Bangalore Rain: ಧರೆಗುರುಳಿದ್ದ ಮರಕ್ಕೆ ಬೈಕ್ ಡಿಕ್ಕಿಯಾಗಿ ಸವಾರ ಮೃತ, ರಾಜಕಾಲುವೆ ನೀರು ನುಗ್ಗಿ 10 ಕ್ಕೂ ಹೆಚ್ಚು ಜಾನುವಾರು ಸಾವು

ಬೆಂಗಳೂರಿನಲ್ಲಿ ಮಳೆಯಿಂದ ಹಲವೆಡೆ ಅನಾಹುತ ಸಂಭವಿಸಿದೆ. ಮಳೆಯಿಂದಾಗಿ ಧರೆಗುರುಳಿದ್ದ ಮರಕ್ಕೆ ಡಿಕ್ಕಿಯಾಗಿ ಬೈಕ್ ಸವಾರರೊಬ್ಬರು ಮೃತಪಟ್ಟಿರುವ ಘಟನೆ ವರದಿಯಾಗಿದೆ. ಹಾಗೆಯೇ ರಾಜಕಾಲುವೆ ನೀರು ನುಗ್ಗಿದ ಪರಿಣಾಮ ಹತ್ತಕ್ಕೂ ಹೆಚ್ಚುಜಾನುವಾರುಗಳು ಮೃತಪಟ್ಟ ಘಟನೆ ನಡೆದಿದೆ. ನಗರದ ವಿವಿಧ ಪ್ರದೇಶಗಳಲ್ಲಿ ಮಳೆಯಿಂದ ಆಗಿರುವ ಹಾನಿಯ ಕುರಿತ ಮಾಹಿತಿ ಇಲ್ಲಿದೆ.

Bangalore Rain: ಧರೆಗುರುಳಿದ್ದ ಮರಕ್ಕೆ ಬೈಕ್ ಡಿಕ್ಕಿಯಾಗಿ ಸವಾರ ಮೃತ, ರಾಜಕಾಲುವೆ ನೀರು ನುಗ್ಗಿ 10 ಕ್ಕೂ ಹೆಚ್ಚು ಜಾನುವಾರು ಸಾವು
ಮಳೆ
Follow us
TV9 Web
| Updated By: shivaprasad.hs

Updated on:Oct 04, 2021 | 10:05 AM

ಬೆಂಗಳೂರು: ಮಳೆ ಹಿನ್ನೆಲೆ ಧರೆಗುರುಳಿದ್ದ ಮರಕ್ಕೆ ಬೈಕ್ ಡಿಕ್ಕಿಯಾಗಿ ಸವಾರ ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಗರದಲ್ಲಿ ನಡೆದಿದೆ. ಮುಂಜಾನೆ 4.30ರ ಸುಮಾರಿಗೆ ಬೆಂಗಳೂರಿನ ಜಯನಗರದ ಸೌತ್‌ಎಂಡ್ ಸರ್ಕಲ್‌ನಲ್ಲಿ ಘಟನೆ ನಡೆದಿದೆ. ಮುಂಜಾನೆ ಅಂಗಡಿ ತೆರೆಯಲು ತೆರಳುತ್ತಿದ್ದ ನಾಗರಾಜ್ ಮೃತಪಟ್ಟ ದುರ್ದೈವಿಯಾಗಿದ್ದಾರೆ. ಅಪಘಾತದ ಸಂದರ್ಭದಲ್ಲಿ ಅವರ ತಲೆಗೆ ಗಂಭೀರ ಗಾಯವಾಗಿತ್ತು. ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ.

ರಾಜಕಾಲುವೆ ನೀರು ನುಗ್ಗಿ 10ಕ್ಕೂ ಹೆಚ್ಚು ಜಾನುವಾರು ಸಾವು: ಬೆಂಗಳೂರಿನಲ್ಲಿ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ರಾಜಕಾಲುವೆ ನೀರು ನುಗ್ಗಿ 10ಕ್ಕೂ ಹೆಚ್ಚು ಜಾನುವಾರು ಸಾವಿಗೀಡಾಗಿವೆ. ಮನೆ, ಕೊಟ್ಟಿಗೆಗೆ ಏಕಾಏಕಿ ನೀರು ನುಗ್ಗಿದ ಪರಿಣಾಮ, ಅಂದಾನಪ್ಪ ಎಂಬುವರಿಗೆ ಸೇರಿದ 5 ಹಸು, 6 ಮೇಕೆ ಮೃತಪಟ್ಟಿವೆ. ಜಾನುವಾರುಗಳಿಗೆ ಸಂಗ್ರಹಿಸಿಟ್ಟಿದ್ದ 30 ಮೂಟೆ ಹಿಂಡಿ, ಬೂಸ ಕೂಡ ನೀರು ಪಾಲಾಗಿದೆ.

ಬೆಂಗಳೂರಿನಲ್ಲಿ ಎಷ್ಟೆಷ್ಟು ಮಳೆ?: ನಗರದ ಜ್ಞಾನಭಾರತಿ ವ್ಯಾಪ್ತಿಯಲ್ಲಿ 98 ಮಿಲಿಮೀಟರ್ ಮಳೆಯಾಗಿದ್ದು, ನಾಗರಬಾವಿಯಲ್ಲಿ 91 ಮಿ.ಮೀ, ಹಂಪಿನಗರದಲ್ಲಿ 90 ಮಿ.ಮೀ ಮಳೆಯಾಗಿದೆ. ನಂದಿನಿಲೇಔಟ್- 78 ಮಿ.ಮೀ., ಹೆಗ್ಗನಹಳ್ಳಿ- 67.5 ಮಿ.ಮೀ., ಮಾರುತಿ ಮಂದಿರ- 64.5 ಮಿ.ಮೀ., ವಿ.ವಿ.ಪುರಂ- 58.5 ಮಿ.ಮೀ., R.R.ನಗರ- 53.5 ಮಿ.ಮೀ., ದಯಾನಂದ ನಗರ ವ್ಯಾಪ್ತಿಯಲ್ಲಿ 48.5 ಮಿ.ಮೀ. ಮಳೆಯಾಗಿದೆ.

 ನೀರು ನುಗ್ಗಿದ ಪರಿಣಾಮ ಹಲವೆಡೆ ಅವಾಂತರ: ಅರ್ಧಕ್ಕೆ ಕೈಬಿಟ್ಟ ರಾಜಕಾಲುವೆ ಕಾಮಗಾರಿಯಿಂದ ಹೊಯ್ಸಳ ನಗರದ ಜನಕ್ಕೆ ಸಮಸ್ಯೆಯಾಗಿದೆ. ಮನೆಗಳಿಗೆ ರಾಜಕಾಲುವೆ ನೀರು ನುಗ್ಗಿ ವಸ್ತುಗಳು ನೀರುಪಾಲಾಗಿದೆ. ಆರ್.ಆರ್.ನಗರದ ಪ್ರಮೋದ್ ಲೇಔಟ್‌ಗೆ ನೀರು ನುಗ್ಗಿ, 15ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದ್ದವು. ತಡೆಗೋಡೆ ಕುಸಿದು ಮನೆಗಳಿಗೆ ರಾಜಕಾಲುವೆ ನೀರು ನುಗ್ಗಿತ್ತು. ಹಲವೆಡೆ ಬೈಕ್, ಕಾರುಗಳು ನೀರಿನಲ್ಲಿ ಕೊಚ್ಚಿಹೋಗಿದ್ದು ವರದಿಯಾಗಿದೆ.

ಭಾರಿ ಮಳೆಯಿಂದ ಕೆರೆಯಂತಾಗಿರುವ ಮಲ್ಲತ್ತಹಳ್ಳಿ ಕೆರೆಯಂತಾಗಿದ್ದು, ಮನೆಗಳಿಗೆ ರಾಜಕಾಲುವೆ ನೀರು ನುಗ್ಗಿದೆ. ಇದರಿಂದಾಗಿ ಜನರು ಪರದಾಡುವಂತಾಗಿದೆ. ಕೋರಮಂಗಲದ 6ನೇ ಬ್ಲಾಕ್‌ನಲ್ಲೂ ಮನೆಗೆ ನೀರು ನುಗ್ಗಿದ್ದು, ರಸ್ತೆ, ಬದಿ ನಿಲ್ಲಿಸಿದ್ದ ಬೈಕ್, ಕಾರುಗಳು ನೀರಿನಲ್ಲಿ ಮುಳುಗಿದ್ದವು. ಸದ್ಯ ರಸ್ತೆಯಲ್ಲಿರುವ ನೀರು ತೆರವು ‌ಮಾಡಲಾಗಿದ್ದು, ನಿವಾಸಿಗಳು ಮನೆಗಳನ್ನು ಸ್ವಚ್ಛ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ.

ಬೆಂಗಳೂರು ನಗರದ ಹಲವೆಡೆ ಭಾರಿ ಮಳೆಗೆ ಆರ್.ಆರ್.ನಗರದಲ್ಲಿ 5 ಮರಗಳು ಧರೆಗುರುಳಿ ಬಿದ್ದಿವೆ. ಐಡಿಯಲ್ ಹೋಮ್ಸ್ ಟೌನ್‌ಶಿಪ್‌ಗೆ ನೀರು ನುಗ್ಗಿದೆ. ಮಲ್ಲೇಶ್ವರಂನ ಸಂಪಿಗೆ ರಸ್ತೆಯಲ್ಲಿ 2 ಮರ ಧರಾಶಾಹಿಯಾಗಿದ್ದು, ಬೆಂಗಳೂರು ಪೂರ್ವದಲ್ಲಿ 3 ಮರಗಳು ಧರೆಗುರುಳಿವೆ. ನಾಗರಬಾವಿ ಏರಿಯಾದಲ್ಲಿಯೂ ಭಾರಿ ಮಳೆ ಅವಾಂತರ ಸೃಷ್ಟಿಸಿದ್ದು, ಹೆಚ್‌ಎಎಲ್‌ನ ರಮೇಶ್‌ನಗರದಲ್ಲಿ ಗೋಡೆ ಕುಸಿದುಬಿದ್ದಿದೆ. ಇದರಿಂದಾಗಿ ಸುಮಾರು 4 ಕಾರು ಸಂಪೂರ್ಣ ಜಖಂಗೊಂಡಿತ್ತು. ಪ್ರಸ್ತುತ ಜಖಂಗೊಂಡಿದ್ದ ಕಾರುಗಳನ್ನು ತೆರವುಗೊಳಿಸುವ ಕಾರ್ಯ ನಡೆಸಲಾಗುತ್ತಿದೆ. ಮಹದೇವಪುರದಲ್ಲಿ10 ಅಡಿ ಕಾಂಪೌಂಡ್ ಗೋಡೆ ಕುಸಿದಿದ್ದು, ಕಾರು, ಬೈಕ್‌ಗಳಿಗೆ ಹಾನಿಯಾಗಿದೆ.

ಶಂಕರಮಠ ವಾರ್ಡ್, ಶಕ್ತಿಗಣಪತಿನಗರ ವಾರ್ಡ್, ಜೆ.ಸಿ.ನಗರ, ಕಮಲಾನಗರ ವ್ಯಾಪ್ತಿಯಲ್ಲಿ ಮನೆಗಳಿಗೆ ನುಗ್ಗಿದ ಮಳೆ ನೀರು ಅವಾಂತರ ಸೃಷ್ಟಿಸಿದೆ. ಅಲ್ಲಿ ಅನಾರೋಗ್ಯಪೀಡಿತ ಹಿರಿಯ ನಾಗರಿಕರ‌ ಮನೆಗಳೂ ನುಗ್ಗಿದ ಮಳೆ‌ ನೀರು ನುಗ್ಗಿದೆ. ಮನೆ ಮುಂದೆ ನಿಂತ ವಾಹನಗಳೂ ಜಲಾವೃತಗೊಂಡಿವೆ. ಮೈಸೂರು ರಸ್ತೆಯಲ್ಲಿರುವ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೂ ನೀರು ನುಗ್ಗಿದೆ.

ಭಾರಿ ಮಳೆಯ ಕಾರಣ ಲಹರಿ ವೇಲು ಅವರ ಮನೆಗೂ ನೀರು ನುಗ್ಗಿದೆ. ಬೆಂಗಳೂರಿನ RMV ಲೇಔಟ್‌ನಲ್ಲಿರುವ ಅವರ ಮನೆಯ ನೆಲಮಹಡಿಯಲ್ಲಿ 5 ಅಡಿಯಷ್ಟು ನೀರು ನಿಂತಿದೆ. ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಹಿನ್ನೆಲೆಯಲ್ಲಿ ಮಳೆ ಮತ್ತಷ್ಟು ಅವಾಂತರ ಸೃಷ್ಟಿಸಿದೆ. ಕಮರ್ಷಿಯಲ್ ಸ್ಟ್ರೀಟ್ ಮಳಿಗೆಗಳಿಗೆ ನೀರು ನುಗ್ಗಿದ್ದು, ಅವಾಂತರ ಸೃಷ್ಟಿಸಿದೆ.

ಇದನ್ನೂ ಓದಿ:

ಬೆಂಗಳೂರಿನಲ್ಲಿ ರಾತ್ರಿ ಸುರಿದ ಧಾರಾಕಾರ ಮಳೆಗೆ ಹಲವೆಡೆ ಮನೆ, ಅಂಗಡಿಗಳಿಗೆ ನುಗ್ಗಿದ ನೀರು; ಜನಜೀವನ ಅಸ್ತವ್ಯಸ್ತ

Karnataka Weather Today: ಬೆಂಗಳೂರಿನಲ್ಲಿ ಇಂದೂ ಮಳೆ ಸಾಧ್ಯತೆ; ಕರ್ನಾಟಕದಲ್ಲಿ ನಾಳೆಯಿಂದ ಆರೆಂಜ್ ಅಲರ್ಟ್ ಘೋಷಣೆ

Karnataka Dams Water Level: ರಾಜ್ಯದಲ್ಲಿ ಮಳೆ ಹೆಚ್ಚಳ; ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ

Published On - 9:57 am, Mon, 4 October 21

ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ