ಬೆಂಗಳೂರು: ರಾಜ್ಯದ ಜನಪ್ರತಿನಿಧಿಗಳ ಹನಿಟ್ರ್ಯಾಪ್ ಕೇಸ್ನ ಮತ್ತೊಂದು ಟ್ವಿಸ್ಟ್ ಬಯಲಾಗಿದೆ. ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು ನಿನ್ನೆ ಮತ್ತೊಬ್ಬನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಮೊದಲಿಗೆ ವಿವಿಧ ಕಾರಣಗಳನ್ನು ಮುಂದಿಟ್ಟುಕೊಂಡು ಜನಪ್ರತಿನಿಧಿಗಳನ್ನು ಟೀಂ ಸಹಿತ ಭೇಟಿಯಾಗುತ್ತಿದ್ರು. ಬಳಿಕ ಯುವತಿ ತನಗೆ ಸಮಸ್ಯೆ ಇದೆ, ಒಂಟಿಯಾಗಿ ಮಾತನಾಡಬೇಕು ಎಂದು ಹೇಳುತ್ತಿದ್ದಳು. ಶಾಸಕರ ಜೊತೆ ಮಾತನಾಡಿ ಮೊಬೈಲ್ ನಂಬರ್ ನೀಡುತ್ತಿದ್ದರು. ನಂಬರ್ ಪಡೆದ ಬಳಿಕ ರಾತ್ರಿ ವೇಳೆ ಫೋನ್ ಸಂಭಾಷಣೆ ನಡೆಸುತ್ತಿದ್ರು.
ಮೋಹಕ ಮಾತಿನಲ್ಲೇ ಖೆಡ್ಡಾ ತೋಡುತ್ತಿದ್ದಳು:
10 ಲಕ್ಷದವರೆಗೂ ಹಣ ವಸೂಲಿ:
ಟ್ರ್ಯಾಪ್ ಅಗಿರುವ ಎಂಎಲ್ಎಗಳ ವಿರೋಧಿ ಬಣದಿಂದಲೂ ಆರೋಪಿಗಳ ಟೀಂ ಹಣ ಪಡೆದಿದೆ. ವಿರೋಧಿಗಳ ವಿಡಿಯೋ ಮಾಡಿ ಹೆಸರು ಕೆಡಿಸಲು ಹಣ ಪಡೆದಿದ್ದಾರೆ. ಸುಮಾರು 10 ಲಕ್ಷದವರೆಗೂ ವಿರೋಧಿ ಬಣದಿಂದ ಹಣ ಪಡೆದಿರೊ ಬಗ್ಗೆ ಸಿಸಿಬಿ ತನಿಖೆಯಲ್ಲಿ ಮಾಹಿತಿ ಬಯಲಾಗಿದೆ.
ನಿನ್ನೆ ರಾಕೇಶ್ನನ್ನು ವಶಕ್ಕೆ ಪಡೆದ ಸಿಸಿಬಿ:
ರಾಘವೇಂದ್ರ, ಪುಷ್ಪ, ಪುಷ್ಪ, ಮಂಜುನಾಥ್ ಎಂಬುವವರನ್ನು ಸಿಸಿಬಿ ಈಗಾಗಲೇ ಬಂಧಿಸಿದೆ. ನಿನ್ನೆ ರಾಕೇಶ್ ಎಂಬುವನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಕೇಶ್ ಬಳಿ 2015ರಲ್ಲಿ ರೆಕಾರ್ಡ್ ಅಗಿದ್ದ ಮೈಸೂರು ಭಾಗದ ಶಾಸಕರ ವಿಡಿಯೋ ಇತ್ತು. ಈ ವಿಡಿಯೋವನ್ನೂ ವಶಕ್ಕೆ ಪಡೆದಿದ್ದಾರೆ.
ಹಣ ನೀಡಿ ವಿಡಿಯೋ ವಾಪಸ್ ಪಡೆದಿರುವ ಶಂಕೆ:
ಕೆಲ ಶಾಸಕರ ಟ್ರ್ಯಾಪ್ ವೇಳೆ ವಿಡಿಯೋ ಚಿತ್ರೀಕರಣ ಸಾಧ್ಯವಾಗಿಲ್ಲ. ಕ್ಯಾಮರಾ ಬ್ಯಾಗ್ ಬಿದ್ದು ಮತ್ತು ರೂಮ್ ಲೈಟ್ ಆಫ್ ಮಾಡಿದ್ದ ಕಾರಣ ಕೆಲ ರೆಕಾರ್ಡಿಂಗ್ ಸಾಧ್ಯವಾಗಿಲ್ಲ ಎಂದು ತನಿಖೆ ವೇಳೆ ಹಳೆ ಸತ್ಯ ಬಯಲಾಗಿದೆ. ಕೆಲ ಹಿರಿಯ ಅಧಿಕಾರಿಗಳು ಮತ್ತು ರಾಜಕಾರಣಿಗಳು ಹಣ ನೀಡಿ ವಿಡಿಯೋ ವಾಪಸ್ ಪಡೆದಿರೊ ಶಂಕೆ ವ್ಯಕ್ತವಾಗಿದೆ. ರೆಕಾರ್ಡ್ ಮಾಡಿದ್ದ ಕ್ಯಾಮರಾ ಸಹಿತ ಪೆನ್ ಡ್ರೈವ್ಗಳನ್ನು ಪಡೆದು ನಾಶ ಪಡೆಸಿರೊ ಸಾಧ್ಯತೆಯಿದೆ.
Published On - 10:23 am, Sat, 30 November 19