ಬೆಂಗಳೂರಿನಲ್ಲಿ ರಾತ್ರಿ ಸುರಿದ ಧಾರಾಕಾರ ಮಳೆಗೆ ಹಲವೆಡೆ ಮನೆ, ಅಂಗಡಿಗಳಿಗೆ ನುಗ್ಗಿದ ನೀರು; ಜನಜೀವನ ಅಸ್ತವ್ಯಸ್ತ

ರಾಜ್ಯ ರಾಜಧಾನಿಯಲ್ಲಿ ನಿನ್ನೆ ರಾತ್ರಿ ಮಳೆಯ ಆರ್ಭಟ ಜೋರಾಗಿ ಹಲವೆಡೆ ಅನಾಹುತ ಸಂಭವಿಸಿದೆ. ಕೆಲವೆಡೆ ಮನೆ, ಅಂಗಡಿಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ.

ಬೆಂಗಳೂರಿನಲ್ಲಿ ರಾತ್ರಿ ಸುರಿದ ಧಾರಾಕಾರ ಮಳೆಗೆ ಹಲವೆಡೆ ಮನೆ, ಅಂಗಡಿಗಳಿಗೆ ನುಗ್ಗಿದ ನೀರು; ಜನಜೀವನ ಅಸ್ತವ್ಯಸ್ತ
ಭಾರಿ ಮಳಗೆ ಅಂಗಡಿಯೊಳಗೆ ನೀರು ನುಗ್ಗಿರುವ ದೃಶ್ಯ
Follow us
TV9 Web
| Updated By: shivaprasad.hs

Updated on: Oct 04, 2021 | 7:10 AM

ಬೆಂಗಳೂರು: ನಗರದಲ್ಲಿ ರಾತ್ರಿ ಎರಡು ಗಂಟೆಗಳ ಕಾಲ ಸುರಿದ ಭಾರಿ ಮಳೆಗೆ ಹಲವೆಡೆ ಮನೆ, ಅಂಗಡಿಗಳಿಗೆ ನೀರು ನುಗ್ಗಿದೆ.  ಜೆ.ಸಿ.ನಗರ, ಸಂಪಂಗಿ ರಾಮನಗರದಲ್ಲಿ ನೀರು ಮನೆಗೆ ನುಗ್ಗಿ ಜನ ಪರದಾಡುತ್ತಿದ್ದಾರೆ. ರಾಜರಾಜೇಶ್ವರಿ ನಗರದ ಜನಪ್ರಿಯ ಲೇಔಟ್, ನಾಗರಬಾವಿ ಬಳಿಯ ಬಿಡಿಎ ಲೇಔಟ್‌, ಹೆಚ್‌ಎಎಲ್‌ನ ಬಸವನಗರದಲ್ಲೂ ಮನೆಗಳಿಗೆ ನೀರು ನುಗ್ಗಿದೆ. ರಾಜಾಜಿನಗರದ 5ನೇ ಬ್ಲಾಕ್‌ನಲ್ಲಿ ಬೃಹತ್ ಮರವೊಂದು ಧರೆಗುರುಳಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಿ ಹಾನಿಯಾಗಿಲ್ಲ. ಪ್ರಸ್ತುತ ಆ ರಸ್ತೆಯನ್ನು ಪೊಲೀಸರು ಬಂದ್ ಮಾಡಿದ್ದಾರೆ. 

ಬಿಬಿಎಂಪಿ ಕೇಂದ್ರ ಕಚೇರಿ ಹಿಂದಿನ ರಸ್ತೆಯ ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಜೆಸಿ ನಗರ ಹಾಗೂ ಸಂಪಂಗಿ ರಾಮನಗರದ ಹಲವೆಡೆ ರಸ್ತೆಯಲ್ಲಿನ ಡ್ರೈನೇಜ್ ಹಾಗೂ ರಾಜಕಾಲುವೆ ನೀರು ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿದೆ. ಬಿಬಿಎಂಪಿ ಅಧಿಕಾರಿಗಳು ಹಾಗೂ ಕಂಟ್ರೋಲ್ ರೂಂಗೆ ಜನರು ಸಹಾಯಕ್ಕಾಗಿ ಕರೆ ಮಾಡಿದರೂ ಅತ್ತ ಕಡೆಯಿಂದ ಉತ್ತರ ಸಿಕ್ಕಿಲ್ಲ. ಮಳೆ ಹಿನ್ನಲೆಯಲ್ಲಿ ಹಲವು ರಸ್ತೆಗಳು ಕೆಲ ಕಾಲ ಜಲಾವೃತಗೊಂಡಿದ್ದವು. ಸುಮಾರು ಒಂದು ಗಂಟೆಯ ಕಾಲ ರಸ್ತೆಯಲ್ಲಿ ನೀರು ನಿಂತಿತ್ತು. ಮಳೆ ನಂತರ ರಸ್ತೆಗಳು ಕೆಸರು ಗದ್ದೆಯಂತಾಹಿದ್ದು, ಸಂಚಾರಕ್ಕೆ ದುಸ್ತರವಾಗಿವೆ.

ಭಾರಿ ಮಳೆಗೆ ಹೆಚ್‌ಎಎಲ್ ಬಳಿಯ ರಮೇಶ್ ನಗರದಲ್ಲಿ ಗೋಡೆ ಕುಸಿತ: ಬೆಂಗಳೂರಿನಲ್ಲಿ ರಾತ್ರಿ ಸುರಿದ ಧಾರಾಕಾರ ಮಳೆಗೆ ಹಲವೆಡೆ ಅನಾಹುತ ಸಂಭವಿಸಿದೆ. ಹೆಚ್‌ಎಎಲ್ ಬಳಿಯ ರಮೇಶ್ ನಗರದಲ್ಲಿ, ಹೆಚ್‌ಎಎಲ್‌ಗೆ ಸೇರಿದ 12 ಅಡಿ ಎತ್ತರದ ಗೋಡೆ ಕುಸಿದಿದೆ. 12 ಅಡಿ ಎತ್ತರ ಹಾಗೂ 100 ಮೀಟರ್ ಉದ್ದದ ಗೋಡೆ ಕುಸಿದಿರುವ ಪರಿಣಾಮ, ರಸ್ತೆಬದಿ ನಿಲ್ಲಿಸಿದ್ದ ಆಟೋ, ಕಾರು, ಬೈಕ್ ಸೇರಿ 10ಕ್ಕೂ ಹೆಚ್ಚು ವಾಹನ ಜಖಂಗೊಂಡಿದೆ. ಹೆಚ್‌ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:

Drugs Case: ಮರಣ ದಂಡನೆ, ಜೀವಾವಧಿ ಶಿಕ್ಷೆ.. ಡ್ರಗ್ ಪ್ರಕರಣಗಳಿಗೆ ಈ ದೇಶಗಳಲ್ಲಿ ಇವೆ ಕಠಿಣ ಕಾನೂನು!

ಕರ್ನಾಟಕ ಹೈಕೋರ್ಟ್​ ಆದೇಶದಂತೆ ಕ್ರೈಂ ಸರಣಿಯಲ್ಲಿ ಮೊದಲ ಕಂತು ತೆಗೆದು ಹಾಕಿದ ನೆಟ್​ಫ್ಲಿಕ್ಸ್