ಬೆಂಗಳೂರಲ್ಲಿ ಹೆಚ್ಚಾಯ್ತು ನಕಲಿ ಬ್ರಾಂಡ್ ಹಾವಳಿ; 15 ಲಕ್ಷಕ್ಕೂ ಅಧಿಕ ಮೌಲ್ಯದ ನಕಲಿ ಶೂಗಳು ವಶ

ಬ್ರ್ಯಾಂಡೆಡ್ ವಸ್ತುಗಳನ್ನು ಖರಿದಿಸಲು ಇಂದಿನ ಜನತೆ ಹಾತೊರೆಯುತ್ತಿರುತ್ತಾರೆ. ಬ್ರ್ಯಾಂಡೆಡ್ ಬಟ್ಟೆಗಳು, ಶೂಗಳಿಗಾಗಿ ಜನರು ಏನು ಬೇಕಾದರೂ ಮಾಡುತ್ತಾರೆ. ಹೀಗಿರುವಾಗ ಬೆಂಗಳೂರಿನಲ್ಲಿ ಬ್ರ್ಯಾಂಡ್​ಗಳ ಹೆಸರಿನಲ್ಲಿ ನಕಲಿ ಶೂಗಳು ಮತ್ತು ಚಪ್ಪಲಿಗಳನ್ನು ಮಾರಾಟ ಮಾಡುತ್ತಿರುವುದು ತಿಳಿದು ಬಂದಿದೆ. ಯಶವಂತಪುರ ಪೊಲೀಸರು ಪೋರ್ ಕೆ ಶೂಸ್ ಅಂಗಡಿ ಗೊಡೌನ್ ಮೇಲೆ ದಾಳಿ ನಡೆಸಿ ಮೊಹಮ್ಮದ್ ಇಮ್ರಾನ್ ಎಂಬ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರಲ್ಲಿ ಹೆಚ್ಚಾಯ್ತು ನಕಲಿ ಬ್ರಾಂಡ್ ಹಾವಳಿ; 15 ಲಕ್ಷಕ್ಕೂ ಅಧಿಕ ಮೌಲ್ಯದ ನಕಲಿ ಶೂಗಳು ವಶ
ಬೆಂಗಳೂರಿನಲ್ಲಿ ದುಬಾರಿ ಬ್ರ್ಯಾಂಡ್​ಗಳ ನಕಲಿಸಿ ಮಾರಾಟ ಮಾಡುತ್ತಿದ್ದ ಆರೋಪಿ ಮೊಹಮ್ಮದ್ ಇಮ್ರಾನ್​ ಬಂಧನ
Updated By: ಭಾವನಾ ಹೆಗಡೆ

Updated on: Oct 12, 2025 | 11:52 AM

ಬೆಂಗಳೂರು, ಅಕ್ಟೋಬರ್ 12: ಬ್ರ್ಯಾಂಡೆಡ್ (Branded) ವಸ್ತುಗಳನ್ನು ಖರಿದಿಸಲು ಇಂದಿನ ಜನತೆ ಹಾತೊರೆಯುತ್ತಿರುತ್ತಾರೆ. ಬ್ರ್ಯಾಂಡೆಡ್ ಬಟ್ಟೆಗಳು, ಶೂಗಳಿಗಾಗಿ ಜನರು ಏನು ಬೇಕಾದರೂ ಮಾಡುತ್ತಾರೆ. ಹೀಗಿರುವಾಗ ದುಬಾರಿ ವಸ್ತುಗಳು ಕಡಿಮೆ ದರದಲ್ಲಿ ಸಿಕ್ಕರೆ ಹಿಂದೆ ಮುಂದೆ ವಿಚಾರಿಸದೆ ಅಂಗಡಿಗಳಿಗೆ ಮುಗಿಬೀಳುತ್ತಾರೆ. ಜನರ ಈ ದುರಾಸೆಯನ್ನೇ ಇಟ್ಟುಕೊಂಡು ಕೆಲ ದುಷ್ಕರ್ಮಿಗಳು ತಮ್ಮ ಜೇಬು ತುಂಬಿಸಿಕೊಳ್ಳುತ್ತಾರೆ. ಈಗ ಬೆಂಗಳೂರಿನಲ್ಲಿಯೂ ಇದೇ ರೀತಿಯ ಮೋಸದ ಜಾಲ ಕಂಡುಬಂದಿದ್ದು, ಯಶವಂತಪುರ ಪೊಲೀಸರು ನಕಲಿ ವಸ್ತುಗಳನ್ನು ಸೀಜ್ ಮಾಡಿದ್ದಾರೆ.

ಐದು ಸಾವಿರ ರೂ. ಬೆಲೆಯ ಶೂ ಕೇವಲ ಐನೂರು ರೂ.ಗಳಿಗೆ ಮಾರಾಟ

ಬೆಂಗಳೂರಿನಲ್ಲಿ ಬ್ರ್ಯಾಂಡ್​ಗಳ ಹೆಸರಿನಲ್ಲಿ ನಕಲಿ ಶೂಗಳು ಮತ್ತು ಚಪ್ಪಲಿಗಳನ್ನು ಮಾರಾಟ ಮಾಡುತ್ತಿರುವುದು ತಿಳಿದು ಬಂದಿದೆ. ಯಶವಂತಪುರದ ಪೋರ್ ಕೆ ಶೂಸ್ ಅಂಗಡಿಯಲ್ಲಿ 50% ರಿಂದ 60% ಕಡಿಮೆ ದರದಲ್ಲಿ ಶೂ ಮತ್ತು ಚಪ್ಪಲಿಗಳನ್ನು ಮಾರಾಟ ಮಾಡಲಾಗುತ್ತಿತ್ತು. ಐದು ಸಾವಿರ ರೂ. ಬೆಲೆಯ ಶೂ ಕೇವಲ ಐನೂರು ರೂ.ಗಳಿಗೆ ಮಾರಾಟ ಮಾಡುತ್ತಿದ್ದರು. ನಾಲ್ಕು ಸಾವಿರ ರೂ. ಗಳ ಚಪ್ಪಲಿಯನ್ನು ರಿಯಾಯಿತಿಯಲ್ಲಿ ನೀಡುತ್ತೇವೆಂದು ಹೇಳಿ ಕೇವಲ ನಾನೂರು ರೂ.ಗಳಿಗೆ ಮಾರಾಟ ಮಾಡುತ್ತಿದ್ದರು.

ಬರೋಬ್ಬರಿ 15 ಲಕ್ಷ ರೂ ಮೌಲ್ಯದ ನಕಲಿ ಬ್ರ್ಯಾಂಡೆಡ್ ಶೂಗಳು ವಶಕ್ಕೆ

ಈ ಕುರಿತು ಸುಳಿವು ಸಿಕ್ಕ ಯಶವಂತಪುರ ಪೊಲೀಸರು ಪೋರ್ ಕೆ ಶೂಸ್ ಅಂಗಡಿ ಗೊಡೌನ್ ಮೇಲೆ ದಾಳಿ ನಡೆಸಿ ಮೊಹಮ್ಮದ್ ಇಮ್ರಾನ್ ಎಂಬ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಈ ದಾಳಿಯ ವೇಳೆ ಪ್ರತಿಷ್ಟಿತ ಬ್ರಾಂಡ್ ಗಳಾದ ಕ್ರಾಕ್ಸ್, ನೈಕಿ, ಪೊಲೋ, ರಾಲ್ಪ್ ಲಾರೆನ್ಸ್ ಬ್ರಾಂಡ್ ನ ನಕಲಿ ಶೂಗಳು ಮತ್ತು ಚಪ್ಪಲಿಗಳು ಸೀಜ್​ ಆಗಿವೆ. ಒಟ್ಟೂ ಹದಿನೈದು ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರು ವಿಚಾರಣೆ ನಡೆಸಿದಾಗ ಬ್ರಾಂಡೆಡ್ ಶೂ ಚಪ್ಪಲಿಗಳನ್ನ ನಕಲು ಮಾಡಿ ಪಂಜಾಬ್ನ ಲೂಧಿಯಾನದಿಂದ ಬೆಂಗಳೂರಿಗೆ ಈ ವಸ್ತುಗಳು ರಫ್ತಾಗುತ್ತಿದೆ ಎಂದು ತಿಳಿದು ಬಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

 

 

 

Published On - 11:51 am, Sun, 12 October 25