- Kannada News Photo gallery Bangalore rain Photos Water logged in to several homes in Bengaluru last night
Bengaluru Rain Photos: ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತ; ಪೋಟೋಗಳು ಇಲ್ಲಿವೆ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರಾತ್ರಿ ಸುರಿದ ಧಾರಾಕಾರ ಮಳೆಗೆ ಹಲವೆಡೆ ಮನೆ, ಅಂಗಡಿಗಳಿಗೆ ನೀರು ನುಗ್ಗಿ ಜನರು ಪರದಾಡುತ್ತಿದ್ದಾರೆ. ಮರಗಳು ಧರೆಗುರುಳಿವೆ.
Updated on:Oct 04, 2021 | 9:57 AM

ರಾಜಕಾಲುವೆ ನೀರು ನುಗ್ಗಿ 10ಕ್ಕೂ ಹೆಚ್ಚು ಜಾನುವಾರು ಸಾನ್ನಪ್ಪಿವೆ. ಮನೆ, ಕೊಟ್ಟಿಗೆಗೆ ಏಕಾಏಕಿ ನೀರು ನುಗ್ಗಿದ್ದರಿಂದ ಜಾನುವಾರು ಮೃತಪಟ್ಟಿವೆ.

ರಸ್ತೆಯಲ್ಲಿ ಹರಿಯುತ್ತಿರುವ ನೀರಿನಲ್ಲಿ ವ್ಯಕ್ತಿಯೊಬ್ಬ ಈಜಿದ್ದಾನೆ.

ಭಾರಿ ಮಳೆಯಿಂದ ಮಲ್ಲತ್ತಹಳ್ಳಿ ಕೆರೆಯಂತಾಗಿದೆ. ಮಳೆಯಿಂದ ಮನೆಗಳಿಗೆ ರಾಜಕಾಲುವೆ ನೀರು ನುಗ್ಗಿದೆ.

ಆರ್.ಆರ್.ನಗರದ ಪ್ರಮೋದ್ ಲೇಔಟ್ಗೆ ನೀರು ನುಗ್ಗಿದೆ. 15ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ. ಹಲವೆಡೆ ನೀರಿನಲ್ಲಿ ಬೈಕ್, ಕಾರುಗಳು ಕೊಚ್ಚಿ ಹೋಗಿವೆ.

ಮಳೆ ನೀರಿನ ಮಧ್ಯೆ ಬೈಕ್ ಸವಾರರು ಚಲಾಯಿಸಿದ್ದಾರೆ

ಮಳೆಯಿಂದ ಮನೆಯಲ್ಲಿದ್ದ ವಸ್ತುಗಳು ಹಾಳಾಗಿವೆ.

ನಾಗರಬಾವಿ ಏರಿಯಾದಲ್ಲಿಯೂ ಭಾರಿ ಮಳೆ ಸುರಿದಿದೆ. ಕಾಂಪೌಂಡ್ ಗೋಡೆ ಕುಸಿದುಬಿದ್ದು ಕಾರು, ಬೈಕ್ಗಳಿಗೆ ಹಾನಿಯಾಗಿದೆ.

ತಡರಾತ್ರಿ ಸುರಿದ ಭಾರಿ ಮಳೆಗೆ ಜೆ.ಸಿ.ನಗರ, ಸಂಪಂಗಿರಾಮನಗರದಲ್ಲಿ ನೀರು ಮನೆಗೆ ನುಗ್ಗಿದೆ.

ಕೋರಮಂಗಲದ 6ನೇ ಬ್ಲಾಕ್ನಲ್ಲಿ ಮನೆಗೆ ನೀರು ನುಗ್ಗಿದೆ. ರಸ್ತೆ, ಬದಿ ನಿಲ್ಲಿಸಿದ್ದ ಬೈಕ್, ಕಾರುಗಳು ನೀರಿನಲ್ಲಿ ಸಿಲುಕಿತ್ತು. ಸದ್ಯ ರಸ್ತೆಯಲ್ಲಿರುವ ನೀರು ತೆರವು ಮಾಡಲಾಗಿದೆ.

ಧಾರಾಕಾರ ಮಳೆಗೆ ವಾಹನಗಳು ಜಖಂಗೊಡಿವೆ.

ಮಳೆ ನಿಂತ ಬಳಿಕ ಮನೆಗಳಿಗೆ ನುಗ್ಗಿದ್ದ ನೀರನ್ನು ಹೊರಗೆ ಹಾಕುತ್ತಿದ್ದಾರೆ.

ಸಂಪಂಗಿರಾಮನಗರ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ರಸ್ತೆಯಲ್ಲಿನ ಡ್ರೈನೇಜ್ ಹಾಗೂ ರಾಜಕಾಲುವೆ ನೀರು ಮನೆಗೆ ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ವಯೋ ವೃದ್ಧರು ಪರದಾಡುತ್ತಿದ್ದಾರೆ.
Published On - 9:52 am, Mon, 4 October 21




