ಬಾಬರ್ ಅಜಮ್ ಟಿ 20 ಯಲ್ಲಿ ಅತಿ ವೇಗದ 7000 ರನ್ ಗಳಿಸಿದ್ದು ಮಾತ್ರವಲ್ಲ, ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್ ಕೂಡ ಆಗಿದ್ದಾರೆ. ಈ ಸಂದರ್ಭದಲ್ಲಿ, ಅವರು ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ ಅವರ ದಾಖಲೆಯನ್ನು ಮುರಿದಿದ್ದಾರೆ. ಬಾಬರ್ ಈ ಸಾಧನೆಯನ್ನು 26 ವರ್ಷ 353 ದಿನಗಳಲ್ಲಿ ಮಾಡಿದರೆ, ಕ್ವಿಂಟನ್ ಡಿ ಕಾಕ್ 28 ವರ್ಷ 285 ದಿನಗಳಲ್ಲಿ ಈ ದಾಖಲೆ ಮಾಡಿದರು. ವಿರಾಟ್ ಕೊಹ್ಲಿ ಕೂಡ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಭಾರತೀಯ ನಾಯಕ ಟಿ 20 ಯಲ್ಲಿ 7000 ರನ್ ಗಳನ್ನು 28 ವರ್ಷ 364 ದಿನಗಳಲ್ಲಿ ಪೂರೈಸಿದರು.