AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋಹಕ ಮಾತಿನಲ್ಲಿ ಶಾಸಕರಿಗೆ ರಾಣಿಜೇನು ಖೆಡ್ಡಾ ತೋಡುತ್ತಿದ್ದುದು ಹೀಗೆ

ಬೆಂಗಳೂರು: ರಾಜ್ಯದ ಜನಪ್ರತಿನಿಧಿಗಳ ಹನಿಟ್ರ್ಯಾಪ್​ ಕೇಸ್​ನ ಮತ್ತೊಂದು ಟ್ವಿಸ್ಟ್ ಬಯಲಾಗಿದೆ. ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು ನಿನ್ನೆ ಮತ್ತೊಬ್ಬನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಮೊದಲಿಗೆ ವಿವಿಧ ಕಾರಣಗಳನ್ನು ಮುಂದಿಟ್ಟುಕೊಂಡು ಜನಪ್ರತಿನಿಧಿಗಳನ್ನು ಟೀಂ ಸಹಿತ ಭೇಟಿಯಾಗುತ್ತಿದ್ರು. ಬಳಿಕ ಯುವತಿ ತನಗೆ ಸಮಸ್ಯೆ ಇದೆ, ಒಂಟಿಯಾಗಿ ಮಾತನಾಡಬೇಕು ಎಂದು ಹೇಳುತ್ತಿದ್ದಳು. ಶಾಸಕರ ಜೊತೆ ಮಾತನಾಡಿ ಮೊಬೈಲ್ ನಂಬರ್ ನೀಡುತ್ತಿದ್ದರು. ನಂಬರ್ ಪಡೆದ ಬಳಿಕ ರಾತ್ರಿ ವೇಳೆ ಫೋನ್ ಸಂಭಾಷಣೆ ನಡೆಸುತ್ತಿದ್ರು. ಮೋಹಕ […]

ಮೋಹಕ ಮಾತಿನಲ್ಲಿ ಶಾಸಕರಿಗೆ ರಾಣಿಜೇನು ಖೆಡ್ಡಾ ತೋಡುತ್ತಿದ್ದುದು ಹೀಗೆ
ಸಾಧು ಶ್ರೀನಾಥ್​
|

Updated on:Nov 30, 2019 | 10:31 AM

Share

ಬೆಂಗಳೂರು: ರಾಜ್ಯದ ಜನಪ್ರತಿನಿಧಿಗಳ ಹನಿಟ್ರ್ಯಾಪ್​ ಕೇಸ್​ನ ಮತ್ತೊಂದು ಟ್ವಿಸ್ಟ್ ಬಯಲಾಗಿದೆ. ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು ನಿನ್ನೆ ಮತ್ತೊಬ್ಬನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಮೊದಲಿಗೆ ವಿವಿಧ ಕಾರಣಗಳನ್ನು ಮುಂದಿಟ್ಟುಕೊಂಡು ಜನಪ್ರತಿನಿಧಿಗಳನ್ನು ಟೀಂ ಸಹಿತ ಭೇಟಿಯಾಗುತ್ತಿದ್ರು. ಬಳಿಕ ಯುವತಿ ತನಗೆ ಸಮಸ್ಯೆ ಇದೆ, ಒಂಟಿಯಾಗಿ ಮಾತನಾಡಬೇಕು ಎಂದು ಹೇಳುತ್ತಿದ್ದಳು. ಶಾಸಕರ ಜೊತೆ ಮಾತನಾಡಿ ಮೊಬೈಲ್ ನಂಬರ್ ನೀಡುತ್ತಿದ್ದರು. ನಂಬರ್ ಪಡೆದ ಬಳಿಕ ರಾತ್ರಿ ವೇಳೆ ಫೋನ್ ಸಂಭಾಷಣೆ ನಡೆಸುತ್ತಿದ್ರು.

ಮೋಹಕ ಮಾತಿನಲ್ಲೇ ಖೆಡ್ಡಾ ತೋಡುತ್ತಿದ್ದಳು:  ಮೊದ ಮೊದಲು ರಾತ್ರಿ 10 ಗಂಟೆಗೆ ಮಾತುಕತೆ ಆರಂಭಿಸುತ್ತಿದ್ದ ಇವರು, ತಡರಾತ್ರಿ 1 ಗಂಟೆವರೆಗೂ ಫೋನ್​ನಲ್ಲಿ ರೊಮ್ಯಾಂಟಿಕ್ ಮಾತುಗಳನ್ನಾಡುತ್ತಿದ್ದರು. ಬಳಿಕ ವಾಟ್ಸಾಪ್​ನಲ್ಲಿ ಯುವತಿ ಟ್ಯಾಟು ಮತ್ತು ಅಂಗಾಂಗ ತೋರಿಸುವ ಫೋಟೋ ಕಳಿಸುತ್ತಿದ್ದಳು. ನಂತರ ಶಾಸಕರ ಜೊತೆ ಚಟಗಳ ಬಗ್ಗೆ ಮಾತನಾಡುತ್ತಿದ್ದಳು ಎನ್ನಲಾಗಿದೆ. ಕುಡಿತ, ಸಿಗರೇಟ್ ಬಗ್ಗೆ ಮೊದಲು ಚರ್ಚೆ ನಡೆಸುತ್ತಿದ್ದ ಯುವತಿ, ಕೊನೆಗೆ ನಿಮ್ಮ ಜೊತೆ ಕಾಲ ಕಳೆಯಬೇಕು ಅಂತಾ ಮೋಹಕ ಮಾತಿನಲ್ಲೇ ಶಾಸಕರು, ಅಧಿಕಾರಿಗಳನ್ನ ಹಳ್ಳಕ್ಕೆ ಬೀಳಿಸುತ್ತಿದ್ದಳು.

10 ಲಕ್ಷದವರೆಗೂ ಹಣ ವಸೂಲಿ: ಟ್ರ್ಯಾಪ್ ಅಗಿರುವ ಎಂಎಲ್​ಎಗಳ ವಿರೋಧಿ ಬಣದಿಂದಲೂ ಆರೋಪಿಗಳ ಟೀಂ ಹಣ ಪಡೆದಿದೆ. ವಿರೋಧಿಗಳ ವಿಡಿಯೋ ಮಾಡಿ ಹೆಸರು ಕೆಡಿಸಲು ಹಣ ಪಡೆದಿದ್ದಾರೆ. ಸುಮಾರು 10 ಲಕ್ಷದವರೆಗೂ ವಿರೋಧಿ ಬಣದಿಂದ ಹಣ ಪಡೆದಿರೊ ಬಗ್ಗೆ ಸಿಸಿಬಿ ತನಿಖೆಯಲ್ಲಿ ಮಾಹಿತಿ ಬಯಲಾಗಿದೆ.

ನಿನ್ನೆ ರಾಕೇಶ್​ನನ್ನು ವಶಕ್ಕೆ ಪಡೆದ ಸಿಸಿಬಿ: ರಾಘವೇಂದ್ರ, ಪುಷ್ಪ, ಪುಷ್ಪ, ಮಂಜುನಾಥ್ ಎಂಬುವವರನ್ನು ಸಿಸಿಬಿ ಈಗಾಗಲೇ ಬಂಧಿಸಿದೆ. ನಿನ್ನೆ ರಾಕೇಶ್ ಎಂಬುವನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಕೇಶ್ ಬಳಿ 2015ರಲ್ಲಿ ರೆಕಾರ್ಡ್ ಅಗಿದ್ದ ಮೈಸೂರು ಭಾಗದ ಶಾಸಕರ ವಿಡಿಯೋ ಇತ್ತು. ಈ ವಿಡಿಯೋವನ್ನೂ ವಶಕ್ಕೆ ಪಡೆದಿದ್ದಾರೆ.

ಹಣ ನೀಡಿ ವಿಡಿಯೋ ವಾಪಸ್ ಪಡೆದಿರುವ ಶಂಕೆ: ಕೆಲ ಶಾಸಕರ ಟ್ರ್ಯಾಪ್ ವೇಳೆ ವಿಡಿಯೋ ಚಿತ್ರೀಕರಣ ಸಾಧ್ಯವಾಗಿಲ್ಲ. ಕ್ಯಾಮರಾ ಬ್ಯಾಗ್ ಬಿದ್ದು ಮತ್ತು ರೂಮ್ ಲೈಟ್ ಆಫ್ ಮಾಡಿದ್ದ ಕಾರಣ ಕೆಲ ರೆಕಾರ್ಡಿಂಗ್ ಸಾಧ್ಯವಾಗಿಲ್ಲ ಎಂದು ತನಿಖೆ ವೇಳೆ ಹಳೆ ಸತ್ಯ ಬಯಲಾಗಿದೆ. ಕೆಲ ಹಿರಿಯ ಅಧಿಕಾರಿಗಳು ಮತ್ತು ರಾಜಕಾರಣಿಗಳು ಹಣ ನೀಡಿ ವಿಡಿಯೋ ವಾಪಸ್ ಪಡೆದಿರೊ ಶಂಕೆ ವ್ಯಕ್ತವಾಗಿದೆ. ರೆಕಾರ್ಡ್ ಮಾಡಿದ್ದ ಕ್ಯಾಮರಾ ಸಹಿತ ಪೆನ್ ಡ್ರೈವ್​ಗಳನ್ನು ಪಡೆದು ನಾಶ ಪಡೆಸಿರೊ ಸಾಧ್ಯತೆಯಿದೆ.

Published On - 10:23 am, Sat, 30 November 19