ಆನಂದ್ ಸಿಂಗ್ ಪುತ್ರನ ಅದ್ಧೂರಿ ಲಗ್ನ ಪತ್ರಿಕೆಯಲ್ಲಿ ಏನೆಲ್ಲಾ ಇದೆ ಗೊತ್ತಾ!?

ಬಳ್ಳಾರಿ: ಡಿಸೆಂಬರ್ 1ರಂದು ಅಂದ್ರೆ ನಾಳೆ ಭಾನುವಾರ ವಿಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಅವರ ಪುತ್ರ ಸಿದ್ಧಾರ್ಥ ಸಿಂಗ್​ ಅವರ ಮದುವೆ ಸಂಜನಾ ಸಿಂಗ್  ಜೊತೆ ವೈಭವೋಪೇತವಾಗಿ ನಡೆಯಲಿದೆ. ಅದಕ್ಕೂ ಮುನ್ನ ಅವರ ವೆಡ್ಡಿಂಗ್ ಕಾರ್ಡ್​ ಅದ್ದೂರಿಯಾಗಿದ್ದು, ಭಾರೀ ಗಮನ ಸೆಳೆದಿದೆ. ವಿಐಪಿಗಳಿಗಾಗಿ ಆನಂದ್ ಸಿಂಗ್ ಅದ್ಧೂರಿಯಾಗಿ ಆಮಂತ್ರಣ ಪತ್ರಿಕೆ ಮಾಡಿಸಿದ್ದಾರೆ. ಈಗಾಗಲೇ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಮದುವೆಗೆ ಸೆಟ್ ಹಾಕಲಾಗಿದೆ. ಇನ್ನು ವಿವಾಹಕ್ಕೆ ವಿಐಪಿಗಳನ್ನ ಆಮಂತ್ರಿಸಲು ಮಾಡಿಸಿರೋ ಕಾರ್ಡ್​ನ ತೂಕವೇ ಬರೋಬ್ಬರಿ […]

ಆನಂದ್ ಸಿಂಗ್ ಪುತ್ರನ ಅದ್ಧೂರಿ ಲಗ್ನ ಪತ್ರಿಕೆಯಲ್ಲಿ ಏನೆಲ್ಲಾ ಇದೆ ಗೊತ್ತಾ!?
Follow us
ಸಾಧು ಶ್ರೀನಾಥ್​
|

Updated on: Nov 30, 2019 | 11:10 AM

ಬಳ್ಳಾರಿ: ಡಿಸೆಂಬರ್ 1ರಂದು ಅಂದ್ರೆ ನಾಳೆ ಭಾನುವಾರ ವಿಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಅವರ ಪುತ್ರ ಸಿದ್ಧಾರ್ಥ ಸಿಂಗ್​ ಅವರ ಮದುವೆ ಸಂಜನಾ ಸಿಂಗ್  ಜೊತೆ ವೈಭವೋಪೇತವಾಗಿ ನಡೆಯಲಿದೆ. ಅದಕ್ಕೂ ಮುನ್ನ ಅವರ ವೆಡ್ಡಿಂಗ್ ಕಾರ್ಡ್​ ಅದ್ದೂರಿಯಾಗಿದ್ದು, ಭಾರೀ ಗಮನ ಸೆಳೆದಿದೆ. ವಿಐಪಿಗಳಿಗಾಗಿ ಆನಂದ್ ಸಿಂಗ್ ಅದ್ಧೂರಿಯಾಗಿ ಆಮಂತ್ರಣ ಪತ್ರಿಕೆ ಮಾಡಿಸಿದ್ದಾರೆ.

ಈಗಾಗಲೇ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಮದುವೆಗೆ ಸೆಟ್ ಹಾಕಲಾಗಿದೆ. ಇನ್ನು ವಿವಾಹಕ್ಕೆ ವಿಐಪಿಗಳನ್ನ ಆಮಂತ್ರಿಸಲು ಮಾಡಿಸಿರೋ ಕಾರ್ಡ್​ನ ತೂಕವೇ ಬರೋಬ್ಬರಿ 2 ಕೆ.ಜಿ ಇದೆ. ಕಾರ್ಡ್​ನಲ್ಲಿ 5 ರೀತಿಯ ವಿಶೇಷ ವಿನ್ಯಾಸದ ಪುಟಗಳನ್ನ ಮಾಡಲಾಗಿದ್ದು, ತಿರುಪತಿ ವೆಂಕಟೇಶ್ವರ ಸ್ವಾಮಿಯ ಫೋಟೋ ಆರಂಭದಲ್ಲಿ ಹಾಕಲಾಗಿದೆ. ಪ್ರತಿಯೊಂದು ಪುಟದಲ್ಲೂ ಕೃಷ್ಣ-ರುಕ್ಮಿಣಿಯ ಫೋಟೋ ಕಣ್ಮನ ಸೆಳೆಯುವಂತೆ ಡಿಸೈನ್ ಮಾಡಿಸಲಾಗಿದೆ.