ಕರ್ನಾಟಕ ಹೈಕೋರ್ಟ್​ ಆದೇಶದಂತೆ ಕ್ರೈಂ ಸರಣಿಯಲ್ಲಿ ಮೊದಲ ಕಂತು ತೆಗೆದು ಹಾಕಿದ ನೆಟ್​ಫ್ಲಿಕ್ಸ್

ನೆಟ್​ಫ್ಲಿಕ್ಸ್​ ರೂಪಿಸಿರುವ ಸರಣಿಯ ಒಂದು ಕಂತಿಗೆ ಕರ್ನಾಟಕ ಹೈಕೋರ್ಟ್​ ತಡೆಯಾಜ್ಞೆ ನೀಡಿದೆ. ಹೈಕೋರ್ಟ್ ಆದೇಶದಂತೆ ಸರಣಿಯ ಒಂದು ಕಂತನ್ನು ತೆಗೆದು ಹಾಕಲು ನೆಟ್​ಫ್ಲಿಕ್ಸ್​ ಒಪ್ಪಿಕೊಂಡಿದೆ

ಕರ್ನಾಟಕ ಹೈಕೋರ್ಟ್​ ಆದೇಶದಂತೆ ಕ್ರೈಂ ಸರಣಿಯಲ್ಲಿ ಮೊದಲ ಕಂತು ತೆಗೆದು ಹಾಕಿದ ನೆಟ್​ಫ್ಲಿಕ್ಸ್
ನೆಟ್​ಫ್ಲಿಕ್ಸ್​ ಸರಣಿ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Oct 03, 2021 | 9:52 PM

ಬೆಂಗಳೂರು: ಕರ್ನಾಟಕದ ಹಲವು ಅಪರಾಧ ಪ್ರಕರಣಗಳನ್ನು ‘ಇಂಡಿಯಾ ಡಿಟೆಕ್ಟಿವ್ಸ್​’ ಸಾಕ್ಷ್ಯಚಿತ್ರಗಳ ರೂಪದಲ್ಲಿ ವೀಕ್ಷಕರ ಮುಂದಿಡಲೆಂದು ನೆಟ್​ಫ್ಲಿಕ್ಸ್​ ರೂಪಿಸಿರುವ ಸರಣಿಯ ಒಂದು ಕಂತಿಗೆ ಕರ್ನಾಟಕ ಹೈಕೋರ್ಟ್​ ತಡೆಯಾಜ್ಞೆ ನೀಡಿದೆ. ಹೈಕೋರ್ಟ್ ಆದೇಶದಂತೆ ಸರಣಿಯ ಒಂದು ಕಂತನ್ನು ತೆಗೆದು ಹಾಕಲು ನೆಟ್​ಫ್ಲಿಕ್ಸ್​ ಒಪ್ಪಿಕೊಂಡಿದೆ. ಈ ಸಂಬಂಧ ಶ್ರೀಧರ್ ರಾವ್ ಎಂಬುವವರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಅಕ್ಟೋಬರ್ 1ರಂದು ಆದೇಶ ನೀಡಿತ್ತು. ಈ ಸರಣಿಯ ಮೊದಲ ಕಂತಿನಲ್ಲಿರುವ ಸಾಕ್ಷ್ಯಚಿತ್ರದಲ್ಲಿರುವ ಆರೋಪಿಗಳ ಪೈಕಿ ರಾವ್​ ಸಹ ಒಬ್ಬರು.

ನ್ಯಾಯಮೂರ್ತಿ ಬಿ.ಎಂ.ಶ್ಯಾಮ್​ಪ್ರಸಾದ್ ನೇತೃತ್ವದ ಏಕಸದಸ್ಯ ನ್ಯಾಯಪೀಠವು ಈ ಸಂಬಂಧ ಮಧ್ಯಂತರ ಆದೇಶ ಹೊರಡಿಸಿದೆ. ‘ಕ್ರೈಂ ಸ್ಟೋರಿಸ್: ಇಂಡಿಯಾ ಡಿಟೆಕ್ಟೀವ್ಸ್​’ ಸರಣಿಯಲ್ಲಿರುವ ‘ಎ ಮರ್ಡರ್ಡ್​ ಮದರ್’ ಹೆಸರಿನ ಕಂತನ್ನು ಪ್ರಸಾರ ಮಾಡುವಂತಿಲ್ಲ. ಅದು ಆನ್​ಲೈನ್​ನಲ್ಲಿ ಎಲ್ಲಿಯೂ ಸಿಗುವಂತೆ ಇರಬಾರದು’ ಎಂದು ನ್ಯಾಯಾಲಯವು ಸೂಚಿಸಿದೆ. ಸಾರ್ವಜನಿಕವಾಗಿ ಈ ಕಂಟೆಂಟ್ ನೋಡಲು ಸಿಗುವಂತಿರುವುದರಿಂದ ಹಿಂಸೆಯಾಗುತ್ತಿದೆ. ಇದು ನ್ಯಾಯಾಂಗ ನಿಂದನೆ ಎಂದು ಅರ್ಜಿದಾರ ರಾವ್ ಹೇಳಿದ್ದರು.

ಕ್ರೈಮ್ ಸಾಕ್ಷ್ಯಚಿತ್ರ ಸರಣಿಯ ಮೊದಲ ಕಂತಿನಲ್ಲಿ ಬೆಂಗಳೂರಿನಲ್ಲಿ ತಾಯಿಯನ್ನು ಮಗಳೇ ಕೊಂದ ಕಥೆಯಿದೆ. ಮಗಳ ಗೆಳೆಯನೊಬ್ಬ ಈ ಕೊಲೆಯಲ್ಲಿ ಶಾಮೀಲಾಗಿರುವಂತೆ ತೋರಿಸಲಾಗಿದೆ. ಶಂಕಿತರನ್ನು ಪೋರ್ಟ್​ಬ್ಲೇರ್​ನಲ್ಲಿ ಬಂಧಿಸಲಾಗಿತ್ತು. ‘ನಾನು ಸೆಕ್ಷನ್ 302, 307, 212, 201 ಹಾಗೂ 34ರ ಅನ್ವಯ ವಿಚಾರಣೆ ಎದುರಿಸುತ್ತಿದ್ದೇನೆ. ನೆಟ್​ಫ್ಲಿಕ್ಸ್​ ಸರಣಿಯಲ್ಲಿ ತನಿಖೆಗೆ ಬಳಕೆಯಾಗಿರುವ ಕೆಲ ಅಂಶಗಳು ಸೇರಿಕೊಂಡಿವೆ. ಇದು ನನ್ನ ರಕ್ಷಣೆಗೆ ಬಾಧಕವಾಗಬಹುದು. ನ್ಯಾಯಾಲಯದಲ್ಲಿ ನನ್ನ ವಾದವನ್ನು ದುರ್ಬಲಗೊಳಿಸಬಹುದು’ ಎಂದು ರಾವ್ ಅಭಿಪ್ರಾಯಪಟ್ಟಿದ್ದರು.

ತಪ್ಪೊಪ್ಪಿಗೆಯ ವಿಡಿಯೊ ತುಣುಕನ್ನೂ ಈ ಸರಣಿಯಲ್ಲಿ ಬಳಸಲಾಗಿದೆ ಎಂಬ ಅಂಶವನ್ನೂ ಅರ್ಜಿದಾರರು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಕಕ್ಷಿದಾರರಿಗೆ ಇರುವ ಮುಕ್ತ ಮತ್ತು ನ್ಯಾಯಸಮ್ಮತ ವಿಚಾರಣೆಯ ಹಕ್ಕನ್ನು ಇದು ಕಿತ್ತುಕೊಳ್ಳುತ್ತದೆ. ಯಾವುದೇ ಸಮರ್ಥನೆಯಿಲ್ಲದೆ ಖಾಸಗಿ ಬದುಕಿಗೂ ಧಕ್ಕೆ ತರುತ್ತದೆ. ಸಾರ್ವಜನಿಕವಾಗಿ ಅತ್ಯಂತ ಮುಜುಗರ ಉಂಟು ಮಾಡುವುದಲ್ಲದೆ, ಕಿರುಕುಳು ಅನುಭವಿಸುವಂತಾಗುತ್ತದೆ ಎಂದು ರಾವ್ ವಾದಿಸಿದ್ದರು.

ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸುವ ಮೊದಲು, ತಡೆಯಾಜ್ಞೆ ನೀಡುವಂತೆ ಕೋರಿ ಸಿವಿಲ್ ಕೋರ್ಟ್​ಗೆ ರಾವ್ ಅರ್ಜಿ ಸಲ್ಲಿಸಿದ್ದರು. ಆದರೆ ಸಿವಿಲ್ ಕೋರ್ಟ್​ ಮಧ್ಯಂತರ ಆದೇಶ ನೀಡಿರಲಿಲ್ಲ. ಹೀಗಾಗಿ ರಾವ್ ಕರ್ನಾಟಕ ಹೈಕೋರ್ಟ್​ ಮೊರೆ ಹೋಗಿದ್ದರು. ಹೈಕೋರ್ಟ್ ತನ್ನ ಮಧ್ಯಂತರ ಆದೇಶದಲ್ಲಿ ಸಾಕ್ಷ್ಯಚಿತ್ರ ಸರಣಿಯ ಮೊದಲ ಕಂತು ಪ್ರಸಾರ ಮಾಡುವುದನ್ನು ನಿರ್ಬಂಧಿಸಿದೆ.

(Netflix to Block Episode in Crime Documentary Series on the Basis of Karnataka High Court Order)

ಇದನ್ನೂ ಓದಿ: ಓಟಿಟಿಗೆ ಬಂತು ‘ತಲೈವಿ’; ಚಿತ್ರಮಂದಿರದಲ್ಲಿ ಸೋತ ಕಂಗನಾ ಸಿನಿಮಾಗೆ ನೆಟ್​ಫ್ಲಿಕ್ಸ್​ನಲ್ಲಿ ಸಿಗುತ್ತಾ ಜಯ? ಇದನ್ನೂ ಓದಿ: ಬೆಂಗಳೂರು ಅಪರಾಧ ಜಗತ್ತಿನ ನಾಲ್ಕು ಮುಖ್ಯ ಪ್ರಕರಣಗಳನ್ನು ತೆರೆದಿಡಲಿದೆ ನೆಟ್​ಫ್ಲಿಕ್ಸ್​ನ ಈ ಡಾಕ್ಯುಮೆಂಟರಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ