Bengaluru Rain; ಸಿಲಿಕಾನ್ ಸಿಟಿಯನ್ನು ತಂಪು ಮಾಡಿದ ವರ್ಷಧಾರೆ, ಗುಡುಗು ಸಹಿತ ಭಾರಿ ಮಳೆ

|

Updated on: May 21, 2021 | 1:55 PM

ಕೋರಮಂಗಲ, ಸಿಲ್ಕ್ ಬೋರ್ಡ್, ಮಾರತ ಹಳ್ಳಿ, ಹೆಚ್ಎಎಲ್, ಕಾರ್ಪೊರೇಷನ್, ಇಂದಿರಾನಗರ ಸೇರಿದಂತೆ ಹಲವು ಕಡೆ ಗುಡುಗು ಸಹಿತ ಭಾರಿ ಮಳೆಯಾಗುತ್ತಿದೆ. ನಗರದಲ್ಲಿ ಮಳೆ ಬಿಟ್ಟು ಬಿಟ್ಟು ಬರುತ್ತಿದೆ. ಇನ್ನು ಕೆಲ ಸಮಯ ಇದೇ ರೀತಿ ಮಳೆಯಾಗುವ ಸಂಭವವಿದ್ದು ತಂಪಾದ ವಾತಾವರಣಕ್ಕೆ ಸಿಲಿಕಾನ್ ಸಿಟಿ ಮಂದಿ ಖುಷ್ ಆಗಿದ್ದಾರೆ.

Bengaluru Rain; ಸಿಲಿಕಾನ್ ಸಿಟಿಯನ್ನು ತಂಪು ಮಾಡಿದ ವರ್ಷಧಾರೆ, ಗುಡುಗು ಸಹಿತ ಭಾರಿ ಮಳೆ
ಮಳೆ
Follow us on

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೆಳಗ್ಗಿನಿಂದಲೂ ಹಲವು ಕಡೆ ಮೋಡ ಕವಿದ ವಾತಾವರಣ ಕಂಡುಬಂದಿತ್ತು. ಆದರೆ ಮಧ್ಯಾಹ್ನವಾಗುತ್ತಿದ್ದಂತೆ ಧಿಡೀರನೆ ವರ್ಷಧಾರೆಯ ಆಗಮವಾಗಿದೆ. ಕೋರಮಂಗಲ, ಸಿಲ್ಕ್ ಬೋರ್ಡ್, ಮಾರತ ಹಳ್ಳಿ, ಹೆಚ್ಎಎಲ್, ಕಾರ್ಪೊರೇಷನ್, ಇಂದಿರಾನಗರ ಸೇರಿದಂತೆ ಹಲವು ಕಡೆ ಗುಡುಗು ಸಹಿತ ಭಾರಿ ಮಳೆಯಾಗುತ್ತಿದೆ. ನಗರದಲ್ಲಿ ಮಳೆ ಬಿಟ್ಟು ಬಿಟ್ಟು ಬರುತ್ತಿದೆ. ಇನ್ನು ಕೆಲ ಸಮಯ ಇದೇ ರೀತಿ ಮಳೆಯಾಗುವ ಸಂಭವವಿದ್ದು ತಂಪಾದ ವಾತಾವರಣಕ್ಕೆ ಸಿಲಿಕಾನ್ ಸಿಟಿ ಮಂದಿ ಖುಷ್ ಆಗಿದ್ದಾರೆ.

ಲಾಕ್ಡೌನ್ನಿಂದ ಬೆಂಗಳೂರಿನಲ್ಲಿ ಕಡಿಮೆಯಾದ ವಾಯುಮಾಲಿನ್ಯ
ಲಾಕ್ಡೌನ್ನಿಂದಾಗಿ ವಾಹನ ಸಂಚಾರ ಕಡಿಮೆಯಾಗಿದೆ. ಹೀಗಾಗಿ ಕಳೆದ 20 ದಿನಗಳಲ್ಲಿ ಬೆಂಗಳೂರಿನ ಗಾಳಿ ಶುದ್ಧವಾಗಿದೆ. ವಾಯುಮಾಲಿನ್ಯದ ಪ್ರಮಾಣ ಕುಸಿದಿದೆ. ಏಪ್ರಿಲ್ 15ರಂದು ನಗರದಲ್ಲಿ ಕಂಡುಬಂದ ವಾಯುಮಾಲಿನ್ಯ ಪ್ರಮಾಣ ಹಾಗೂ ಮೇ 19ಕ್ಕೆ ವಾಯು ಮಾಲಿನ್ಯದ ಕುಸಿತದ ವರದಿ ಹೀಗಿದೆ.
ಹೆಬ್ಬಾಳದಲ್ಲಿ ಮೇ 15ರಂದು 111ಯಿದ್ದ ವಾಯುಮಾಲಿನ್ಯ ಮೇ 19ರಂದು 28ಕ್ಕೆ ಇಳಿದಿದೆ.
ಜಯನಗರ: 105ರಿಂದ 37ಕ್ಕೆ ಇಳಿಕೆ
ಮೈಸೂರು ರಸ್ತೆ: 142ರಿಂದ 34ಕ್ಕೆ ಇಳಿಕೆ
ಸಿಟಿ ರೈಲ್ವೆ ನಿಲ್ದಾಣ: 106ರಿಂದ 49ಕ್ಕೆ ಇಳಿಕೆ
ಬಸವೇಶ್ವರ ನಗರ: 67ರಿಂದ 36ಕ್ಕೆ ಇಳಿಕೆ
ಬಿಟಿಎಂ ಲೇಔಟ್: 75ರಿಂದ 59ಕ್ಕೆ ಇಳಿಕೆ
ಸಿಲ್ಕ್ ಬೋರ್ಡ್: 90ರಿಂದ 40ಕ್ಕೆ ಇಳಿಕೆಯಾಗಿದೆ.

ಇದನ್ನೂ ಓದಿ: Karnataka Rain: ಬೆಂಗಳೂರು ಮತ್ತು ಕರ್ನಾಟಕದ ಹಲವು ಭಾಗಗಳಲ್ಲಿ ಗುರುವಾರವೂ ಸುರಿದ ಮಳೆ; ಕೆಲವರಲ್ಲಿ ಆತಂಕ, ಕೆಲವರಿಗೆ ಸಂತಸ

Karnataka Weather: ಹವಾಮಾನ ವರದಿ – ಮೋಡ ಕವಿದ ವಾತಾವರಣ, ಕೆಲವೆಡೆ ಮಳೆ ಸಾಧ್ಯತೆ

Published On - 1:33 pm, Fri, 21 May 21