ವಿಸ್ಟಾ ಯೋಜನೆಗೆ ಕಾಂಗ್ರೆಸ್ನಿಂದ ತೀವ್ರ ವಿರೋಧ; ಆದರೆ ರಾಜಸ್ಥಾನದಲ್ಲಿ 160 ಫ್ಲ್ಯಾಟ್ಗಳ ನಿರ್ಮಾಣ ಸದ್ದಿಲ್ಲದೆ ಆರಂಭ
ಒಟ್ಟು 176 ಫ್ಲ್ಯಾಟ್ಗಳ ನಿರ್ಮಾಣಕ್ಕೆ ಜೈಪುರ ಅಭಿವೃದ್ಧಿ ಪ್ರಾಧಿಕಾರ ಪ್ರಸ್ತಾವನೆ ಇಟ್ಟಿತ್ತು. ಆದರೆ ವಸತಿ ಮಂಡಳಿ 160 ಫ್ಲ್ಯಾಟ್ಗಳಿಗೆ ಮಾತ್ರ ಅನುಮೋದನೆ ನೀಡಿದೆ.
ಕೊರೊನಾ ಉಲ್ಬಣಗೊಂಡ ಸಂದರ್ಭದಲ್ಲೂ ಕೇಂದ್ರ ಸರ್ಕಾರ ವಿಸ್ಟಾ ಯೋಜನೆಯಡಿ ಹೊಸ ಸಂಸತ್ ಭವನ ನಿರ್ಮಾಣ ಸೇರಿ ಅಭಿವೃದ್ಧಿ ಕಾರ್ಯವನ್ನು ಮುಂದುವರಿಸಿದೆ ಎಂದು ಕಾಂಗ್ರೆಸ್ ಸೇರಿ ಹಲವು ಪ್ರತಿಪಕ್ಷಗಳು ಆರೋಪಿಸಿದ್ದವು. ಆದರೆ ಇದೀಗ ಕೊವಿಡ್ ಸಾಂಕ್ರಾಮಿಕದ ಮಧ್ಯೆ ರಾಜಸ್ಥಾನ ಕಾಂಗ್ರೆಸ್ ಸರ್ಕಾರ, ಶಾಸಕರಿಗಾಗಿ 160 ಐಷಾರಾಮಿ ಫ್ಲ್ಯಾಟ್ಗಳ ನಿರ್ಮಾಣ ಕಾರ್ಯ ಪ್ರಾರಂಭಿಸಿದೆ. ಜ್ಯೋತಿನಗರದಲ್ಲಿರುವ ರಾಜ್ಯದ ವಿಧಾನಸೌಧದ ಬಳಿಯೇ ಈ ಫ್ಲ್ಯಾಟ್ಗಳು ನಿರ್ಮಾಣವಾಗಲಿದ್ದು, ಮೇ 20ರಿಂದ ಕೆಲಸ ಶುರುವಾಗಿದೆ. ಸುಮಾರು 266 ಕೋಟಿ ರೂಪಾಯಿ ವೆಚ್ಚದ ಯೋಜನೆ ಇದಾಗಿದೆ.
ಈ ಯೋಜನೆಯನ್ನು ರಾಜಸ್ಥಾನ ವಸತಿ ಮಂಡಳಿ (ಆರ್ಎಚ್ಬಿ) ಪ್ರಾರಂಭಿಸಿದ್ದು, ಪ್ರತಿ ಫ್ಲ್ಯಾಟ್ 3,200 ಚದರ್ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣವಾಗಲಿದೆ. ಹಾಗೇ, ನಾಲ್ಕು ಮಲಗುವ ಕೋಣೆಯನ್ನು ಒಳಗೊಂಡಿರಲಿದೆ ಎಂದು ಮಂಡಳಿ ತಿಳಿಸಿದೆ. 30 ತಿಂಗಳ ಒಳಗೆ ಈ ಯೋಜನೆಯನ್ನು ಸಂಪೂರ್ಣಗೊಳಿಸಲು ನಿಗದಿ ಮಾಡಲಾಗಿದ್ದು, ಅದರ ಒಳಗೇ ಕೆಲಸ ಮುಗಿಸುವುದಾಗಿಯೂ ಆರ್ಎಚ್ಬಿ ತಿಳಿಸಿದೆ.
ಒಟ್ಟು 176 ಫ್ಲ್ಯಾಟ್ಗಳ ನಿರ್ಮಾಣಕ್ಕೆ ಜೈಪುರ ಅಭಿವೃದ್ಧಿ ಪ್ರಾಧಿಕಾರ ಪ್ರಸ್ತಾವನೆ ಇಟ್ಟಿತ್ತು. ಆದರೆ ವಸತಿ ಮಂಡಳಿ 160 ಫ್ಲ್ಯಾಟ್ಗಳಿಗೆ ಮಾತ್ರ ಅನುಮೋದನೆ ನೀಡಿದೆ. ಕಾನೂನು ಪ್ರಕಾರವೇ ಫ್ಲ್ಯಾಟ್ಗಳ ನಿರ್ಮಾಣ ಮಾಡಲಾಗುತ್ತಿದೆ ಎಂದು ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗೋವಿಂದ್ ಸಿಂಗ್ ದೋಸ್ತಾರಾ ತಿಳಿಸಿದ್ದಾರೆ. ಒಂದು ಕಡೆ ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರದ ವಿಸ್ಟಾ ಯೋಜನೆಯನ್ನು ವಿರೋಧಿಸುತ್ತಿದೆ. ಇತ್ತ ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ಕೊವಿಡ್ 19 ಕಾಲದಲ್ಲೇ 160 ಫ್ಲ್ಯಾಟ್ಗಳ ನಿರ್ಮಾಣ ಶುರು ಮಾಡಿದೆ. ಅದರಲ್ಲೂ ರಾಹುಲ್ ಗಾಂಧಿ, ವಿಸ್ಟಾ ಯೋಜನೆಯನ್ನು ಕ್ರಿಮಿನಲ್ ವೇಸ್ಟೇಜ್ ಎಂದು ಹೇಳಿದ್ದರು.
ಇದನ್ನು ಓದಿ: Amazon Kannada Insult: ಆ ಗೂಗಲ್ ಆಯ್ತು, ಈಗ ಅಮೆಜಾನ್ ಆನ್ಲೈನ್ ಶಾಪಿಂಗ್ನಲ್ಲೂ ಕನ್ನಡ ಧ್ವಜ, ಲಾಂಛನಕ್ಕೆ ಅಪಮಾನ
Congress led Rajasthan government has started the construction of 160 luxurious flats