ಕಾಂಗ್ರೆಸ್ ಟ್ರಬಲ್ ಶೂಟರ್ DK ಶಿವಕುಮಾರ್ ಬ್ರದರ್ಸ್ ಮನೆ ಮೇಲೆ CBI ದಾಳಿ
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿದೆ. ಇಂದು ಬೆಳ್ಳಂಬೆಳಗ್ಗೆ ಸದಾಶಿವ ನಗರದಲ್ಲಿರುವ ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್ ಶಿವಕುಮಾರ್ ಅವರ ಮನೆ ಮೇಲೆ ಈ ದಾಳಿ ನಡೆದಿದೆ. ಜೊತೆಗೆ ಇನ್ನೂ 15 ಕಡೆ CBI ಟೀಂ ದಾಳಿ ನಡೆಸಿದೆ. ಕನಕಪುರದಲ್ಲಿಯೂ ಸಿಬಿಐ ರೇಡ್: ಡಿಕೆಶಿ ಸೋದರ ಡಿಕೆ ಸುರೇಶ್ ನಿವಾಸದ ಮೇಲೂ CBI ದಾಳಿ ನಡೆಸಿದೆ. ಕನಕಪುರದ ನಿವಾಸಗಳ ಮೇಲೂ ಸಿಬಿಐ ಸರ್ಚ್ ನಡೆದಿದೆ. ಇಂದು ಬೆಳಗ್ಗೆ 6 ಗಂಟೆಯಿಂದ ಸದಾಶಿವನಗರದಲ್ಲಿ […]
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿದೆ. ಇಂದು ಬೆಳ್ಳಂಬೆಳಗ್ಗೆ ಸದಾಶಿವ ನಗರದಲ್ಲಿರುವ ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್ ಶಿವಕುಮಾರ್ ಅವರ ಮನೆ ಮೇಲೆ ಈ ದಾಳಿ ನಡೆದಿದೆ. ಜೊತೆಗೆ ಇನ್ನೂ 15 ಕಡೆ CBI ಟೀಂ ದಾಳಿ ನಡೆಸಿದೆ.
ಕನಕಪುರದಲ್ಲಿಯೂ ಸಿಬಿಐ ರೇಡ್: ಡಿಕೆಶಿ ಸೋದರ ಡಿಕೆ ಸುರೇಶ್ ನಿವಾಸದ ಮೇಲೂ CBI ದಾಳಿ ನಡೆಸಿದೆ. ಕನಕಪುರದ ನಿವಾಸಗಳ ಮೇಲೂ ಸಿಬಿಐ ಸರ್ಚ್ ನಡೆದಿದೆ. ಇಂದು ಬೆಳಗ್ಗೆ 6 ಗಂಟೆಯಿಂದ ಸದಾಶಿವನಗರದಲ್ಲಿ ಡಿ.ಕೆ.ಶಿವಕುಮಾರ್ ಮನೆ ಮೇಲೆ ದಾಳಿ ಆರಂಭವಾಗಿದೆ. ಇಂದು ಇಡೀ ದಿನ ಸರ್ಚ್ ನಡೆಯಲಿದೆ. ಡಿ.ಕೆ.ಶಿವಕುಮಾರ್ ಬಿಟ್ಟು ಮನೆಯಲ್ಲಿದ್ದ ಎಲ್ಲರನ್ನ ಹೊರಗೆ ಕಳುಹಿಸಿ ಸಿಸಿಬಿ ಅಧಿಕಾರಿಗಳು ಸರ್ಚ್ ಆರಂಭಿಸಿದ್ದಾರೆ. ರಾಮನಗರದ ದೊಡ್ಡಆಲಹಳ್ಳಿಯಲ್ಲಿರುವ ಡಿಕೆಶಿ ನಿವಾಸದ ಮೇಲೆಯೂ ದಾಳಿ ನಡೆದಿದೆ. ಸ್ಥಳೀಯ ಪೊಲೀಸರಿಗೆ ದಾಳಿ/ ಪರಿಶೀಲನೆ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ತಿಳಿದುಬಂದಿದೆ.
ಮತ್ತೆ ದಾಳಿ ಯಾಕೆ? ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಈ ಹಿಂದೆ ಜಾರಿ ನಿರ್ದೇಶನಾಲಯ ಮತ್ತು ಐಟಿ ಇಲಾಖೆ ವಿಚಾರಣೆ ನಡೆಸಿತ್ತು. ಆ ಪ್ರಕರಣದಲ್ಲಿ ತಿಹಾರ್ ಜೈಲಿಗೂ ಹೋಗಿಬಂದಿದ್ದರು. ತದನಂತರ ಪ್ರಕರಣ ಕೈಬಿಡುವಂತೆ ಡಿಕೆಶಿ ಅವರು, ರಾಜ್ಯ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಹೈಕೋರ್ಟ್ ಅರ್ಜಿ ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ಸಿಬಿಐ ದಾಳಿ ನಡೆಸಿದೆ.
ಡಿಕೆ ಶಿವಕುಮಾರ್ ಗೆ ಇ.ಡಿ ಬಂಧನದ ಭೀತಿ..!
ಪುತ್ರಿಗೆ ಹಣ ವರ್ಗಾವಣೆ: DK ಶಿವಕುಮಾರ್ ಆಪ್ತನಿಗೆ ನೋಟಿಸ್
Published On - 9:09 am, Mon, 5 October 20