮೇಲೆ ಸೇಬು, ಹುಣಸೆ ಸೇರಿ ಒಟ್ಟು 40 ವಿವಿಧ ತಳಿಗಳು ಇವೆ. ನಾನು ನನ್ನ ಸಂಬಳದ ಬಹುತೇಕ ಭಾಗವನ್ನು ಈ ಹಸಿರು ಮರಗಳಿಗಾಗಿ ಬಳಕೆ ಮಾಡಿದ್ದೇನೆ. ಇವತ್ತಿಗೂ ದಿನದ ಬಹುತೇಕ ಸಮಯ ಇಲ್ಲಿಯೇ ಕಳೆಯುತ್ತೇನೆ ಎನ್ನುತ್ತಾರೆ ಸೋಹನ್ಲಾಲ್. ಅದರಲ್ಲೂ ಈಗಂತೂ ಲಾಕ್ಡೌನ್. ನನಗೆ ಮನೆಯಿಂದ ಹೊರಹೋಗಿ ಯಾವುದೇ ಕೆಲಸ ಮಾಡಲೂ ಸಾಧ್ಯವಾಗುತ್ತಿಲ್ಲ. ನಮ್ಮ ಮನೆಯ ಟೆರೇಸ್ನಿಂದ ನನಗೆ ತುಂಬ ಆರಾಮ ಎನ್ನಿಸಿದೆ ಎಂದಿದ್ದಾರೆ.
Madhya Pradesh: A man in Jabalpur grows 40 varieties of Bonsai among other trees on his terrace
“I was inspired by a woman in Mumbai who had 200 bonsai trees in her house. After this, I have grown around 2,500 bonsai here,” said SL Dwivedi (04.06) pic.twitter.com/cyQEE8AIfV
— ANI (@ANI) June 5, 2021
A man creates mini forest on his terrace in Madhya Pradesh