ಆಪರೇಷನ್ ಕಾವೇರಿ: ಸುಡಾನ್‌ನಿಂದ ಸುರಕ್ಷಿತವಾಗಿ ಬೆಂಗಳೂರಿಗೆ ಆಗಮಿಸಿದ 362 ಕನ್ನಡಿಗರು
ಆಂತರಿಕ ಯುದ್ಧ ಪೀಡಿತ ಸುಡಾನ್ ದೇಶದಲ್ಲಿ ಸಿಲುಕಿದ್ದ 362 ಕನ್ನಡಿಗರನ್ನು ಆಪರೇಷನ್ ಕಾವೇರಿ ಮೂಲಕ ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲಾಗಿದೆ. ಸದ್ಯ ಸಿಬ್ಬಂದಿ ವರ್ಗ ವಿದೇಶದಿಂದ ಆಗಮಿಸಿದ ಕನ್ನಡಿಗರನ್ನು ಕೋವಿಡ್ ತಪಾಸಣೆಗೆ ಒಳಪಡಿಸಿ ವಿಳಾಸ ಬರೆದುಕೊಳ್ಳುತ್ತಿದ್ದಾರೆ.
ಬೆಂಗಳೂರು: ಆಂತರಿಕ ಯುದ್ಧ ಪೀಡಿತ ಸುಡಾನ್ (Sudan) ದೇಶದಲ್ಲಿ ಸಿಲುಕಿದ್ದ 362 ಕನ್ನಡಿಗರನ್ನು ಆಪರೇಷನ್ ಕಾವೇರಿ (Operation Kaveri) ಮೂಲಕ ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲಾಗಿದೆ. ಭಾರತೀಯ ಸೇನಾ ವಿಮಾನದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Kempegowda International Airport Bengaluru) 362 ಕನ್ನಡಿಗರನ್ನು ಕರೆತರಲಾಗಿದೆ. ಈ ಪೈಕಿ 56 ಜನ ತಮಿಳಿಗರು ಸೇರಿದ್ದಾರೆ. ಸದ್ಯ ಸ್ಕ್ರೀನಿಂಗ್, ಕೊವಿಡ್ ಟೆಸ್ಟ್ ಮಾಡಿ ವಿಳಾಸ ಬರೆದುಕೊಳ್ಳುತ್ತಿದ್ದು, ಕೆಲವೇ ಹೊತ್ತಿನಲ್ಲಿ ಅನಿವಾಸಿ ಕನ್ನಡಿಗರು ಏರ್ರ್ಪೋಟ್ನಿಂದ ಹೊರಗಡೆ ಆಗಮಿಸಲಿದ್ದಾರೆ.
ಸುಡಾನ್‌ನಿಂದ ಕನ್ನಡಿಗರು ಆಗಮಿಸಿದ ಹಿನ್ನೆಲೆ ಅವರನ್ನು ಸ್ವಾಗತಿಸಲು ರಾಜ್ಯ ಆರೋಗ್ಯ ಇಲಾಖೆ ಆಯುಕ್ತ ರಣದೀಪ್ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ್ದಾರೆ. ಇದೇ ವೇಳೆ ಬೆಂಗಳೂರು ಗ್ರಾಮಾಂತರ ಡಿಹೆಚ್ಒ ಜೊತೆಗೆ ವಿಮಾನ ನಿಲ್ದಾಣದ ಒಳ ಭಾಗದಲ್ಲಿ ನಡೆಯುತ್ತಿರುವ ಕೋವಿಡ್ ಟೆಸ್ಟ್ ವೀಕ್ಷಣೆ ನಡೆಸಿದರು.
ಇದನ್ನೂ ಓದಿ: Operation Kaveri: 72 ಗಂಟೆಗಳ ಕದನ ವಿರಾಮದ ನಡುವೆ ಸುಡಾನ್‌ನಿಂದ 534 ನಾಗರಿಕರನ್ನು ಸ್ಥಳಾಂತರಿಸಿದ ಭಾರತ
ಸುಡಾನ್‌ನಿಂದ ಬಂದವರಿಗೆ ವಿಶೇಷ ಬಸ್ ವ್ಯವಸ್ಥೆ
ಸೂಡಾನ್ನಿಂದ ಬೆಂಗಳೂರಿಗೆ ಆಗಮಿಸಿದ ಕನ್ನಡಿಗರಿಗೆ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ಏರ್ಪೋಟ್ನಿಂದ ಅವರ ಸ್ವಗ್ರಾಮಗಳಿಗೆ ತೆರಳಲು ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಮೈಸೂರು ಸೇರಿದಂತೆ ಹಲವಡೆಗೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.
ಯುದ್ಧ ಪೀಡಿತ ದೇಶದಿಂದ ಬಂದ ಕನ್ನಡಿಗ ಹೇಳಿದ್ದೇನು?
ಸುಡಾನ್‌ನಿಂದ ಬೆಂಗಳೂರಿಗೆ ಆಗಮಿಸಿದ ಅನಿವಾಸಿ ಕನ್ನಡಿಗರ ಪೈಕಿ ಒಬ್ಬರಾಗಿರುವ ಥಣಿಸಂದ್ರ ಮೂಲದ ಚಂದ್ರಶೇಖರ ಅವರನ್ನು ವಿಮಾನ ನಿಲ್ದಾಣದಕ್ಕೆ ಕುಟುಂಬಸ್ಥರು ಸಿಹಿ ತಿನ್ನಿಸಿ ಸ್ವಾಗತಿಸಿದರು. ಈ ವೇಳೆ ಸಂಘರ್ಷದ ಬಗ್ಗೆ ಮಾಹಿತಿ ನೀಡಿದ ಚಂದ್ರಶೇಖರ್, ಗುಂಡಿನ ದಾಳಿ ಬಾಂಬ್ ದಾಳಿ ಬಗ್ಗೆ ಎಳೆ ಎಳೆಯಾಗಿ ವಿವರಿಸಿದರು. ಮತ್ತಷ್ಟು ಜನ ಸುಡಾನ್‌ನಲ್ಲಿ ಸಿಲುಕಿದ್ದು, ಪ್ರಯಾಣ ಮಾಡುವುದು ಕಷ್ಟಕರವಾಗಿದೆ ಎಂದು ಟಿವಿ9 ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.
ಆಪರೇಷನ್ ಕಾವೇರಿ ಎಂದರೇನು?
ಆಪರೇಷನ್ ಕಾವೇರಿ ಎಂಬುದು ಸುಡಾನ್ ಸೇನೆ ಮತ್ತು ಅರೆಸೈನಿಕ ಗುಂಪುಗಳು ಹೋರಾಡುತ್ತಿರುವ ಸುಡಾನ್‌ನಿಂದ ಸಿಲುಕಿರುವ ಭಾರತೀಯ ನಾಗರಿಕರನ್ನು ಸ್ಥಳಾಂತರಿಸಲು ಸರ್ಕಾರವು ಪ್ರಾರಂಭಿಸಿದ ರಕ್ಷಣಾ ಕಾರ್ಯಾಚರಣೆಯಾಗಿದೆ. ಸುಡಾನ್‌ನಲ್ಲಿ ತನ್ನ ಜನರನ್ನು ಮತ್ತೆ ತಮ್ಮ ದೇಶಕ್ಕೆ ಕರೆರತಲು ಹಲವು ದೇಶಗಳ ಒತ್ತಾಯಿಸಿದ್ದವು. ಸುಡಾನ್‌ನಿಂದ ಜನರನ್ನು ಸ್ಥಳಾಂತರಿಸುವ ಬಗ್ಗೆ ಯುಎಸ್ ಮತ್ತು ಸೌದಿ ಅರೇಬಿಯಾ ಮಧ್ಯಸ್ಥಿಕೆ ವಹಿಸಿದ ನಂತರ ಸುಡಾನ್‌ನಲ್ಲಿ 72 ಗಂಟೆಗಳ ಕದನ ವಿರಾಮಕ್ಕೆ ಸುಡಾನ್ ಎರಡು ಸೈನ್ಯಗಳು ಒಪ್ಪಿಕೊಂಡಿದ್ದವು. ಅದರಂತೆ ಭಾರತ ಸೇರಿದಂತೆ ವಿವಿಧ ದೇಶಗಳು ತಮ್ಮ ನಾಕರಿಕರನ್ನು ಸುಕರಕ್ಷಿತವಾಗಿ ತಮ್ಮ ದೇಶಕ್ಕೆ ಕರೆದುಕೊಂಡು ಹೋಗಲು ಕಾರ್ಯಾಚರಣೆ ಆರಂಭಿಸಿದ್ದವು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:05 pm, Fri, 28 April 23