ಬೆಂಗಳೂರು: ಆಂತರಿಕ ಯುದ್ಧ ಪೀಡಿತ ಸುಡಾನ್ (Sudan) ದೇಶದಲ್ಲಿ ಸಿಲುಕಿದ್ದ 139 ಕನ್ನಡಿಗರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಗಿದೆ. ರಾಜ್ಯ ವಿಪತ್ತು ನಿರ್ವಹಣಾ ಕಮೀಷನರ್ ಮನೋಜ್ ನೇತೃತ್ವದಲ್ಲಿ ಸುಡಾನ್ನ ರಾಜಧಾನಿ ಸೌದಿಯ ಜೆಡ್ಡಾ (Jeddah) ಮೂಲಕ ಎರಡು ಇಂಡಿಗೋ ವಿಮಾನದ ಮೂಲಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Kempe Gowda International Airport, Bengaluru) ಕರೆತರಲಾಗಿದೆ.
ಸದ್ಯ ಹಕ್ಕಿಪಿಕ್ಕಿ ಸಮುದಾಯಕ್ಕೆ ಸೇರಿದ 139 ಕನ್ನಡಿಗರನ್ನು ತವರು ಜಿಲ್ಲೆಗಳಿಗೆ ತಲುಪಿಸಲು ನಾಲ್ಕು ಬಸ್ಗಳ ವ್ಯವಸ್ಥೆ ಮಾಡಲಾಗಿದೆ. ಸುಡಾನ್‌ನಿಂದ ಸುರಕ್ಷಿತವಾಗಿ ತಾಯ್ನಾಡಿಗೆ ಕರೆ ತರುವಲ್ಲಿ ಯಶಸ್ವಿಯಾದ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಅನಿವಾಸಿ ಕನ್ನಡಿಗರು ಧನ್ಯವಾದಗಳನ್ನು ತಿಳಿಸಿದ್ದಾರೆ. ಇದೇ ವೇಳೆ ಭಾರತ ಮಾತೆ ಪರ ಹಾಗೂ ಮೋದಿ ಪರ ಜಯಘೋಷಗಳು ಮೊಳಗಿದವು. ಸದ್ಯ ವಿಮಾನ ನಿಲ್ದಾಣದಿಂದ ಸುಡಾನ್‌ನಿಂದ ಆಗಮಿಸಿದ ಅನಿವಾಸಿ ಕನ್ನಡಿಗರು ವಿಶೇಷ ಬಸ್ಗಳ ಮೂಲಕ ಶಿವಮೊಗ್ಗ, ಮೈಸೂರು, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳಿಗೆ ತೆರಳಿದ್ದಾರೆ.
ಇದನ್ನೂ ಓದಿ: ಆಪರೇಷನ್ ಕಾವೇರಿ: ಸುಡಾನ್‌ನಿಂದ ಸುರಕ್ಷಿತವಾಗಿ ಬೆಂಗಳೂರಿಗೆ ಆಗಮಿಸಿದ 362 ಕನ್ನಡಿಗರು
ಒಟ್ಟಾರೆ 1700 ಜನರು ಭಾರತಕ್ಕೆ ಆಗಮಿಸಿದ್ದಾರೆ. ನಿನ್ನೆ ನಾವು 362 ಕನ್ನಡಿಗರನ್ನು ಕರ್ನಾಟಕಕ್ಕೆ ತಲುಪಿಸಿದ್ದೇವೆ. ಇಂದು, ನಾವು 229 ಜನರನ್ನು ನಿರೀಕ್ಷಿಸುತ್ತಿದ್ದೇವೆ, ಅದರಲ್ಲಿ 129 ಜನರು ಕರ್ನಾಟಕದವರು ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್ ಅವರು ಸುದ್ದಿಸಂಸ್ಥೆ ಎಎನ್ಐ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.
#WATCH | Bengaluru: “…Overall 1700 people have reached India. If you look specifically at Karnataka, we had 362 people reaching the day before yesterday. Today, we are expecting 229 people, of which 129 are from Karnataka..,” says Commissioner of Karnataka State Disaster… pic.twitter.com/1qp0tFPHpI
— ANI (@ANI) April 30, 2023
ಎರಡು ದಿನಗಳ ಹಿಂದೆ (ಏಪ್ರಿಲ್ 28) ಸುಡಾನ್‌ನಿಂದ 362 ಕನ್ನಡಿಗರನ್ನು ಆಪರೇಷನ್ ಕಾವೇರಿ ಮೂಲಕ ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲಾಗಿತ್ತು. ಪೈಕಿ 56 ಜನ ತಮಿಳಿಗರು ಸೇರಿದ್ದರು. ಬೆಂಗಳೂರಿಗೆ ಆಗಮಿಸಿದ ಕನ್ನಡಿಗರಿಗೆ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿತ್ತು. ಏರ್ಪೋಟ್ನಿಂದ ಮೈಸೂರು ಸೇರಿದಂತೆ ಹಲವಡೆಗೆ ವಿಶೇಷ ಬಸ್ ವ್ಯವಸ್ಥೆ ಮೂಲಕ ಕನ್ನಡಿಗರು ಸ್ವಗ್ರಾಮಕ್ಕೆ ತೆರಳಿದ್ದರು.
ಆಪರೇಷನ್ ಕಾವೇರಿ ಎಂಬುದು ಸುಡಾನ್ ಸೇನೆ ಮತ್ತು ಅರೆಸೈನಿಕ ಗುಂಪುಗಳು ಹೋರಾಡುತ್ತಿರುವ ಸುಡಾನ್‌ನಿಂದ ಸಿಲುಕಿರುವ ಭಾರತೀಯ ನಾಗರಿಕರನ್ನು ಸ್ಥಳಾಂತರಿಸಲು ಸರ್ಕಾರವು ಪ್ರಾರಂಭಿಸಿದ ರಕ್ಷಣಾ ಕಾರ್ಯಾಚರಣೆಯಾಗಿದೆ. ಸುಡಾನ್‌ನಲ್ಲಿ ತನ್ನ ಜನರನ್ನು ಮತ್ತೆ ತಮ್ಮ ದೇಶಕ್ಕೆ ಕರೆರತಲು ಹಲವು ದೇಶಗಳ ಒತ್ತಾಯಿಸಿದ್ದವು. ಸುಡಾನ್‌ನಿಂದ ಜನರನ್ನು ಸ್ಥಳಾಂತರಿಸುವ ಬಗ್ಗೆ ಯುಎಸ್ ಮತ್ತು ಸೌದಿ ಅರೇಬಿಯಾ ಮಧ್ಯಸ್ಥಿಕೆ ವಹಿಸಿದ ನಂತರ ಸುಡಾನ್‌ನಲ್ಲಿ 72 ಗಂಟೆಗಳ ಕದನ ವಿರಾಮಕ್ಕೆ ಸುಡಾನ್ ಎರಡು ಸೈನ್ಯಗಳು ಒಪ್ಪಿಕೊಂಡಿದ್ದವು. ಅದರಂತೆ ಭಾರತ ಸೇರಿದಂತೆ ವಿವಿಧ ದೇಶಗಳು ತಮ್ಮ ನಾಕರಿಕರನ್ನು ಸುಕರಕ್ಷಿತವಾಗಿ ತಮ್ಮ ದೇಶಕ್ಕೆ ಕರೆದುಕೊಂಡು ಹೋಗಲು ಕಾರ್ಯಾಚರಣೆ ಆರಂಭಿಸಿದ್ದವು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:00 pm, Sun, 30 April 23