ಮದುವೆಯಾಗುವುದಾಗಿ ನಂಬಿಸಿ ₹ 28 ಲಕ್ಷ ವಂಚಿಸಿದ್ದ ಆರೋಪಿ ಅರೆಸ್ಟ್​

ಧಾರವಾಡ: ಮದುವೆಯಾಗುವುದಾಗಿ ನಂಬಿಸಿ ಯುವತಿ ಕುಟುಂಬಕ್ಕೆ 28 ಲಕ್ಷ ರೂಪಾಯಿ ವಂಚಿಸಿದ್ದ ಆರೋಪಿಯನ್ನು ಹಳೇ ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ. ಮಗಳಿಗೆ ವರ ಹುಡುಕಲು ಮಾಸ ಪತ್ರಿಕೆಯೊಂದರಲ್ಲಿ ಹಳೇ ಹುಬ್ಬಳ್ಳಿಯ ನಿವಾಸಿ ಜಾನಕಿಬಾಯಿ ಜಾಹೀರಾತು ನೀಡಿದ್ದರು. ಜಾಹೀರಾತು ನೋಡಿ ಮೈಸೂರು ಮೂಲದ ಪುಟ್ಟಯ್ಯ ಎಂಬಾತ ಮದುವೆಯಾಗುವುದಾಗಿ ಹೇಳಿದ್ದಾನೆ. ತಾನು ಕೆಪಿಟಿಸಿಎಲ್ ಇಂಜಿನಿಯರ್ ಎಂದು ನಂಬಿಸಿ, ಹುಬ್ಬಳ್ಳಿಗೆ ವರ್ಗಾವಣೆ ಮಾಡಿಸಿಕೊಳ್ಳಲು ಹಣಕ್ಕೆ ಬೇಡಿಕೆಯಿಟ್ಟಿದ್ದಾನೆ. 28 ಲಕ್ಷ ಹಣ ಪಡೆದ ಆರೋಪಿ ನಂತರ ಪೋನ್ ಸ್ವಿಚ್  ಆಫ್ ಮಾಡಿಕೊಂಡಿದ್ದಾನೆ. ಈ ಕುರಿತು […]

ಮದುವೆಯಾಗುವುದಾಗಿ ನಂಬಿಸಿ ₹ 28 ಲಕ್ಷ ವಂಚಿಸಿದ್ದ ಆರೋಪಿ ಅರೆಸ್ಟ್​
Follow us
ಸಾಧು ಶ್ರೀನಾಥ್​
|

Updated on: Nov 30, 2019 | 11:44 AM

ಧಾರವಾಡ: ಮದುವೆಯಾಗುವುದಾಗಿ ನಂಬಿಸಿ ಯುವತಿ ಕುಟುಂಬಕ್ಕೆ 28 ಲಕ್ಷ ರೂಪಾಯಿ ವಂಚಿಸಿದ್ದ ಆರೋಪಿಯನ್ನು ಹಳೇ ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ.

ಮಗಳಿಗೆ ವರ ಹುಡುಕಲು ಮಾಸ ಪತ್ರಿಕೆಯೊಂದರಲ್ಲಿ ಹಳೇ ಹುಬ್ಬಳ್ಳಿಯ ನಿವಾಸಿ ಜಾನಕಿಬಾಯಿ ಜಾಹೀರಾತು ನೀಡಿದ್ದರು. ಜಾಹೀರಾತು ನೋಡಿ ಮೈಸೂರು ಮೂಲದ ಪುಟ್ಟಯ್ಯ ಎಂಬಾತ ಮದುವೆಯಾಗುವುದಾಗಿ ಹೇಳಿದ್ದಾನೆ. ತಾನು ಕೆಪಿಟಿಸಿಎಲ್ ಇಂಜಿನಿಯರ್ ಎಂದು ನಂಬಿಸಿ, ಹುಬ್ಬಳ್ಳಿಗೆ ವರ್ಗಾವಣೆ ಮಾಡಿಸಿಕೊಳ್ಳಲು ಹಣಕ್ಕೆ ಬೇಡಿಕೆಯಿಟ್ಟಿದ್ದಾನೆ.

28 ಲಕ್ಷ ಹಣ ಪಡೆದ ಆರೋಪಿ ನಂತರ ಪೋನ್ ಸ್ವಿಚ್  ಆಫ್ ಮಾಡಿಕೊಂಡಿದ್ದಾನೆ. ಈ ಕುರಿತು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಯುವತಿ ತಾಯಿ ಜಾನಕಿ ದೂರು ನೀಡಿದ್ದರು. ಸದ್ಯ ವಂಚಕನನ್ನ ಬಂಧಿಸಿರೋ ಹಳೇ ಹುಬ್ಬಳ್ಳಿ ಪೊಲೀಸರು, ಆರೋಪಿಯಿಂದ 18 ಲಕ್ಷ ರೂ. ಜಪ್ತಿ ಮಾಡಿದ್ದಾರೆ.