ಬೆಂಗಳೂರು: ಬೆಂಗಳೂರಿನಲ್ಲಿ ಬಸ್ನಲ್ಲಿ ಓಡಾಡುವವರಷ್ಟೇ ಕ್ಯಾಬ್, ಆಟೋಗಳ ಮೇಲೆ ಅವಲಂಬಿತರಾದವರೂ ಇದ್ದಾರೆ. ನೀವು ಕೂಡ ಆಟೋದಲ್ಲಿ ಓಡಾಡುವವರಾಗಿದ್ದರೆ ಸದ್ಯದಲ್ಲೇ ನಿಮ್ಮ ಜೇಬಿಗೆ ಕತ್ತರಿ ಬೀಳುವುದು ಗ್ಯಾರಂಟಿ. ಏಕೆಂದರೆ ಆಟೋರಿಕ್ಷಾದ ಬೆಲೆಯನ್ನು ಏರಿಕೆ ಮಾಡಲು ನಿರ್ಧರಿಸಲಾಗಿದ್ದು, ಈ ನೂತನ ದರ ಯಾವಾಗಿನಿಂದ ಜಾರಿಗೆ ಬರಲಿದೆ ಎಂಬುದು ಇನ್ನೂ ಖಚಿತವಾಗಿಲ್ಲ. ಇದುವರೆಗೂ ಆಟೋ ಹತ್ತಿದರೆ ಕನಿಷ್ಟ 25 ರೂ. ಕೊಡಬೇಕಾಗಿತ್ತು. ಆದರೆ, ಇನ್ನುಮುಂದೆ 30 ರೂ. ನಿಗದಿ ಮಾಡಲು ನಿರ್ಧರಿಸಲಾಗಿದೆ.
ಈ ಮೂಲಕ ಬೆಂಗಳೂರಿನ ಆಟೋ ಪ್ರಯಾಣಿಕರಿಗೆ ಬೆಲೆಯೇರಿಕೆಯ ಶಾಕ್ ಉಂಟಾಗಲಿದೆ. ಆಟೋ ಚಾಲಕರ ಒತ್ತಾಯಕ್ಕೆ ಮಣಿದಿರುವ ಸರ್ಕಾರ ಆಟೋ ರಿಕ್ಷಾ ಪ್ರಯಾಣ ದರವನ್ನು ಏರಿಕೆ ಮಾಡಲು ನಿರ್ಧರಿಸಿದೆ. ನೂತನ ಬೆಲೆ ಜಾರಿಗೆ ಬಂದರೆ ಆಟೋದಲ್ಲಿ ಕನಿಷ್ಟ 25 ರೂ. ಬದಲು 30 ರೂ, 1 ಕಿ.ಮೀಗೆ 13 ರೂ. ಬದಲಾಗಿ 15 ರೂ. ಆಗಲಿದೆ.
ಈ ಹಿಂದೆ 2013ರಲ್ಲಿ ಬೆಂಗಳೂರಿನಲ್ಲಿ ಆಟೋ ಪ್ರಯಾಣದ ದರ ಏರಿಕೆ ಮಾಡಲಾಗಿತ್ತು. ಅದಾದ ಬಳಿಕ ಬೆಲೆಯೇರಿಕೆ ಮಾಡಿರಲಿಲ್ಲ. ಕಳೆದ 8 ವರ್ಷಗಳಲ್ಲಿ ಗ್ಯಾಸ್, ತರಕಾರಿ, ಬಸ್ ಪ್ರಯಾಣ ದರ ಎಲ್ಲವೂ ಏರಿಕೆಯಾಗಿದೆ. ಈಗಾಗಿ, ಆಟೋ ದರವನ್ನು ಕೂಡ ಹೆಚ್ಚಿಸಬೇಕೆಂದು ಆಟೋ ಚಾಲಕರು ಸರ್ಕಾರಕ್ಕೆ ಒತ್ತಾಯಿಸಿದ್ದರು.
ಸದ್ಯದಲ್ಲೇ ರಾಜ್ಯ ಸಾರಿಗೆ ಇಲಾಖೆ ಬೆಂಗಳೂರಿನಲ್ಲಿ ಆಟೋ ರಿಕ್ಷಾ ಪ್ರಯಾಣದ ದರವನ್ನು ಏರಿಕೆ ಮಾಡುವ ಸಾಧ್ಯತೆಯಿದ್ದು, ಮೂಲ ದರವನ್ನು 25 ರೂ.ನಿಂದ 30 ರೂ.ಗೆ ಏರಿಸುವ ಸಾಧ್ಯತೆಯಿದೆ. ಸದ್ಯಕ್ಕೆ ಬೆಂಗಳೂರಿನಲ್ಲಿ ಆಟೋಗೆ 1 ಕಿ.ಮೀಗೆ 13 ರೂ. ಕನಿಷ್ಠ ದರವಿದೆ. ಈ ದರವನ್ನು 15 ರೂ.ಗೆ ಹೆಚ್ಚಿಸುವ ಸಾಧ್ಯತೆಯಿದೆ.
ಇದನ್ನೂ ಓದಿ: Bengaluru: ಬೆಂಗಳೂರಿನಲ್ಲಿ ಡೆಂಗ್ಯೂ ಜ್ವರದ ಪ್ರಕರಣಗಳ ಏರಿಕೆ; ಬಿಬಿಎಂಪಿಯಿಂದ ಮನೆ ಮನೆ ಸಮೀಕ್ಷೆ
Karnataka Weather Today: ಬೆಂಗಳೂರಿನಲ್ಲಿ ಇಂದೂ ಮಳೆ ಸಾಧ್ಯತೆ; ಕರ್ನಾಟಕದಲ್ಲಿ ನಾಳೆಯಿಂದ ಆರೆಂಜ್ ಅಲರ್ಟ್ ಘೋಷಣೆ