ಕಾಂಗ್ರೆಸ್ ಟ್ರಬಲ್ ಶೂಟರ್​ DK ಶಿವಕುಮಾರ್ ಬ್ರದರ್ಸ್ ಮನೆ ಮೇಲೆ CBI ದಾಳಿ

|

Updated on: Oct 05, 2020 | 9:37 AM

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿದೆ. ಇಂದು ಬೆಳ್ಳಂಬೆಳಗ್ಗೆ ಸದಾಶಿವ ನಗರದಲ್ಲಿರುವ ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್​ ಶಿವಕುಮಾರ್ ಅವರ ಮನೆ ಮೇಲೆ ಈ ದಾಳಿ ನಡೆದಿದೆ. ಜೊತೆಗೆ ಇನ್ನೂ 15 ಕಡೆ CBI ಟೀಂ ದಾಳಿ ನಡೆಸಿದೆ. ಕನಕಪುರದಲ್ಲಿಯೂ ಸಿಬಿಐ ರೇಡ್: ಡಿಕೆಶಿ ಸೋದರ ಡಿಕೆ ಸುರೇಶ್ ನಿವಾಸದ ಮೇಲೂ CBI ದಾಳಿ ನಡೆಸಿದೆ. ಕನಕಪುರದ ನಿವಾಸಗಳ ಮೇಲೂ ಸಿಬಿಐ ಸರ್ಚ್ ನಡೆದಿದೆ. ಇಂದು ಬೆಳಗ್ಗೆ 6 ಗಂಟೆಯಿಂದ ಸದಾಶಿವನಗರದಲ್ಲಿ […]

ಕಾಂಗ್ರೆಸ್ ಟ್ರಬಲ್ ಶೂಟರ್​ DK ಶಿವಕುಮಾರ್ ಬ್ರದರ್ಸ್ ಮನೆ ಮೇಲೆ CBI ದಾಳಿ
Follow us on

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿದೆ. ಇಂದು ಬೆಳ್ಳಂಬೆಳಗ್ಗೆ ಸದಾಶಿವ ನಗರದಲ್ಲಿರುವ ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್​ ಶಿವಕುಮಾರ್ ಅವರ ಮನೆ ಮೇಲೆ ಈ ದಾಳಿ ನಡೆದಿದೆ. ಜೊತೆಗೆ ಇನ್ನೂ 15 ಕಡೆ CBI ಟೀಂ ದಾಳಿ ನಡೆಸಿದೆ.

ಕನಕಪುರದಲ್ಲಿಯೂ ಸಿಬಿಐ ರೇಡ್:
ಡಿಕೆಶಿ ಸೋದರ ಡಿಕೆ ಸುರೇಶ್ ನಿವಾಸದ ಮೇಲೂ CBI ದಾಳಿ ನಡೆಸಿದೆ. ಕನಕಪುರದ ನಿವಾಸಗಳ ಮೇಲೂ ಸಿಬಿಐ ಸರ್ಚ್ ನಡೆದಿದೆ. ಇಂದು ಬೆಳಗ್ಗೆ 6 ಗಂಟೆಯಿಂದ ಸದಾಶಿವನಗರದಲ್ಲಿ ಡಿ.ಕೆ.ಶಿವಕುಮಾರ್ ಮನೆ ಮೇಲೆ ದಾಳಿ ಆರಂಭವಾಗಿದೆ. ಇಂದು ಇಡೀ ದಿನ ಸರ್ಚ್​ ನಡೆಯಲಿದೆ. ಡಿ.ಕೆ.ಶಿವಕುಮಾರ್ ಬಿಟ್ಟು ಮನೆಯಲ್ಲಿದ್ದ ಎಲ್ಲರನ್ನ ಹೊರಗೆ ಕಳುಹಿಸಿ ಸಿಸಿಬಿ ಅಧಿಕಾರಿಗಳು ಸರ್ಚ್​ ಆರಂಭಿಸಿದ್ದಾರೆ. ರಾಮನಗರದ ದೊಡ್ಡಆಲಹಳ್ಳಿಯಲ್ಲಿರುವ ಡಿಕೆಶಿ ನಿವಾಸದ ಮೇಲೆಯೂ ದಾಳಿ ನಡೆದಿದೆ. ಸ್ಥಳೀಯ ಪೊಲೀಸರಿಗೆ ದಾಳಿ/ ಪರಿಶೀಲನೆ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ತಿಳಿದುಬಂದಿದೆ.

ಮತ್ತೆ ದಾಳಿ ಯಾಕೆ?
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಈ ಹಿಂದೆ ಜಾರಿ ನಿರ್ದೇಶನಾಲಯ ಮತ್ತು ಐಟಿ ಇಲಾಖೆ ವಿಚಾರಣೆ ನಡೆಸಿತ್ತು. ಆ ಪ್ರಕರಣದಲ್ಲಿ ತಿಹಾರ್ ಜೈಲಿಗೂ ಹೋಗಿಬಂದಿದ್ದರು. ತದನಂತರ ಪ್ರಕರಣ ಕೈಬಿಡುವಂತೆ ಡಿಕೆಶಿ ಅವರು, ರಾಜ್ಯ ಹೈಕೋರ್ಟ್​ ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಹೈಕೋರ್ಟ್ ಅರ್ಜಿ ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ಸಿಬಿಐ ದಾಳಿ ನಡೆಸಿದೆ.

ಡಿಕೆ ಶಿವಕುಮಾರ್ ಗೆ ಇ.ಡಿ ಬಂಧನದ ಭೀತಿ..!

ಪುತ್ರಿಗೆ ಹಣ ವರ್ಗಾವಣೆ: DK ಶಿವಕುಮಾರ್ ಆಪ್ತನಿಗೆ ನೋಟಿಸ್

Published On - 9:09 am, Mon, 5 October 20