ದಾಳಿ ವೇಳೆ.. ಡಿಕೆಶಿ ಮತ್ತು ಸಿಬಿಐ ಅಧಿಕಾರಿ ನಡುವಣ ಮಾತುಕತೆ ಹೀಗಿತ್ತು..
ಕರ್ನಾಟಕದಲ್ಲಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲಾ ವ್ಯಾಪ್ತಿ ಸೇರಿದಂರೆ ದೂರದ ದೆಹಲಿ-ಮುಂಬೈನಲ್ಲೂ ಕಾಂಗ್ರೆಸ್ ಟ್ರಬಲ್ ಶೂಟರ್ DK ಶಿವಕುಮಾರ್ ಮತ್ತು ಡಿಕೆ ಸುರೇಶ್ ಅವರುಗಳ ಮನೆಗಳ ಮೇಲೆ CBI ದಾಳಿ ನಡೆಸಿದ್ದಾರೆ. ಈ ವೇಳೆ, ಇಂದು ಬೆಳಗ್ಗೆ ಸದಾಶಿವನಗರದಲ್ಲಿರುವ ತಮ್ಮ ಮನೆಗೆ ಸಿಬಿಐ ಅಧಿಕಾರಿಗಳು ಎಂಟ್ರಿ ಕೊಡುತ್ತಿದ್ದಂತೆ ಡಿಕೆಶಿ ಶಾಕ್ ಆಗಿದ್ದಾರೆ. ತಕ್ಷಣ ಸಾವರಿಸಿಕೊಂಡು ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ. ದಾಳಿ ವೇಳೆ ಡಿಕೆಶಿ ಮತ್ತು ಸಿಬಿಐ ಅಧಿಕಾರಿ ನಡುವೆ ಮಾತುಕತೆ ಹೀಗಿತ್ತು.. ನನ್ನ ವಿರುದ್ದ ಬಲವಂತದ […]
ಕರ್ನಾಟಕದಲ್ಲಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲಾ ವ್ಯಾಪ್ತಿ ಸೇರಿದಂರೆ ದೂರದ ದೆಹಲಿ-ಮುಂಬೈನಲ್ಲೂ ಕಾಂಗ್ರೆಸ್ ಟ್ರಬಲ್ ಶೂಟರ್ DK ಶಿವಕುಮಾರ್ ಮತ್ತು ಡಿಕೆ ಸುರೇಶ್ ಅವರುಗಳ ಮನೆಗಳ ಮೇಲೆ CBI ದಾಳಿ ನಡೆಸಿದ್ದಾರೆ.
ಈ ವೇಳೆ, ಇಂದು ಬೆಳಗ್ಗೆ ಸದಾಶಿವನಗರದಲ್ಲಿರುವ ತಮ್ಮ ಮನೆಗೆ ಸಿಬಿಐ ಅಧಿಕಾರಿಗಳು ಎಂಟ್ರಿ ಕೊಡುತ್ತಿದ್ದಂತೆ ಡಿಕೆಶಿ ಶಾಕ್ ಆಗಿದ್ದಾರೆ. ತಕ್ಷಣ ಸಾವರಿಸಿಕೊಂಡು ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ. ದಾಳಿ ವೇಳೆ ಡಿಕೆಶಿ ಮತ್ತು ಸಿಬಿಐ ಅಧಿಕಾರಿ ನಡುವೆ ಮಾತುಕತೆ ಹೀಗಿತ್ತು..
ನನ್ನ ವಿರುದ್ದ ಬಲವಂತದ ಕ್ರಮ ಕೈಗೊಳ್ಳಬೇಡಿ. ನಿನ್ನೆ ಕೋರ್ಟ್‌ನಿಂದ ಬಲವಂತದ ಕ್ರಮಕ್ಕೆ ತಡೆ ಸಿಕ್ಕಿದೆ. ಆದ್ರೆ ನೀವು ನಮ್ಮ ಮನೆ ದಾಳಿ ಮಾಡಿದ್ದು ಏಕೆ ಎಂದು ಸಿಬಿಐ ಅಧಿಕಾರಿಗಳನ್ನು ಡಿಕೆಶಿ ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿದ ಅದರ ಬಗ್ಗೆ ನಮಗೇನು ಮಾಹಿತಿ ಇಲ್ಲ. ಅದಕ್ಕೂ, ನಮಗೂ ಸಂಬಂಧವಿಲ್ಲ ಎಂದು ಸಿಬಿಐ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ ಎಂದು ತಿಳಿದುಬಂದಿದೆ.
Published On - 10:39 am, Mon, 5 October 20