ದೇವನಹಳ್ಳಿ ಆವತಿ ಗ್ರಾಮದಲ್ಲಿ ರಕ್ಷಣಾ ದಳ ವಸತಿ, ಆಡಳಿತ ಕಚೇರಿ ಉದ್ಘಾಟನೆ ಮಾಡಿದ ಅಮಿತ್ ಶಾ

| Updated By: ಆಯೇಷಾ ಬಾನು

Updated on: Dec 31, 2022 | 1:30 PM

Amit Shah in Karnataka: ಅಮಿತ್ ಶಾ ಅವರು ದೇವನಹಳ್ಳಿಯಲ್ಲಿ ಇಂಡೋ ಟಿಬೇಟಿಯನ್ ರಕ್ಷಣಾ ದಳ ವಸತಿ, ಆಡಳಿತ ಕಚೇರಿ ಉದ್ಘಾಟನೆ ‌ ಮಾಡಿದ್ದಾರೆ.

ದೇವನಹಳ್ಳಿ ಆವತಿ ಗ್ರಾಮದಲ್ಲಿ ರಕ್ಷಣಾ ದಳ ವಸತಿ, ಆಡಳಿತ ಕಚೇರಿ ಉದ್ಘಾಟನೆ ಮಾಡಿದ ಅಮಿತ್ ಶಾ
ಕೇಂದ್ರ ಗೃಹ ಸಚಿವ ಅಮಿತ್ ಶಾ
Follow us on

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಆವತಿ ಗ್ರಾಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಪಿಆರ್​ಡಿ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ್ದಾರೆ. 35 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಬಿಪಿಆರ್​ಡಿ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿ ಬಳಿಕ ಇಂಡೋ ಟಿಬೇಟಿಯನ್ ರಕ್ಷಣಾ ದಳ ವಸತಿ, ಆಡಳಿತ ಕಚೇರಿ ಉದ್ಘಾಟನೆ ‌ ನೆರವೇರಿಸಿದ್ದಾರೆ.

ದೇವನಹಳ್ಳಿ ಹೊರವಲಯದ ಖಾಸಗಿ ಶಾಲೆಯಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು ವೇದಿಕೆ ಮೇಲೆ ಅಮಿತ್ ಶಾ ಸೇರಿ 7 ಗಣ್ಯರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ವೇದಿಕೆ ಮೇಲೆ ಅಮಿತ್ ಶಾಗೆ ಸಿಎಂ ಬೊಮ್ಮಾಯಿ, ಕೇಂದ್ರ ಸಚಿವ ಜೋಶಿ, ಸಚಿವರಾದ ಆರಗ ಜ್ಞಾನೇಂದ್ರ, ಡಾ.ಕೆ ಸುಧಾಕರ್ ಮತ್ತು ಅಧಿಕಾರಿಗಳು ಸಾಥ್​ ನೀಡಿದ್ದಾರೆ.

ಕಾರ್ಯಕ್ರಮದ ಸ್ಥಳದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಪ್ರತಿಯೊಬ್ಬರನ್ನೂ ಪರಿಶೀಲಿಸಿ ಒಳಗಡೆ ಬಿಡಲಾಗುತ್ತಿದೆ. ಪಾಸ್ ಹೊಂದಿರುವ 200 ಜನರಿಗೆ ಮಾತ್ರ ಕಾರ್ಯಕ್ರಮಕ್ಕೆ ಅವಕಾಶ ನೀಡಲಾಗಿದೆ. ಖಾಸಗಿ ಶಾಲೆಯ 500 ಮೀಟರ್ ವ್ಯಾಪ್ತಿಯಲ್ಲಿ ಜನರ ಓಡಾಟ ನಿಷೇಧಿಸಲಾಗಿದೆ. ಖುದ್ದು ಡಿಜಿ & ಐಜಿಪಿ ಪ್ರವೀಣ್ ಸೂದ್​ ಅವರೇ ಭದ್ರತೆಯನ್ನು ಪರಿಶೀಲಿಸಿದ್ದಾರೆ.

ಇದನ್ನೂ ಓದಿ: KSRTC EV ಪವರ್ ಪ್ಲಸ್ ಬಸ್​​​ಗೆ ಹಸಿರು ನಿಶಾನೆ ತೋರಿದ ಸಚಿವ ಶ್ರೀರಾಮುಲು; ಇಲ್ಲಿದೆ ಬಸ್​​ನ ವಿಶೇಷತೆಗಳು

ಮೋದಿ ಪ್ರಧಾನಿ ಆದ ಬಳಿಕ ಸೈನಿಕರಿಗೆ ಬಹಳಷ್ಟು ಅಭಿವೃದ್ಧಿ ಕೆಲಸ ಮಾಡಲಾಗಿದೆ

ಇನ್ನು ವೇದಿಕೆ ಅಲಂಕರಿಸಿದ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಷಣ ಮಾಡಿದ್ದಾರೆ. ಮೋದಿ ಪ್ರಧಾನಿ ಆದ ಬಳಿಕ ಸೈನಿಕರಿಗೆ ಬಹಳಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಐಟಿಬಿಪಿ ಬಹಳ ದುರ್ಗಮ ಕ್ಷೇತ್ರದಲ್ಲಿ ಕೆಲಸ ಮಾಡುವ ಸಂಸ್ಥೆ ಆಗಿದೆ. ಮೈನಸ್ ಡಿಗ್ರಿಯಲ್ಲಿ ಕೆಲಸ ಮಾಡೋದು ಅಷ್ಟು ಸರಳ ಕೆಲಸ ಅಲ್ಲ. Itbp ಸೈನಿಕ ಒಬ್ಬ ಗಡಿಯಲ್ಲಿ ನಿಂತಿದ್ರೆ ಒಂದೇ ಒಂದು ಇಂಚು ಜಾಗ ಬಿಟ್ಟು ಕೊಡಲ್ಲ. ಹಾಗಾಗಿ ಅವರಿಗೆ ಹಿಮವೀರ್ ಅಂತ ಗೌರವ ಕೊಡಲಿದ್ದೇವೆ.

ಗಡಿಯಿಂದ ನೋಡುತ್ತಿರುವ ಸೈನಿಕರಿಗೆ ಒಂದು ಮಾತು ಹೇಳ್ತೇನೆ. 100‌ದಿನಗಳ‌ ಕಾಲ ನೀವು ನಿಮ್ಮ ಪರಿವಾರದ ಜೊತೆ ಅಥವಾ ಹೆಡ್​ ಕ್ವಾರ್ಟರ್ಸ್​​ನಲ್ಲಿ 100‌ ದಿನ ತಂಗುವ ವ್ಯವಸ್ಥೆ ಮಾಡಿಕೊಡಲಾಗುತ್ತೆ. ಹೆಡ್ ಕ್ವಾರ್ಟರ್ ನಲ್ಲಿ ಕೆಲಸ ಮಾಡುವ ಅವಕಾಶ ಸಿಗಲಿದೆ. ಮಾನವೀಯ ದೃಷ್ಟಿಕೋನದಿಂದ‌ ಇದು ಅತ್ಯಾವಶ್ಯಕವಾಗಿದೆ ಎಂದರು.

ಪೊಲೀಸ್ ಇಲಾಖೆಯಲ್ಲಿ ಬದಲಾವಣೆಗಳು ನಿರಂತರವಾಗಿ ಆಗಬೇಕು. ಬಿಪಿಆರ್​ಡಿ ವ್ಯಾಪ್ತಿ ಇನ್ನಷ್ಟು ವಿಸ್ತರಣೆಯ ಅಗತ್ಯವಿದೆ. ಮಹಾನಗರಗಳ ಸುರಕ್ಷತೆ ದೃಷ್ಟಿಯಿಂದ ಬಿಪಿಆರ್​ಡಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ದೇಶದ ಅಭಿವೃದ್ಧಿಯಲ್ಲಿ ಕಾನೂನು ಸುವ್ಯವಸ್ಥೆ ಪ್ರಮುಖ ಪಾತ್ರ ವಹಿಸುತ್ತದೆ. ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ಗಡಿಯಲ್ಲಿ ಸುರಕ್ಷತೆ ಇದೆ. ಐಟಿಬಿಪಿ ಪಡೆ ದುರ್ಗಮ ಪ್ರದೇಶದಲ್ಲೂ ಕೆಲಸ ನಿರ್ವಹಿಸುತ್ತಾರೆ. ದೇಶದ ಗಡಿಯಲ್ಲಿ ಐಟಿಬಿಪಿ ಯೋಧರು ಕೆಲಸ ಮಾಡುತ್ತಾರೆ. ಭಾರತದ ಭದ್ರತೆಯಲ್ಲಿ ಐಟಿಬಿಪಿ ಯೋಧರ ಮಹತ್ವದ ಪಾತ್ರ ಇದೆ. ಪೊಲೀಸರು, ಯೋಧರಿಗೆ ವಸತಿಗೃಹ ನಿರ್ಮಿಸಲಾಗಿದೆ. ಕಳೆದ 8 ವರ್ಷಗಳಲ್ಲಿ ಪ್ರಧಾನಿ ಮೋದಿ ಸರ್ಕಾರದಿಂದ ಯೋಧರ ಕುಟುಂಬಸ್ಥರಿಗೆ ಪ್ರತ್ಯೇಕ ಆಯುಷ್ಮಾನ್ ಯೋಜನೆ ಮಾಡಲಾಗಿದೆ. ಕುಟುಂಬಸ್ಥರ ಜೊತೆ ಸಮಯ ಕಳೆಯಲು ಐಟಿಬಿಪಿ ಯೋಧರಿಗೆ 100 ದಿನ ಅವಕಾಶ ನೀಡಲಾಗುವುದು ಎಂದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:30 pm, Sat, 31 December 22