ಕೊರೊನಾ ಸಕ್ರಿಯ ಪ್ರಕರಣದಲ್ಲಿ ದೇಶದ ನಗರಗಳ ಪೈಕಿ ಬೆಂಗಳೂರು ಟಾಪ್ ಒನ್

|

Updated on: Apr 26, 2021 | 2:57 PM

ಅತಿ ಹೆಚ್ಚು ಕೊರೊನಾ ಸಕ್ರಿಯ ಕೇಸ್ ಇರುವ ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ ಮೊದಲ‌ ಸ್ಥಾನ ಸಿಕ್ಕಿದೆ.

ಕೊರೊನಾ ಸಕ್ರಿಯ ಪ್ರಕರಣದಲ್ಲಿ ದೇಶದ ನಗರಗಳ ಪೈಕಿ ಬೆಂಗಳೂರು ಟಾಪ್ ಒನ್
ಕೊವಿಡ್ ಪರೀಕ್ಷೆ
Follow us on

ದೆಹಲಿ: ಬೆಂಗಳೂರು ಕೊರೊನಾ ಸೋಂಕಿನ ರಾಜಧಾನಿಯಾಗಿ ಹಲವು ದಿನಗಳೇ ಕಳೆದು ಹೋಗಿವೆ. ನೂರರ ಸಂಖ್ಯೆಯಲ್ಲಿ ಪತ್ತೆಯಾಗ್ತಿದ್ದ ಸೋಂಕಿತರ ಸಂಖ್ಯೆ, ಸಾವಿರದ ಗಡಿಯನ್ನ ದಾಟಿ ತಿಂಗಳೇ ಕಳೆದು ಹೋಯ್ತು. ಈಗ ಕೊರೊನಾ ಸೋಂಕಿತರ ಸಂಖ್ಯೆ 15 ರಿಂದ 20 ಸಾವಿರದಷ್ಟು ಪತ್ತೆಯಾಗುತ್ತಿದೆ. ಕೊರೊನಾ ಮೊದಲ ಅಲೆಯಲ್ಲೂ ಪ್ರತಿನಿತ್ಯ ಇಷ್ಟು ಪ್ರಕರಣಗಳು ಪತ್ತೆ ಆಗ್ತಿರಲಿಲ್ಲ. ಆದ್ರೆ, ಎರಡನೇ ಅಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿದೆ. ಈಗ ಮತ್ತೊಂದು ಆತಂಕಕಾರಿ ಸಂಗತಿ ಎಂದರೆ ದೇಶದಲ್ಲಿ ಅತಿ ಹೆಚ್ಚು ಕೊರೊನಾ ಸಕ್ರಿಯ ಕೇಸ್ ಇರುವ ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ ಮೊದಲ‌ ಸ್ಥಾನ ಸಿಕ್ಕಿದೆ.

ದೇಶದ ನಗರಗಳ ಪೈಕಿ ಬೆಂಗಳೂರು ಟಾಪ್ ಒನ್
ಕೊರೊನಾ ಸಕ್ರಿಯ ಕೇಸ್ಗಳಲ್ಲಿ ದೇಶದಲ್ಲಿ ಬೆಂಗಳೂರಿಗೆ ಆಗ್ರ ಸ್ಥಾನ ಸಿಕ್ಕಿದೆ.
ಬೆಂಗಳೂರು- 1.80 ಲಕ್ಷ ಕೊರೊನಾ ಸಕ್ರಿಯ ಕೇಸ್
ಪುಣೆ ನಗರ- 1.07 ಲಕ್ಷ ಕೊರೊನಾ ಸಕ್ರಿಯ ಕೇಸ್
ದೆಹಲಿಯಲ್ಲಿ- 93 ಸಾವಿರ ಕೊರೊನಾ ಸಕ್ರಿಯ ಕೇಸ್
ನಾಗಪುರದಲ್ಲಿ- 80 ಸಾವಿರ ಕೊರೊನಾ ಸಕ್ರಿಯ ಕೇಸ್
ಥಾಣೆಯಲ್ಲಿ- 79 ಸಾವಿರ ಕೊರೊನಾ ಸಕ್ರಿಯ ಕೇಸ್
ಮುಂಬೈನಲ್ಲಿ- 75 ಸಾವಿರ ಕೊರೊನಾ ಸಕ್ರಿಯ ಕೇಸ್‌

ಇದನ್ನೂ ಓದಿ: 18ರಿಂದ 45 ವರ್ಷದವರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ಲಸಿಕೆ ಉಚಿತ; ಸಿಎಂ ಯಡಿಯೂರಪ್ಪ ಘೋಷಣೆ