ಬೆಂಗಳೂರು: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ನಿಗದಿಪಡಿಸಿದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇಯಲ್ಲಿ (Bengaluru-Mysuru Expressway) ಪ್ರಯಾಣಿಸುವ ಏಕಮುಖ ಪ್ರಯಾಣದ ಟೋಲ್ ಶುಲ್ಕದ ಬಗ್ಗೆ ಸ್ಥಳೀಯ ನಿವಾಸಿಗಳು ಮಾತ್ರವಲ್ಲದೆ ವಿವಿಧ ಸಂಘಟನೆಗಳು ಕೂಡ ಆಕ್ರೋಶ ಹೊರಹಾಕಿವೆ. ಟೆಕ್ಕಿ ಮತ್ತು ಸ್ವತಂತ್ರ ರಾಜಕೀಯ ಸಲಹೆಗಾರ ಎಂದು ಟ್ವಿಟರ್ ಪ್ರೊಫೈಲ್ನಲ್ಲಿ ಬರೆದುಕೊಂಡಿರುವ ರೋಹಿತ್ ಎಂಬವರು, ಟೋಲ್ ಸಂಗ್ರಹವನ್ನು ಹಗಲು ದರೋಡೆ ಎಂದು ಆರೋಪಿಸಿದ್ದು, ಇವರ ಟ್ವೀಟ್ಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಎರಡು ದಿನಗಳ ಹಿಂದೆ ಟ್ವೀಟ್ ಮಾಡಿದ್ದ ರೋಹಿತ್, “ನಾನು ನಿನ್ನೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಗೆ ಟೋಲ್ ಶುಲ್ಕವಾಗಿ 320 ಪಾವತಿಸಿದ್ದೇನೆ. ಫಾಸ್ಟ್‌ಟ್ಯಾಗ್ ಸ್ಟೇಟ್ಮೆಂಟ್ನಿಂದ ನಾನು ಇದನ್ನು ದೃಢಪಡಿಸಿದೆ. ಇದು ಹಗಲು ಲೂಟಿ. 140 ಕಿಮೀ ಹೆದ್ದಾರಿಗೆ 320 ರೂಪಾಯಿ (ಕಾರು) ಟೋಲ್ ಶುಲ್ಕ” ಎಂದು ಬರೆದುಕೊಂಡಿದ್ದಾರೆ.
Yes I have paid 320 yesterday as toll charge for Bengaluru- Mysuru expressway ….
I confirmed from FASTag statements
This is day light loot
140 kms – 320 rupees as toll charge
— Rohith (@rohit1286) July 2, 2023
ರೋಹಿತ್ ಟ್ವೀಟ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮಾಜಿ ಪತ್ರಕರ್ತ ವೆಂಕಿ, “ಎಕ್ಸ್ ಪ್ರೆಸ್ ವೇ ಉದ್ದ ಕೇವಲ 110 ಕಿ.ಮೀ! 320 ರೂ. ಅಂದರೆ ಪ್ರತಿ ಕಿ.ಮೀ.ಗೆ 3 ರೂ. ಬೀಳುತ್ತದೆ. ನೀವು ಟೋಲ್ ರಹಿತ ರಸ್ತೆಗಳನ್ನು ಸಹ ತೆಗೆದುಕೊಳ್ಳಬಹುದು” ಎಂದಿದ್ದಾರೆ.
ರಾಮಕೃಷ್ಣ ಅಯ್ಯರ್ ಎಂಬವರು ಪ್ರತಿಕ್ರಿಯಿಸಿ, “ಅದಕ್ಕೇ ಇದನ್ನು ಎಕ್ಸ್‌ಪ್ರೆಸ್ ವೇ ಎಂದು ಕರೆಯಲಾಗುತ್ತದೆ” ಎಂದರು. ಟೋಲ್ ಶುಲ್ಕು ಪಾವತಿಸಲು ಬಯಸುವುದಿಲ್ಲವೆಂದರೆ ಪರ್ಯಾಯ ರಸ್ತೆಗಳನ್ನು ಬಳಸಿ. ಸಾಕಷ್ಟು ರಸ್ತೆಗಳಿವೆ. ನೀವು ಉತ್ತಮ ಗುಣಮಟ್ಟದ ರಸ್ತೆಗಳನ್ನು ಬಯಸುತ್ತೀರಿ. ಆದರೆ ಪಾವತಿಸಲು ಬಯಸುವುದಿಲ್ಲ” ಎಂದು ಹೇಳಿದ್ದಾರೆ.
ಜುಲೈ 1 ರಂದು, ಮಂಡ್ಯದ ಶ್ರೀರಂಗಪಟ್ಟಣದ ಬಳಿಯ ಗಣಂಗೂರು ಟೋಲ್ ಪ್ಲಾಜಾದಲ್ಲಿ ಟೋಲ್ ಸಂಗ್ರಹಿಸಲು ಪ್ರಾರಂಭಿಸಿತು. ಕಾರುಗಳು, ಜೀಪ್‌ಗಳು ಮತ್ತು ಇತರ ಲಘು ಮೋಟಾರು ವಾಹನಗಳು (LMV) ಎಕ್ಸ್ಪ್ರೆಸ್ವೇನಲ್ಲಿ ಏಕಮುಖ ಪ್ರಯಾಣಕ್ಕೆ 320 ರೂ. ಟೋಲ್ ಪಾವತಿಸಬೇಕು. ಅದೇ ದಿನ ಹಿಂದಿರುಗುವ ಪ್ರಯಾಣಕ್ಕೆ ರೂ.485 ರೂ. ವೆಚ್ಚ ತಗುಲುತ್ತದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ