CET 2021: ಪಿಯು ಪರೀಕ್ಷೆ ರದ್ದುಗೊಂಡರೂ ಸಿಇಟಿ ನಡೆಯಲಿದೆ: ಡಿಸಿಎಂ ಅಶ್ವತ್ಥ್ ನಾರಾಯಣ

ಈ ಮೊದಲು ಮೆಡಿಕಲ್, ಡೆಂಟಲ್ ಹಾಗೂ ಎಂಜಿನಿಯರಿಂಗ್ ಸೀಟ್ ಹಂಚಿಕೆ ಆಯ್ಕೆ ಮಾಡಲು ಕನಿಷ್ಠ ಅಂಕ ನಿಗದಿ ಇತ್ತು. ಆದರೆ ಈ ಬಾರಿ ಕನಿಷ್ಠ ಮಾರ್ಕ್ಸ್ ನಿಗದಿಯಿಂದ ಅಡಚಣೆ ಆಗೋದು ಬೇಡ. ಸಿಇಟಿ ಮಾರ್ಕ್ಸ್ ಮಾತ್ರ ಪರಿಗಣನೆ ಆಗಲಿ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಲಹೆ ನೀಡಿದ್ದಾರೆ.

CET 2021: ಪಿಯು ಪರೀಕ್ಷೆ ರದ್ದುಗೊಂಡರೂ ಸಿಇಟಿ ನಡೆಯಲಿದೆ: ಡಿಸಿಎಂ ಅಶ್ವತ್ಥ್ ನಾರಾಯಣ
ಉಪ ಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ
Follow us
TV9 Web
| Updated By: guruganesh bhat

Updated on:Jun 05, 2021 | 2:38 PM

ಬೆಂಗಳೂರು: ರಾಜ್ಯದಲ್ಲಿ ಪಿಯು ಪರೀಕ್ಷೆಗಳು ರದ್ದುಗೊಂಡರೂ ಸಿಇಟಿ ನಡೆಯಲಿದೆ. ಸಿಇಟಿ ಅಂಕ ಆಧರಿಸಿ ಮೆಡಿಕಲ್, ಇಂಜಿನಿಯರಿಂಗ್​, ಡೆಂಟಲ್ ಸೀಟ್​ಗಳನ್ನು ಹಂಚಲಾಗುವುದು. ಸಿಇಟಿಯನ್ನು ಕೂಡ ನಡೆಸದೇ ವಿದ್ಯಾರ್ಥಿಗಳನ್ನು ಪಾಸ್ ಮಾಡಬಹುದಿತ್ತು. ಆದರೆ ಸಿಇಟಿಯನ್ನೂ ರದ್ದುಗೊಳಿಸಿದರೆ ಮುಂದೆ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ ಎಬ ಕಾರಣಕ್ಕೆ ಸಿಇಟಿ ನಡೆಸುತ್ತೇವೆ ಎಂದು ಉಪ ಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ತಿಳಿಸಿದರು.

ಪಿಯುಸಿಗೆ ಪರೀಕ್ಷೆ ಆಗಿರದ‌ ಕಾರಣ ಮೆಡಿಕಲ್, ಎಂಜಿನಿಯರಿಂಗ್ ಸೀಟ್ ಪಡೆಯಲು ಪರೀಕ್ಷೆ ಆಗಬೇಕು. ಹೀಗಾಗಿ ಸಿಇಟಿ ನಡೆಸುತ್ತೇವೆ. ಈ ಕುರಿತು ಸಂಬಂಧಿತ ಅಧಿಕಾರಿಗಳ ಜತೆ ಸಭೆ ನಡೆಸುತ್ತೇವೆ. ಈ ಮೊದಲು ಮೆಡಿಕಲ್, ಡೆಂಟಲ್ ಹಾಗೂ ಎಂಜಿನಿಯರಿಂಗ್ ಸೀಟ್ ಹಂಚಿಕೆ ಆಯ್ಕೆ ಮಾಡಲು ಕನಿಷ್ಠ ಅಂಕ ನಿಗದಿ ಇತ್ತು. ಆದರೆ ಈ ಬಾರಿ ಕನಿಷ್ಠ ಮಾರ್ಕ್ಸ್ ನಿಗದಿಯಿಂದ ಅಡಚಣೆ ಆಗೋದು ಬೇಡ. ಸಿಇಟಿ ಮಾರ್ಕ್ಸ್ ಮಾತ್ರ ಪರಿಗಣನೆ ಆಗಲಿ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಲಹೆ ನೀಡಿದ್ದಾರೆ. ಅವರ ಸಲಹೆ ಸಮರ್ಪಕವಾಗಿದ್ದು, ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜತೆ ಚರ್ಚೆ ನಡೆಸುತ್ತೇವೆ ಎಂದು ಬೆಂಗಳೂರಿನಲ್ಲಿ ಡಿಸಿಎಂ ಡಾ.ಅಶ್ವತ್ಥ್ ನಾರಾಯಣ ಮಾಹಿತಿ ನೀಡದರು.

ಪಿಯು ಪರೀಕ್ಷೆ ರದ್ದು ಕೇಂದ್ರ ಸರ್ಕಾರವೇ ಸಿಬಿಎಸ್ಇ, ಐಸಿಎಸ್ಇ ಎಕ್ಸಾಂ ರದ್ದು ಮಾಡಿದೆ. ಇದಕ್ಕೆ ಸುಪ್ರೀಂಕೋರ್ಟ್​ ಅನುಮೋದನೆಯೂ ದೊರೆತಿದೆ. ಆದರೆ ಯಾವುದಕ್ಕೂ ಜಗ್ಗದೆ ಕೊರೊನಾ ಮಹಾಮಾರಿ ಮಾತ್ರ ತಾನು ನುಗ್ಗಿದ್ದೇ ದಾರಿ ಎಂಬಂತಾಗಿದೆ. ಅದು ಪರೀಕ್ಷಾ ಕೇಂದ್ರಗಳಿಗೂ ಎಡತಾಕಿ, ಮಕ್ಕಳ ಜೀವಕ್ಕೆ ಎರವಾದರೆ ಹೇಗೆ ಎಂಬ ಚಿಂತೆಯಲ್ಲಿ ರಾಜ್ಯ ಸರ್ಕಾರ ಸ್ಪಷ್ಟ ನಿರ್ಧಾರಕ್ಕೆ ಬಂದಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ದ್ವಿತೀಯ ಪಿಯುಸಿ ಎಕ್ಸಾಂ ನಡೆಸುವುದಿಲ್ಲ ಆದರೆ ಈ ಬಾರಿ SSLC ಗೆ ಎರಡು ಪೇಪರ್​ ಪರೀಕ್ಷೆಗಳನ್ನು ನಡೆಸುವುದಾಗಿ  ಶಿಕ್ಷಣ ಸಚಿವ ಸುರೇಶ್‌ಕುಮಾರ್‌ ಹೇಳಿದ್ದಾರೆ.  ಕೊರೊನಾ ಕೇಕೆಯ ಮಧ್ಯೆ, ಪರೀಕ್ಷೆ ರದ್ದು ಮಾಡುವಂತೆ ಶಿಕ್ಷಣ ತಜ್ಞರು ಸೇರಿದಂತೆ ಎಲ್ಲ ಕಡೆಗಳಿಂದಲೂ ಒತ್ತಾಯ ಕೇಳಿಬಂದ ಹಿನ್ನೆಲೆಯಲ್ಲಿ ಅಲರ್ಟ್ ಆದ ಸಚಿವ ಸುರೇಶ್ ಕುಮಾರ್ ಅವರು ಅಳೆದು ತೂಗಿ ಪಿಯುಸಿ ಪರೀಕ್ಷೆ ನಡೆಸುವುದು ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. SSLC ವಿದ್ಯಾರ್ಥಿಗಳಿಗೆ ಜುಲೈ 3ನೇ ವಾರದಲ್ಲಿ ಪರೀಕ್ಷೆ ನಡೆಸಲು ತೀರ್ಮಾನ ಮಾಡಲಾಗಿದೆ.

ಇದನ್ನೂ ಓದಿ: ಕೊವಿಡ್ 19 ಲಸಿಕೆ ಸರ್ಟಿಫಿಕೇಟ್​ ಮೇಲೆ ಇನ್ಮುಂದೆ ಮಮತಾ ಬ್ಯಾನರ್ಜಿ ಫೋಟೋ; ಟಿಎಂಸಿ ಸರ್ಕಾರದ ನಿರ್ಧಾರ

ಪ್ರಚಾರಕ್ಕಾಗಿ ಮಾಡಿದ ಪ್ರಯತ್ನವಿದು: 5ಜಿ ಬಗ್ಗೆ ಪ್ರಶ್ನಿಸಿ ಕೇಸ್ ಹಾಕಿದ್ದಕ್ಕೆ ನಟಿ ಜೂಹಿ ಚಾವ್ಲಾಗೆ ದೆಹಲಿ ಹೈಕೋರ್ಟ್​ ತರಾಟೆ, 20 ಲಕ್ಷ ದಂಡ

(CET Exams 2021 will be held even if PU exam is canceled in Karnataka says DCM Ashwathth Narayana)

Published On - 2:38 pm, Sat, 5 June 21

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ