
ಬೆಂಗಳೂರು, ಜ.22: ಬೆಂಗಳೂರು ಹಾಗೂ ಇತರ ಜಿಲ್ಲೆಗಳಲ್ಲಿ ಹವಾಮಾನದ ಬದಲಾವಣೆಯಿಂದ ಗಾಳಿಯ ಮಟ್ಟದಲ್ಲೂ (Air Quality) ಕೂಡ ಬದಲಾವಣೆ ಆಗಿದೆ. ಚಳಿಗಾಲದ ಈ ಸಮಯದಲ್ಲಿ ಗಾಳಿಯ ವೇಗ ಕಡಿಮೆಯಿರುವುದರಿಂದ ಮತ್ತು ಮುಂಜಾನೆ ಮಂಜು ಇರುವುದರಿಂದ ಮಾಲಿನ್ಯಕಾರಕ ಕಣಗಳು ಭೂಮಿಗೆ ಹೆಚ್ಚು ಪರಿಣಾಮವನ್ನು ಉಂಟು ಮಾಡುತ್ತದೆ. ಬೆಂಗಳೂರಿನಲ್ಲಿ ವಾಹನ ದಟ್ಟಣೆ ಮತ್ತು ನಿರ್ಮಾಣ ಕಾಮಗಾರಿಗಳಿರುವ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ಕಡಿಮೆ ಇರಲಿದೆ. ಸಿಲ್ಕ್ ಬೋರ್ಡ್ ಮತ್ತು ವೈಟ್‌ಫೀಲ್ಡ್‌ನಲ್ಲಿ ಗಾಳಿಯ ಗುಣಮಟ್ಟ 150 ದಾಟಿದ್ದು, ಇದು ಮಕ್ಕಳಿಗೆ ಹಾಗೂ ಹಿರಿಯರಿಗೆ ಅಪಾಯಕಾರಿ ಎಂದು ಹೇಳಲಾಗದೆ. ಜಿಲ್ಲೆಯ ಇತರ ಭಾಗದಲ್ಲೂ ಕೂಡ ಗಾಳಿಯ ಗುಣಮಟ್ಟ ಕಳಪೆಯಾಗಿದೆ. ಬೆಂಗಳೂರಿನ ಜಯನಗರ ಮತ್ತು ಲಾಲ್‌ಬಾಗ್ ಪ್ರದೇಶಗಳಲ್ಲಿ ಹಸಿರು ಹೆಚ್ಚಾಗಿರುವುದರಿಂದ ಇಲ್ಲಿ ಗಾಳಿಯ ಗುಣಮಟ್ಟ ಸಾಧಾರಣವಾಗಿರಲಿದೆ. ಇಲ್ಲಿ 85 – 95ರಷ್ಟು ಗಾಳಿಯ ಮಟ್ಟದ ಇರಲಿದೆ.
ಬೆಂಗಳೂರಿನಲ್ಲಿ ಇಂದು ಗಾಳಿಯ ಗುಣಮಟ್ಟ 110ರಿಂದ 135 ಇರಲಿದೆ. ಇದು ಸಾಧಾರಣ ಎಂದು ಹೇಳಲಾಗಿದೆ. ಮೈಸೂರು 65ರಿಂದ 80 ತೃಪ್ತಿದಾಯಕ ಗಾಳಿಮಟ್ಟವನ್ನು ಹೊಂದಿದೆ. ಇಲ್ಲಿನ ವಾತಾರಣ ಕೂಡ ತುಂಬಾ ಉತ್ತಮವಾಗಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ಜನ ದಟ್ಟಣೆ ಹಾಗೂ ಕಾಮಗಾರಿಗಳು ಕಾಣರದಿಂದ ಗಾಳಿಯ ಗುಣಮಟ್ಟ 90ರಿಂದ 115ಕ್ಕೆ ತಲುಪಿದೆ. ಮಂಗಳೂರಿನಲ್ಲೂ ವಾತಾವರಣ ಉತ್ತಮವಾಗಿದ್ದು, ಗಾಳಿಯ ಗುಣಮಟ್ಟ 55ರಿಂದ 70 ಇದ್ದು, ತೃಪ್ತಿದಾಯಕವಾಗಿದೆ ಎಂದು ಹೇಳಲಾಗಿದೆ. ಕಲಬುರಗಿಯಲ್ಲಿ ಗಾಳಿಯ ಗುಣಮಟ್ಟ 105ರಿಂದ 120 ಇರಲಿದೆ ಎಂದು ಹೇಳಲಾಗದೆ.
ಹಿರಿಯ ನಾಗರಿಕರು ಮತ್ತು ಉಸಿರಾಟದ ಸಮಸ್ಯೆ ಇರುವವರು ದಟ್ಟ ಮಂಜು ಮತ್ತು ಮಾಲಿನ್ಯ ಪ್ರದೇಶದಲ್ಲಿ ಓಡಾಡುವದನ್ನು ತಪ್ಪಿಸಿ, ಹಾಗೂ ಸ್ವಲ್ಪ ಬಿಸಿಲು ಬಂದ ನಂತರ ಹೊರಗೆ ಹೋಗುವುದು ಉತ್ತಮ ಎಂದು ತಜ್ಞರು ಹೇಳಿದ್ದಾರೆ. ವಾಹನ ದಟ್ಟಣೆ ಹೆಚ್ಚಿರುವ ರಸ್ತೆಗಳಲ್ಲಿ ಸಂಚರಿಸುವಾಗ ಮಾಸ್ಕ್ ಧರಿಸುವುದನ್ನು ಮರೆಯಬಾರದು, ಕಳಪೆ ಗಾಳಿಯ ಗುಣಮಟ್ಟ ಇರುವ ಪ್ರದೇಶದಲ್ಲಿ ಮಕ್ಕಳನ್ನು ಬಿಡಬೇಡಿ, ಹಾಗೂ ಸ್ಕೂಲ್ಗೆ ಹೋಗವಾಗ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಉತ್ತಮ. ಈ ಗಾಳಿಯ ಗುಣಮಟ್ಟ ಮುಂದಿನ ಎರಡು ವಾರಗಳವರೆಗೆ ಹೀಗೆ ಇರಲಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಚಿಕ್ಕಮಗಳೂರು ಜನರೇ ಗಮನಿಸಿ, ಬೆಳಿಗ್ಗೆ ದಟ್ಟ ಮಂಜು ಇರುವ ಕಾರಣ ವಾಹನ ಸವಾರರೇ ಎಚ್ಚರ
ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ
ಬೆಂಗಳೂರು: 127
ಮಂಗಳೂರು: 164
ಮೈಸೂರು: 96
ಬೆಳಗಾವಿ: 114
ಕಲಬುರುಗಿ: 86
ಶಿವಮೊಗ್ಗ: 166
ಹುಬ್ಬಳ್ಳಿ : 161
ಉಡುಪಿ : 160
ವಿಜಯಪುರ : 66
ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?
ಉತ್ತಮ- 0-50
ಮಧ್ಯಮ – 50-100
ಕಳಪೆ – 100-150
ಅನಾರೋಗ್ಯಕರ – 150-200
ಗಂಭೀರ – 200 – 300
ಅಪಾಯಕಾರಿ – 300 -500+
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ