Karnataka Dams Water Level: ರಾಜ್ಯದಲ್ಲಿ ಮಳೆ ಹೆಚ್ಚಳ; ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ
Karnataka Reservoir Water Level: ಇಂದು ಕೂಡ ರಾಜ್ಯಾದ್ಯಂತ ಸಾಧಾರಣ ಮಳೆಯಾಗಲಿದ್ದು, ನಾಳೆಯಿಂದ 2 ದಿನ ಮಳೆ ಹೆಚ್ಚಾಗಲಿದೆ. ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ (Karnataka Dam Water Level)ದ ಮಾಹಿತಿ ಇಲ್ಲಿದೆ.
Karnataka Rain: ಶಿವಮೊಗ್ಗ, ಚಿಕ್ಕಮಗಳೂರು ಉತ್ತರ ಕನ್ನಡ, ಹಾಸನ, ಕೊಡಗು, ಮೈಸೂರು, ಉತ್ತರ ಕರ್ನಾಟಕದಲ್ಲಿ ಮಳೆ ಹೆಚ್ಚಾಗಿರುವುದರಿಂದ ಅಲ್ಲಿನ ನದಿಗಳು ತುಂಬಿ ಹರಿಯುತ್ತಿದ್ದು ಡ್ಯಾಂಗಳು ತುಂಬಿವೆ. ಇಂದು ಕೂಡ ರಾಜ್ಯಾದ್ಯಂತ ಸಾಧಾರಣ ಮಳೆಯಾಗಲಿದ್ದು, ನಾಳೆಯಿಂದ 2 ದಿನ ಮಳೆ ಹೆಚ್ಚಾಗಲಿದೆ. ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ (Karnataka Reservoir Water Level)ದ ಬಗ್ಗೆ ಮಾಹಿತಿ ಇಲ್ಲಿದೆ.
ಕೆಆರ್ಎಸ್ ಜಲಾಶಯ (KRS Dam) ಗರಿಷ್ಠ ನೀರಿನ ಮಟ್ಟ- 38.04 ಮೀಟರ್ ಇಂದಿನ ನೀರಿನ ಮಟ್ಟ- 34.55 ಟಿಎಂಸಿ ಗರಿಷ್ಠ ಸಾಮರ್ಥ್ಯ- 49.45 ಟಿಎಂಸಿ ಇಂದಿನ ಒಳಹರಿವು- 6334 ಕ್ಯೂಸೆಕ್ಸ್ ಇಂದಿನ ಹೊರಹರಿವು- 6172 ಕ್ಯೂಸೆಕ್ಸ್
ವರಾಹಿ ಜಲಾಶಯ (Varahi Dam) ಗರಿಷ್ಠ ಮಟ್ಟ- 594.36 ಮೀಟರ್ ಒಟ್ಟು ಸಾಮರ್ಥ್ಯ – 31.10 ಟಿಎಂಸಿ ಇಂದಿನ ನೀರಿನ ಮಟ್ಟ- 19.63 ಟಿಎಂಸಿ ಇಂದಿನ ಒಳಹರಿವು- 799 ಕ್ಯೂಸೆಕ್ಸ್ ಇಂದಿನ ಹೊರಹರಿವು- 799 ಕ್ಯೂಸೆಕ್ಸ್
ಹಾರಂಗಿ ಜಲಾಶಯ (Harangi Dam) ಗರಿಷ್ಠ ಮಟ್ಟ-871.42 ಮೀಟರ್ ಒಟ್ಟು ಸಾಮರ್ಥ್ಯ – 8.50 ಟಿಎಂಸಿ ಇಂದಿನ ನೀರಿನ ಮಟ್ಟ- 7.98 ಟಿಎಂಸಿ ಇಂದಿನ ಒಳಹರಿವು- 858 ಕ್ಯೂಸೆಕ್ಸ್ ಇಂದಿನ ಹೊರಹರಿವು- 1250 ಕ್ಯೂಸೆಕ್ಸ್
ಹೇಮಾವತಿ ಜಲಾಶಯ (Hemavathi Dam) ಗರಿಷ್ಠ ಮಟ್ಟ- 890.58 ಮೀಟರ್ ಒಟ್ಟು ಸಾಮರ್ಥ್ಯ – 37.10 ಟಿಎಂಸಿ ಇಂದಿನ ನೀರಿನ ಮಟ್ಟ- 29.72 ಟಿಎಂಸಿ ಇಂದಿನ ಒಳಹರಿವು- 3114 ಕ್ಯೂಸೆಕ್ಸ್ ಇಂದಿನ ಹೊರಹರಿವು- 4950 ಕ್ಯೂಸೆಕ್ಸ್
ಕಬಿನಿ ಜಲಾಶಯ (Kabini Dam) ಗರಿಷ್ಠ ನೀರಿನ ಮಟ್ಟ- 696.13 ಮೀಟರ್ ಒಟ್ಟು ಸಾಮರ್ಥ್ಯ – 19.52 ಟಿಎಂಸಿ ಇಂದಿನ ನೀರಿನ ಮಟ್ಟ- 19.40 ಟಿಎಂಸಿ ಇಂದಿನ ಒಳಹರಿವು- 1561 ಕ್ಯೂಸೆಕ್ಸ್ ಇಂದಿನ ಹೊರಹರಿವು- 4700 ಕ್ಯೂಸೆಕ್ಸ್
ಲಿಂಗನಮಕ್ಕಿ ಜಲಾಶಯ (Linganamakki Dam) ಗರಿಷ್ಠ ಮಟ್ಟ- 554.4 ಮೀಟರ್ ಒಟ್ಟು ಸಾಮರ್ಥ್ಯ – 151.75 ಟಿಎಂಸಿ ಇಂದಿನ ನೀರಿನ ಮಟ್ಟ- 141.25 ಟಿಎಂಸಿ ಇಂದಿನ ಒಳಹರಿವು- 2931 ಕ್ಯೂಸೆಕ್ಸ್ ಇಂದಿನ ಹೊರಹರಿವು- 5287 ಕ್ಯೂಸೆಕ್ಸ್
ಸೂಪಾ ಜಲಾಶಯ (Supa Dam) ಗರಿಷ್ಠ ನೀರಿನ ಮಟ್ಟ- 564.00 ಮೀಟರ್ ಒಟ್ಟು ಸಾಮರ್ಥ್ಯ: 145.33 ಟಿಎಂಸಿ ಇಂದಿನ ನೀರಿನ ಮಟ್ಟ- 115.57 ಟಿಎಂಸಿ ಇಂದಿನ ಒಳಹರಿವು- 2243 ಕ್ಯೂಸೆಕ್ಸ್ ಇಂದಿನ ಹೊರಹರಿವು- 4905 ಕ್ಯೂಸೆಕ್ಸ್
ತುಂಗಾಭದ್ರಾ ಜಲಾಶಯ (Tungabhadra Dam) ಗರಿಷ್ಠ ನೀರಿನ ಮಟ್ಟ- 497.71 ಮೀಟರ್ ಒಟ್ಟು ಸಾಮರ್ಥ್ಯ- 100.86 ಟಿಎಂಸಿ ಇಂದಿನ ನೀರಿನ ಮಟ್ಟ- 98.86 ಟಿಎಂಸಿ ಇಂದಿನ ಒಳಹರಿವು- 5787 ಕ್ಯೂಸೆಕ್ಸ್ ಇಂದಿನ ಹೊರಹರಿವು- 11,130 ಕ್ಯೂಸೆಕ್ಸ್
ಭದ್ರಾ ಜಲಾಶಯ (Bhadra Dam) ಗರಿಷ್ಠ ನೀರಿನ ಮಟ್ಟ- 657.73 ಮೀಟರ್ ಒಟ್ಟು ಸಾಮರ್ಥ್ಯ – 71.54 ಟಿಎಂಸಿ ಇಂದಿನ ನೀರಿನ ಮಟ್ಟ- 69.91 ಟಿಎಂಸಿ ಇಂದಿನ ಒಳಹರಿವು- 1852 ಕ್ಯೂಸೆಕ್ಸ್ ಇಂದಿನ ಹೊರಹರಿವು- 3750 ಕ್ಯೂಸೆಕ್ಸ್
ಮಲಪ್ರಭಾ ಜಲಾಶಯ (Malaprabha Dam) ಗರಿಷ್ಠ ನೀರಿನ ಮಟ್ಟ- 633.80 ಮೀಟರ್ ಒಟ್ಟು ಸಾಮರ್ಥ್ಯ – 37.73 ಟಿಎಂಸಿ ಇಂದಿನ ನೀರಿನ ಮಟ್ಟ- 36.76 ಟಿಎಂಸಿ ಇಂದಿನ ಒಳಹರಿವು- 108 ಕ್ಯೂಸೆಕ್ಸ್ ಇಂದಿನ ಹೊರಹರಿವು- 1694 ಕ್ಯೂಸೆಕ್ಸ್
ಘಟಪ್ರಭಾ ಜಲಾಶಯ (Ghataprabha Dam) ಗರಿಷ್ಠ ಮಟ್ಟ- 662.94 ಮೀಟರ್ ಒಟ್ಟು ಸಾಮರ್ಥ್ಯ – 51.00 ಟಿಎಂಸಿ ಇಂದಿನ ನೀರಿನ ಮಟ್ಟ- 51.00 ಟಿಎಂಸಿ ಇಂದಿನ ಒಳಹರಿವು- 4631 ಕ್ಯೂಸೆಕ್ಸ್ ಇಂದಿನ ಹೊರಹರಿವು- 4631 ಕ್ಯೂಸೆಕ್ಸ್
ಆಲಮಟ್ಟಿ ಜಲಾಶಯ (Alamatti Dam) ಗರಿಷ್ಠ ಮಟ್ಟ- 519.60 ಮೀಟರ್ ಒಟ್ಟು ಸಾಮರ್ಥ್ಯ – 123.08 ಟಿಎಂಸಿ ಇಂದಿನ ನೀರಿನ ಮಟ್ಟ- 123.08 ಟಿಎಂಸಿ ಇಂದಿನ ಒಳಹರಿವು- 15,138 ಕ್ಯೂಸೆಕ್ಸ್ ಇಂದಿನ ಹೊರಹರಿವು- 13,138 ಕ್ಯೂಸೆಕ್ಸ್
ಮಹಾರಾಷ್ಟ್ರದ ಧನ್ನೆಗಾಂವ್ ಡ್ಯಾಂನಿಂದ ಬೀದರ್ನ ಮಾಂಜ್ರಾ ನದಿಗೆ ಅಪಾರ ಪ್ರಮಾಣದ ನೀರು ಬಿಡಲಾಗುತ್ತಿತ್ತು. ಇದರಿಂದ ಉತ್ತರ ಕರ್ನಾಟಕದಲ್ಲಿ ಪ್ರವಾಹ ಭೀತಿ ಶುರುವಾಗಿತ್ತು. ಆದರೆ, ಆ ನೀರನ್ನು ಬಂದ್ ಮಾಡಲಾಗಿದ್ದು, ಮಾಂಜ್ರಾನದಿಯ ದಡದ ಗ್ರಾಮಗಳ ಜನರು ನಿಟ್ಟುಸಿರು ಬಿಡುವಂತಾಗಿದೆ. ಧನ್ನೆಗಾಂವ್ ಜಲಾಶಯದಿಂದ ಮಾಂಜ್ರಾ ನದಿಗೆ ಬಿಡಲಾಗುತ್ತಿದ್ದ 60 ಸಾವಿರ ಕ್ಯೂಸೆಕ್ಸ್ ನೀರು ಬಂದ್ ಆಗಿದೆ. ಡ್ಯಾಮ್ನಿಂದ ನೀರು ಬಿಟ್ಟ ಹಿನ್ನೆಲೆಯಲ್ಲಿ ಬೀದರ್ ಜಿಲ್ಲೆಯ ಔರಾದ್, ಭಾಲ್ಕಿ ತಾಲೂಕಿನಲ್ಲಿ ರೈತರ ಜಮೀನಿಗೆ ನೀರು ನುಗ್ಗಿತ್ತು. ಇದರಿಂದ ಉದ್ದು, ತೊಗರಿ, ಕಬ್ಬು ಬೆಳೆ ನೀರು ಪಾಲಾಗಿತ್ತು.
ಇದನ್ನೂ ಓದಿ: Karnataka Dams Water Level: ತುಂಗಭದ್ರಾ ಡ್ಯಾಂ ಭರ್ತಿ; ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ