ಸರ್ಕಾರಿ ಸಿಬ್ಬಂದಿಗೆ ಮಂಡೆ ಬ್ಲೂಸ್, ಕೈಗೆ ಪೊರಕೆ ತೆಗೆದುಕೊಂಡ DC

ನೆಲಮಂಗಲ: ಇಂದು ವಾರದ ಆರಂಭ. ಸರ್ಕಾರಿ ಸಿಬ್ಬಂದಿಗೆ ಮಂಡೆ ಬ್ಲೂಸ್​. ಅದ್ರೆ ಸಂಡೆ ರಜೆ ನಂತ್ರ.. ಅಯ್ಯೋ ಮತ್ತೆ ಕೆಲ್ಸಕ್ಕೆ ಹೋಗಬೇಕಲ್ಲಪ್ಪಾ ಅನ್ನೋ ನಿರಾಸಕ್ತಿ ಮನಸ್ಥಿತಿ. ಹಾಗೆಂದೇ ಬಹಳಷ್ಟು ನೌಕರರು ಕಚೇರಿಗಳಗೆ ತಡವಾಗಿ ಕೆಲಸಕ್ಕೆ ತೆರಳುವುದುಂಟು. ಆದ್ರೆ ಅವರನ್ನ ಕಾಯುವ ಮೇಲಾಧಿಕಾರಿ ಅದೂ ಸಾಕ್ಷಾತ್​ ಜಿಲ್ಲಾಧಿಕಾರಿ ಸುಮ್ಮನಿರಬೇಕಲ್ಲಾ!? ಲೇಟ್​ ಲತೀಫ್ಸ್​: ಇಂದೂ ಹೀಗೆ ಆಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಇಂದು ಬೆಳಗ್ಗೆ ಸಮಯಕ್ಕೆ ಸರಿಯಾಗಿ ನೆಲಮಂಗಲ ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿಬಿಟ್ಟಿದ್ದಾರೆ. ಕಚೇರಿಯಲ್ಲಿ ಕಸ […]

ಸರ್ಕಾರಿ ಸಿಬ್ಬಂದಿಗೆ ಮಂಡೆ ಬ್ಲೂಸ್, ಕೈಗೆ ಪೊರಕೆ ತೆಗೆದುಕೊಂಡ DC
ಸಾಧು ಶ್ರೀನಾಥ್​

Updated on: Oct 10, 2020 | 8:32 AM

ನೆಲಮಂಗಲ: ಇಂದು ವಾರದ ಆರಂಭ. ಸರ್ಕಾರಿ ಸಿಬ್ಬಂದಿಗೆ ಮಂಡೆ ಬ್ಲೂಸ್​. ಅದ್ರೆ ಸಂಡೆ ರಜೆ ನಂತ್ರ.. ಅಯ್ಯೋ ಮತ್ತೆ ಕೆಲ್ಸಕ್ಕೆ ಹೋಗಬೇಕಲ್ಲಪ್ಪಾ ಅನ್ನೋ ನಿರಾಸಕ್ತಿ ಮನಸ್ಥಿತಿ. ಹಾಗೆಂದೇ ಬಹಳಷ್ಟು ನೌಕರರು ಕಚೇರಿಗಳಗೆ ತಡವಾಗಿ ಕೆಲಸಕ್ಕೆ ತೆರಳುವುದುಂಟು. ಆದ್ರೆ ಅವರನ್ನ ಕಾಯುವ ಮೇಲಾಧಿಕಾರಿ ಅದೂ ಸಾಕ್ಷಾತ್​ ಜಿಲ್ಲಾಧಿಕಾರಿ ಸುಮ್ಮನಿರಬೇಕಲ್ಲಾ!?

ಲೇಟ್​ ಲತೀಫ್ಸ್​: ಇಂದೂ ಹೀಗೆ ಆಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಇಂದು ಬೆಳಗ್ಗೆ ಸಮಯಕ್ಕೆ ಸರಿಯಾಗಿ ನೆಲಮಂಗಲ ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿಬಿಟ್ಟಿದ್ದಾರೆ. ಕಚೇರಿಯಲ್ಲಿ ಕಸ ಕಂಡು, ಪೊರಕೆ ಹಿಡಿದು ಸ್ವಚ್ಛತಾ ಕೆಲಸ ಶುರು ಹಚ್ಚಿಕೊಂಡಿದ್ದಾರೆ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ.

ಈ ಮಧ್ಯೆ, ತಹಶೀಲ್ದಾರ್​ ಸೇರಿದಂತೆ ಸಿಬ್ಬಂದಿ ವಿರುದ್ಧ ಡಿಸಿ ಗರಂ ಆಗಿದ್ದಾರೆ. ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹಾಜರಾಗದ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆದೇಶಿಸುವ ಮೂಲಕ ಮತ್ತೊಂದು ರೀತಿಯ ಸ್ವಚ್ಛತಾ ಕಾರ್ಯಕ್ಕೆ ಕೈಹಾಕಿದ್ದಾರೆ.

Published On - 12:36 pm, Mon, 2 December 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us