ಬೆಂಗಳೂರು, (ಅಕ್ಟೋಬರ್ 10): ಯಲಹಂಕ ಲಾಡ್ಜ್ ನಲ್ಲಿ ಬೆಂಕಿ ದುರಂತದಲ್ಲಿ (Yelahanka fire Incident) ಜೋಡಿ ಸಾವನ್ನಪ್ಪಿರುವ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಬೆಂಗಳೂರಿನ ಯಲಹಂಕದ ನ್ಯೂಟೌನ್‌ನಲ್ಲಿರೋ ಕಿಚನ್ ಫ್ಯಾಮಿಲಿ ರೆಸ್ಟೋರೆಂಟ್ ಇದು. ಇದೇ ರೆಸ್ಟೋರೆಂಟ್‌ನೊಳಗೆ ಕೂಲ್ ಕಂಫರ್ಟ್ ಅನ್ನೋ ಲಾಡ್ಜ್ ಕೂಡಾ ಇದೆ. ಈ ಲಾಡ್ಜ್‌ನಲ್ಲೇ ಗುರುವಾರ ಸಂಜೆ ಘೋರವೇ ನಡೆದು ಹೋಗಿದೆ. ಅದೇ ಲಾಡ್ಜ್‌ನಲ್ಲಿ ರೂಮ್ ಮಾಡಿಕೊಂಡಿದ್ದ ಜೋಡಿ ದುರಂತ ಸಾವುಕಂಡಿದೆ. ಬೆಂಕಿಯಲ್ಲಿ ಯುವಕ ಬೆಂದು ಹೋದ್ರೆ, ಹೊಗೆಯಿಂದಲೇ ಯುವತಿ ಸಾವಿನ ಮನೆ ಸೇರಿದ್ದಾಳೆ. ಗದಗ ಮೂಲದ ರಮೇಶ್ ಮತ್ತು ಹನಗುಂದ ಮೂಲದ ಕಾವೇರಿ ದುರಂತ ಸಾವು ಕಂಡಿದ್ದಾಳೆ. ಗಂಡ ಮೂವರು ಮಕ್ಕಳಿಗಾಗಿ ದುಡಿಯಲು ಬೆಂಗಳೂರಿಗೆ ಬಂದವಳು ಪ್ರಿಯತಮನ ತೆಕ್ಕೆಗೆ ಸಿಲುಕಿ ಹೆಣವಾಗಿದ್ದಾಳೆ.
ಒಂದು ವಾರದಿಂದ ಗದಗ ಮೂಲದ ರಮೇಶ್ ಮತ್ತು ಹನಗುಂದ ಮೂಲದ ಕಾವೇರಿ ಇದೇ ಲಾಡ್ಜ್ ನಲ್ಲಿ ರೂಮ್ ಮಾಡಿಕೊಂಡಿದ್ದರು. ಕಾವೇರಿಗೆ 2016 ರಲ್ಲೇ ಮದುವೆಯಾಗಿ ಮೂರು ಮಕ್ಕಳಿದ್ದಾರೆ. ಆದ್ರೆ, ದುಡಿಯೋ ಸಲುವಾಗಿ ಗಂಡ ಮಕ್ಕಳನ್ನ ಊರಲ್ಲಿ ಬಿಟ್ಟು ಬೆಂಗಳೂರಿಗೆ ಬಂದು ಸ್ಪಾವೊಂದರಲ್ಲಿ ಕೆಲಸಕ್ಕೆ ಸೇರಿದ್ದಳು. ಬಳಿಕ ಗಾರೇ ಕೆಲಸ ಮಾಡುತ್ತಿದ್ದ ರಮೇಶನ ಪರಿಚವಾಗಿ ಇಬ್ಬರ ನಡುವೆ ಸಲುಗೆ ಬೆಳೆದಿದೆ. ಹೀಗಾಗಿ ಈ ಜೋಡಿ ಲಾಡ್ಜ್‌ನಲ್ಲಿ ರೂಮ್ ಮಾಡಿಕೊಂಡಿತ್ತು. ಆದ್ರೆ ನಿನ್ನೆ(ಅ.10) ಬೆಳಗ್ಗೆ ಲಾಡ್ಜ್ ನಲ್ಲಿ ಇಬ್ಬರಿಗೂ ಜಗಳ ಆಗಿದ್ದು, ಮಧ್ಯಾಹ್ನ ಕಾವೇರಿ ರೂಂನಲ್ಲಿದ್ದರೆ, ರಮೇಶ್ ಹೊರಗಡೆ ಹೋಗಿ ಪೆಟ್ರೋಲ್ ತಂದಿದ್ನಂತೆ. ಈ ವೇಳೆ ರೂಮ್ ಗೆ ಮತ್ತೊಬ್ಬ ವ್ಯಕ್ತಿ ಬಂದು ಹೋಗಿರೋ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ರೂಮಿನಲ್ಲಿ ಕಾವೇರಿ ಹಾಗೂ ರಮೇಶನಿಗೆ ಇಬ್ಬರಿಗೂ ಮತ್ತೆ ಗಲಾಟೆ ಆಗಿರೋ ಸಾಧ್ಯತೆಯಿದ್ದು ಈ ವೇಳೆ ರಮೇಶ ಪೆಟ್ರೋಲ್ ಸುರಿದುಕೊಂಡು ಮೇನ್ ಡೋರ್ ಲಾಕ್ ಮಾಡಿದ್ದಾನೆ. ಭಯದಲ್ಲಿ ಕಾವೇರಿ ಬೆಂಕಿಯಿಂದ ತಪ್ಪಿಸಿಕೊಳ್ಳಲು ಬಾತ್ ರೂಂಗೆ ಓಡಿ ಹೋಗಿ ಲಾಕ್ ಮಾಡಿಕೊಂಡಿದ್ದಾಳೆ. ಬಳಿಕ ತನ್ನ ಸ್ಪಾ ಮಾಲೀಕರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾಳೆ. ಆದ್ರೆ, ಅಷ್ಟೊತ್ತಿಗಾಗಲೇ ಬೆಂಕಿ ಇಡೀ ರೂಂ ವ್ಯಾಪಿಸಿದೆ.
ಬೆಂಕಿಯಿಂದಾಗಿ ರಮೇಶ್ ಸಾವಾಗಿದ್ರೆ. ಹೊಗೆಯಿಂದ ಉಸಿರುಗಟ್ಟಿ ಕಾವೇರಿ ಸಾವನ್ನಪ್ಪಿದ್ದಾಳೆ. ಕಾವೇರಿಗೆ ಮದುವೆಯಾಗಿ ಮೂರು ಮಕ್ಕಳಿದ್ದು, ಪತಿ ಹಾಗೂ ಮಕ್ಕಳನ್ನ ಬಿಟ್ಟು ಬಂದವಳು ರಮೇಶನ ಜೊತೆ ಪರಲೋಕ ಸೇರಿದ್ದಾಳೆ. ಗಂಡ ಮಕ್ಕಳು ಅಂತಾ ಕಾವೇರಿ ಬದುಕಿದ್ರೆ ಇವತ್ತು ಈ ಪರಿಸ್ಥಿತಿ ಬರ್ತಿರಲಿಲ್ಲ. ಪರ ಪುರುಷನ ತೆಕ್ಕೆಗೆ ಬಿದ್ದು ಅತನ ಜೊತೆ ತಾನೂ ಹೆಣವಾಗಿದ್ದಾಳೆ.
ಇನ್ನು ರಮೇಶ್ ತಾನು ಆತ್ಮಹತ್ಯೆ ಮಾಡಿಕೊಳ್ಳುವುದರ ಜತೆಗೆ ಮದ್ವೆಗೆ ನಿರಾಕರಿಸಿದ ಪ್ರೇಯಸಿ ಕಾವೇರಿಯನ್ನೂ ಸಹ ಬಲಿ ಪಡೆದಿದ್ದಾರೆ. ಸದ್ಯ ಈ ಬಗ್ಗೆ ಯಲಹಂಕ ಪೊಲೀಸ್ರು ತನಿಖೆ ನಡೆಸುತ್ತಿದ್ದಾರೆ.