Bengaluru-Mysuru Expressway: ಉದ್ಘಾಟನೆಯಾದಗಿನಿಂದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಸಂಭವಿಸಿದ ಅಪಘಾತಗಳೆಷ್ಟು? ಇಲ್ಲಿದೆ ಅಂಕಿ-ಅಂಶ

ಎಕ್ಸ್‌ಪ್ರೆಸ್‌ವೇನಲ್ಲಿ ಅಲ್ಪಾವಧಿಯಲ್ಲಿಯೇ ಹಲವಾರು ಸಾವು-ನೋವುಗಳು ಸಂಭವಿಸಿದ್ದು ಪೊಲೀಸರು ಈ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ. ಖುದ್ದು ಎಡಿಜಿಪಿ ಅಲೋಕ್ ಕುಮಾರ್ ಅವರು ಬೆಂಗಳೂರು ದಕ್ಷಿಣ ತಾಲೂಕಿನ‌ ಬಾಬಾಸಾಹೇಬರ ಪಾಳ್ಯ ಬಳಿ ಹೈವೇಯನ್ನು ಪರಿಶೀಲಿಸಿ ಕ್ರಮಕ್ಕೆ ಸೂಚಿಸಿದ್ದಾರೆ.

Bengaluru-Mysuru Expressway: ಉದ್ಘಾಟನೆಯಾದಗಿನಿಂದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಸಂಭವಿಸಿದ ಅಪಘಾತಗಳೆಷ್ಟು? ಇಲ್ಲಿದೆ ಅಂಕಿ-ಅಂಶ
ಬೆಂಗಳೂರು ಮೈಸೂರು ಎಕ್ಸ್​​ಪ್ರೆಸ್​​ ವೇ
Follow us
| Updated By: ಆಯೇಷಾ ಬಾನು

Updated on: Jul 04, 2023 | 8:34 AM

ಬೆಂಗಳೂರು ಮತ್ತು ಮೈಸೂರು ನಗರವನ್ನು ಸಂಪರ್ಕಿಸುವ ಎಕ್ಸ್‌ಪ್ರೆಸ್ ವೇ ಸಾವಿನ(Bengaluru-Mysuru Expressway) ಹೆದ್ದಾರಿಯಾಗಿ ಬದಲಾಗುತ್ತಿದೆ. ಈ ವರ್ಷದ ಜನವರಿಯಿಂದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ 132 ಅಪಘಾತಗಳು(Accident) ಸಂಭವಿಸಿದ್ದು, ಮಾರ್ಚ್ 12 ರಿಂದ ಅಂದ್ರೆ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಅಧಿಕೃತವಾಗಿ ಉದ್ಘಾಟಿಸಿದ ದಿನದಿಂದ 100 ಅಪಘಾತಗಳು ಸಂಭವಿಸಿವೆ.

ದಿನೇ ದಿನೇ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಕರ್ನಾಟಕ ಪೊಲೀಸರು ಮತ್ತು ಹೆದ್ದಾರಿ ಅಧಿಕಾರಿಗಳು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಮತ್ತು ಸಾವಿನ ಅಪಾಯವನ್ನು ಕಡಿಮೆ ಮಾಡಲು ಮುನ್ನೆಚ್ಚರಿಕೆ ಕ್ರಮಕ್ಕೆ ಮುಂದಾಗಿದ್ದಾರೆ. ಚನ್ನಪಟ್ಟಣ-ಮಂಡ್ಯ ದಾರಿ ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಇಲ್ಲಿ ಜೂನ್ 30 ರವರೆಗೆ ಸುಮಾರು 172 ಅಪಘಾತಗಳು ಸಂಭವಿಸಿದ್ದು 49 ಸಾವುಗಳಾಗಿವೆ ಎಂದು ಖಾಸಗಿ ಸುದ್ದಿ ಪತ್ರಿಕೆ ವರದಿ ಮಾಡಿದೆ.

ಎಕ್ಸ್‌ಪ್ರೆಸ್‌ವೇನಲ್ಲಿ ಅಲ್ಪಾವಧಿಯಲ್ಲಿಯೇ ಹಲವಾರು ಸಾವು-ನೋವುಗಳು ಸಂಭವಿಸಿದ್ದು ಪೊಲೀಸರು ಈ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ. ಖುದ್ದು ಎಡಿಜಿಪಿ ಅಲೋಕ್ ಕುಮಾರ್ ಅವರು ಬೆಂಗಳೂರು ದಕ್ಷಿಣ ತಾಲೂಕಿನ‌ ಬಾಬಾಸಾಹೇಬರ ಪಾಳ್ಯ ಬಳಿ ಹೈವೇಯನ್ನು ಪರಿಶೀಲಿಸಿ ಕ್ರಮಕ್ಕೆ ಸೂಚಿಸಿದ್ದಾರೆ.

ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಹೆಚ್ಚಿನ ಗಸ್ತು ವಾಹನಗಳನ್ನು ನಿಯೋಜಿಸುವುದು, ಟ್ರಾಫಿಕ್ ಉಲ್ಲಂಘನೆ ಪತ್ತೆ ವ್ಯವಸ್ಥೆಗಳನ್ನು ಸ್ಥಾಪಿಸುವುದು, ಸೈನ್‌ಬೋರ್ಡ್‌ಗಳನ್ನು ಹೆಚ್ಚಿಸುವುದು, ಸ್ಪೀಡ್ ರಾಡಾರ್ ಗನ್‌ಗಳು ಮತ್ತು ಇತರ ಸಾಧನಗಳೊಂದಿಗೆ ಗಸ್ತು ಅಧಿಕಾರಿಗಳನ್ನು ಸಜ್ಜುಗೊಳಿಸುವುದು ಸೇರಿದಂತೆ ಅಪಘಾತಗಳು ಮತ್ತು ಸಾವುಗಳನ್ನು ಕಡಿಮೆ ಮಾಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಇದನ್ನೂ ಓದಿ: Bengaluru-Mysore Expressway: ಹೆಚ್ಚುತ್ತಿರುವ ಅಪಘಾತ ಪ್ರಕರಣಗಳು, ಎಡಿಜಿಪಿ ಅಲೋಕ್ ಕುಮಾರ್​ ಪರಿಶೀಲನೆ

ಕರ್ನಾಟಕದ ಸಂಚಾರ ಮತ್ತು ರಸ್ತೆ ಸುರಕ್ಷತೆಯ ಎಡಿಜಿಪಿ ಅಲೋಕ್ ಕುಮಾರ್ ಅವರು ಎಕ್ಸ್‌ಪ್ರೆಸ್‌ವೇಯಲ್ಲಿ ರಸ್ತೆ ಬಳಕೆದಾರರ ಸುರಕ್ಷತೆಗೆ ಅಡ್ಡಿಯುಂಟುಮಾಡುವಂತಹ ಸಮಸ್ಯೆಗಳಿರುವುದನ್ನು ಒಪ್ಪಿಕೊಂಡಿದ್ದಾರೆ. ಇಲ್ಲಿ ಕೆಲವು ಸಮಸ್ಯೆಗಳಿವೆ, ಯಾವುದೂ ಇಲ್ಲ ಎಂದು ನಾವು ಹೇಳಲು ಸಾಧ್ಯವಿಲ್ಲ. ಇಲ್ಲಿರುವ ಸೂಚನೆಗಳನ್ನು ಹೊಂದಿರುವ ಫಲಕಗಳು ಸಾಕಾಗುವುದಿಲ್ಲ. ಈ ಎಕ್ಸ್‌ಪ್ರೆಸ್‌ವೇಯಂತಹ ಹೆಚ್ಚಿನ ವೇಗದ ಹೆದ್ದಾರಿಗಳಲ್ಲಿ ನಿರಂತರವಾಗಿ ಸೂಚನಾ ಫಲಕಗಳನ್ನು ಹಾಕಬೇಕು ಎಂದರು.

ಹೆಚ್ಚಿನ ಅಪಘಾತಗಳ ಅಪಾಯವು ರಸ್ತೆಯ ಸ್ಥಿತಿ ಮತ್ತು ಚಾಲಕರ ದೋಷಗಳ ಸಂಯೋಜನೆಯಾಗಿದೆ. ರಸ್ತೆಯ ಏರಿಳಿತವು ರಸ್ತೆ ಬಳಕೆದಾರರ ನಿರ್ಲಕ್ಷ್ಯದೊಂದಿಗೆ ಗಂಭೀರವಾದ ಸುರಕ್ಷತೆಯ ಅಪಾಯವನ್ನು ಉಂಟುಮಾಡಬಹುದು ಎಂದು ಎಡಿಜಿಪಿ ಅಲೋಕ್ ಕುಮಾರ್ ವಿವರಿಸಿದರು. ಹಾಗೂ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಮಾತ್ರವೇ ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತಗಳು ಸಂಭವಿಸಿವೆ ಅಂತಲ್ಲ. ದೇಶದಲ್ಲಿ ಈ ರೀತಿಯ ಹೆದ್ದಾರಿಗಳು ಅನೇಕ ಇವೆ ಎಂದು ಅಲೋಕ್ ಕುಮಾರ್ ಒತ್ತಿ ಹೇಳಿದರು.

ಇತರ ಎಕ್ಸ್‌ಪ್ರೆಸ್‌ವೇಗಳು, ನಿರ್ದಿಷ್ಟವಾಗಿ ಮುಂಬೈ-ಪುಣೆ, ಹೆಚ್ಚಿನ ಪ್ರಮಾಣದ ಅಪಘಾತಗಳನ್ನು ವರದಿ ಮಾಡಿದೆ. ಆರಂಭದಲ್ಲಿ ಜನರು ಹೆಚ್ಚು ಜಾಗರೂಕರಾಗಿರುವುದಿಲ್ಲ. ಕಾಲ ಬದಲಾದಂತೆ ಎಚ್ಚರಿಕೆಯಿಂದ ವಾಹನ ಚಾಲನೆ ಮಾಡುತ್ತಾರೆ. ಆಗ ಅಪಘಾತ ಕೂಡ ಕಡಿಮೆಯಾಗುತ್ತದೆ ಎಂದರು.

ಕಳೆದ ಆರು ತಿಂಗಳಲ್ಲಿ ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿ 48 ಅಪಘಾತಗಳಲ್ಲಿ 58 ಜನರು ಸಾವನ್ನಪ್ಪಿದ್ರೆ, ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ 64 ಜನರು ಸಾವನ್ನಪ್ಪಿದ್ದಾರೆ. ಒಟ್ಟು ಐದೂವರೆ ತಿಂಗಳಲ್ಲಿ 122 ಜನರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಹಲವು ದೂರುಗಳು, ಜನಪ್ರತಿನಿಧಿಗಳು ಸಹಾ ಸಭೆಗಳಲ್ಲಿ ಪ್ರಸ್ತಾಪ ಮಾಡಿದ್ರು. ಅಲ್ಲದೆ ಟಿವಿ9 ಕೂಡ ವರದಿ ಬಿತ್ತರ ಮಾಡಿತ್ತು. ಈ ನಿಟ್ಟಿನಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಪರಿಶೀಲನೆ ನಡೆಸಿದ್ರು. ಹೆದ್ದಾರಿ ಪರಿಶೀಲನೆ ನಂತರ ಎನ್ ಹೆಚ್ ಎ ಐ, ಡಿಬಿಎಲ್ ಕಂಪನಿ, ಆರ್ ಟಿಓ, ಪಿಬ್ಲೂಡಿ, ಆರೋಗ್ಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಅಪಘಾತ ತಡೆಗಟ್ಟುವ ನಿಟ್ಟಿನಲ್ಲಿ ಹಲವು ಸೂಚನೆಗಳನ್ನ ಕೊಟ್ಟರು. ಇನ್ನು ಕೆಲವೇ ತಿಂಗಳಲ್ಲಿ ಅಪಘಾತ ಸಂಖ್ಯೆ ಶೇ 25ರಷ್ಟು ಕಡಿಮೆ ಮಾಡುವುದಾಗಿ ಕೂಡ ತಿಳಿಸಿದ್ರು. ಇನ್ನು ಈ ಬಗ್ಗೆ ಮಾತನಾಡಿದ ಎನ್ ಹೆಚ್ ಎ ಐ ಪಿಡಿ, ಹಲವು ಸೂಚನೆಗಳನ್ನ ಪೊಲೀಸ್ ಅಧಿಕಾರಿಗಳು ನೀಡಿದ್ದಾರೆ. ಈ ಬಗ್ಗೆ ನಮ್ಮ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಶೀಘ್ರವೇ ಸಮಸ್ಯೆ ಬಗೆಹರಿಸುತ್ತೇವೆ ಎಂದರು.

ಮೈಸೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ವಿಡಿಯೋ: ವೀಕೆಂಡ್​ನಲ್ಲಿ ಅಭಿಮಾನಿಗಳ ಭೇಟಿ ಮಾಡಿದ ಧ್ರುವ ಸರ್ಜಾ
ವಿಡಿಯೋ: ವೀಕೆಂಡ್​ನಲ್ಲಿ ಅಭಿಮಾನಿಗಳ ಭೇಟಿ ಮಾಡಿದ ಧ್ರುವ ಸರ್ಜಾ
ರೀಲ್ಸ್​ ಹುಚ್ಚು, 10ಮೀ. ಎತ್ತರದ ಸೈನ್‌ಬೋರ್ಡ್ ಮೇಲೆ ಯುವಕನ ಸಾಹಸ
ರೀಲ್ಸ್​ ಹುಚ್ಚು, 10ಮೀ. ಎತ್ತರದ ಸೈನ್‌ಬೋರ್ಡ್ ಮೇಲೆ ಯುವಕನ ಸಾಹಸ
ಬಿಜೆಪಿಯಲ್ಲಿ ತೀವ್ರಗೊಂಡ ವಿಜಯೇಂದ್ರ ಹಠಾವೋ ಹೋರಾಟ
ಬಿಜೆಪಿಯಲ್ಲಿ ತೀವ್ರಗೊಂಡ ವಿಜಯೇಂದ್ರ ಹಠಾವೋ ಹೋರಾಟ
CPL 2024: ಫಾಫ್ ಡುಪ್ಲೆಸಿಸ್ ಸ್ಪೋಟಕ ಬ್ಯಾಟಿಂಗ್: ಆದರೂ ಸೋತರು..!
CPL 2024: ಫಾಫ್ ಡುಪ್ಲೆಸಿಸ್ ಸ್ಪೋಟಕ ಬ್ಯಾಟಿಂಗ್: ಆದರೂ ಸೋತರು..!
ನೇರ ಪ್ರಸಾರದಲ್ಲಿ ಅಳುತ್ತಾ ಸುದ್ದಿ ಓದಿದ​​ ಆ್ಯಂಕರ್​; ಕಾರಣ ಏನು ಗೊತ್ತಾ?
ನೇರ ಪ್ರಸಾರದಲ್ಲಿ ಅಳುತ್ತಾ ಸುದ್ದಿ ಓದಿದ​​ ಆ್ಯಂಕರ್​; ಕಾರಣ ಏನು ಗೊತ್ತಾ?
ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ