ಆನೇಕಲ್: ಎರಡು ಬೈಕ್​ಗಳ ನಡುವೆ ಡಿಕ್ಕಿ, ಮೂವರು ಸವಾರರ ದುರ್ಮರಣ

ಆನೇಕಲ್: ಎರಡು ಬೈಕ್​ಗಳ ನಡುವೆ ಡಿಕ್ಕಿಯಾಗಿ ಮೂವರ ಮೃತಪಟ್ಟಿರುವ ಘಟನೆ ಆನೇಕಲ್ ತಾಲೂಕಿನ ಬೊಮ್ಮಸಂದ್ರ ಬಳಿ ತಡರಾತ್ರಿ ನಡೆದಿದೆ. ಮಂಜುನಾಥ್, ಓಂಕಾರಪ್ಪ ಹಾಗೂ ನಾರಪ್ಪ ಮೃತ ದುರ್ದೈವಿಗಳು. ಅತ್ತಿಬೆಲೆ‌ ನಿವಾಸಿ ಮಂಜುನಾಥ್ ಎಂಬುವನು ವೇಗವಾಗಿ ಬಂದು ಮತ್ತೊಂದು ಬೈಕ್​ಗೆ ಡಿಕ್ಕಿಯೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಮಂಜುನಾಥ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಮುಂದಿನ ಬೈಕ್​ನಲ್ಲಿದ್ದ ಬೊಮ್ಮಸಂದ್ರ ನಿವಾಸಿಗಳಾದ ಓಂಕಾರಪ್ಪ ಮತ್ತು ನಾರಪ್ಪಗೆ ಗಂಭೀರ ಗಾಯಗಳಾಗಿತ್ತು. ತಡರಾತ್ರಿ ಇಬ್ಬರನ್ನೂ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಇಂದು ಸಂಜೆ 4ರ ಸುಮಾರಿಗೆ ಖಾಸಗಿ ಆಸ್ಪತ್ರೆಯಲ್ಲಿ […]

ಆನೇಕಲ್: ಎರಡು ಬೈಕ್​ಗಳ ನಡುವೆ ಡಿಕ್ಕಿ, ಮೂವರು ಸವಾರರ ದುರ್ಮರಣ
Edited By:

Updated on: May 26, 2020 | 7:09 PM

ಆನೇಕಲ್: ಎರಡು ಬೈಕ್​ಗಳ ನಡುವೆ ಡಿಕ್ಕಿಯಾಗಿ ಮೂವರ ಮೃತಪಟ್ಟಿರುವ ಘಟನೆ ಆನೇಕಲ್ ತಾಲೂಕಿನ ಬೊಮ್ಮಸಂದ್ರ ಬಳಿ ತಡರಾತ್ರಿ ನಡೆದಿದೆ. ಮಂಜುನಾಥ್, ಓಂಕಾರಪ್ಪ ಹಾಗೂ ನಾರಪ್ಪ ಮೃತ ದುರ್ದೈವಿಗಳು.

ಅತ್ತಿಬೆಲೆ‌ ನಿವಾಸಿ ಮಂಜುನಾಥ್ ಎಂಬುವನು ವೇಗವಾಗಿ ಬಂದು ಮತ್ತೊಂದು ಬೈಕ್​ಗೆ ಡಿಕ್ಕಿಯೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಮಂಜುನಾಥ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಮುಂದಿನ ಬೈಕ್​ನಲ್ಲಿದ್ದ ಬೊಮ್ಮಸಂದ್ರ ನಿವಾಸಿಗಳಾದ ಓಂಕಾರಪ್ಪ ಮತ್ತು ನಾರಪ್ಪಗೆ ಗಂಭೀರ ಗಾಯಗಳಾಗಿತ್ತು.

ತಡರಾತ್ರಿ ಇಬ್ಬರನ್ನೂ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಇಂದು ಸಂಜೆ 4ರ ಸುಮಾರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಓಂಕಾರಪ್ಪ, ನಾರಪ್ಪ ಸಾವಿಗೀಡಾಗಿದ್ದಾರೆ. ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published On - 7:07 pm, Tue, 26 May 20