KSRTC EV ಪವರ್ ಪ್ಲಸ್ ಬಸ್​​​ಗೆ ಹಸಿರು ನಿಶಾನೆ ತೋರಿದ ಸಚಿವ ಶ್ರೀರಾಮುಲು; ಇಲ್ಲಿದೆ ಬಸ್​​ನ ವಿಶೇಷತೆಗಳು

ಎಲೆಕ್ಟ್ರಿಕ್ ಬಸ್​ಗೆ ಸಾರಿಗೆ ಸಚಿವ ಶ್ರೀರಾಮುಲು ಹಸಿರು ನಿಶಾನೆ ತೋರಿದ್ದು, ಹೊಸ ಬಸ್‌ಗೆ EV ಪವರ್ ಪ್ಲಸ್ ಎಂದು ಹೆಸರಿಡಲಾಗಿದ್ದು, ಇಂದಿನಿಂದಲೇ ಬಸ್​ಗಳು ರಸ್ತೆಗಳಿಯಲಿವೆ.

KSRTC EV ಪವರ್ ಪ್ಲಸ್ ಬಸ್​​​ಗೆ ಹಸಿರು ನಿಶಾನೆ ತೋರಿದ ಸಚಿವ ಶ್ರೀರಾಮುಲು; ಇಲ್ಲಿದೆ ಬಸ್​​ನ ವಿಶೇಷತೆಗಳು
KSRTC EV ಪವರ್ ಪ್ಲಸ್ ಬಸ್​​​ಗೆ ಚಾಲನೆ ನೀಡಿದ ಸಚಿವ ಶ್ರೀರಾಮುಲು
Follow us
TV9 Web
| Updated By: Rakesh Nayak Manchi

Updated on:Dec 31, 2022 | 12:55 PM

ಬೆಂಗಳೂರು: ಎಲೆಕ್ಟ್ರಿಕ್ ಬಸ್​​ (Electric Bus)ಗೆ ಸಾರಿಗೆ ಸಚಿವ ಬಿ.ಶ್ರೀರಾಮುಲು (B.Sriramulu) ಅವರು ಹಸಿರು ನಿಶಾನೆ ತೋರಿದ್ದು, ಇಂದಿನಿಂದಲೇ ಸಾರ್ವಜನಿಕರ ಸೇವೆಗೆ ಕಾರ್ಯಾಚರಣೆ ಆರಂಭಿಸಲಿದೆ. MEIL ಹಾಗೂ KSRTC ಜಂಟಿಯಾಗಿ ರಸ್ತೆಗೆ ಇಳಿಯುತ್ತಿರುವ ಈ ಹೊಸ ಬಸ್‌ಗೆ EV ಪವರ್ ಪ್ಲಸ್ ಎಂದು ಹೆಸರಿಡಲಾಗಿದೆ.​ KSRTC EV ಪವರ್ ಪ್ಲಸ್ ಹಲವು ವಿಶೇಷತೆಗಳನ್ನು ಹೊಂದಿದ್ದು, ಅವುಗಳು ಈ ಕೆಳಗಿನಂತಿವೆ.

  • ಎರಡೂವರೆ ತಾಸು ಚಾರ್ಜ್ ಮಾಡಿದರೆ 300 km ಕ್ರಮಿಸುವಷ್ಟು ಸಾಮರ್ಥ್ಯ ಈ ಬಸ್ ಹೊಂದಿದೆ
  • ಬಸ್ ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆ
  • ನೂತನ ತಂತ್ರಜ್ಞಾನವಾದ ರಿ ಜನರೇಷನ್ ಸಿಸ್ಟಮ್ ಅಳವಡಿಕೆ ಮಾಡಲಾಗಿದೆ
  • ಸಂಚರಿಸುವ ಹೊತ್ತಲ್ಲೇ ಅರ್ಧದಷ್ಟು ಬ್ಯಾಟರಿ ರಿ ಚಾರ್ಜ್ ಆಗುವ ರಿ ಜನರೇಷನ್ ಆಗುವ ಸಿಸ್ಟಮ್ ಈ ಬಸ್​​ನಲ್ಲಿ ಇದೆ
  • ಬಸ್ ಒಳಗೆ ಪ್ರಯಾಣಿಕರ ಅನುಕೂಲಕ್ಕೆ ಮೊಬೈಲ್ ಚಾರ್ಜಿಂಗ್ ಸ್ಪಾಟ್ಸ್ ಇದೆ
  • ಮನರಂಜನೆಗಾಗಿ ಎರಡು ಟಿವಿ ಅಳವಡಿಕೆ ಮಾಡಲಾಗಿದೆ

ಇದಲ್ಲದೆ, ಈ ಪರಿಸರ ಸ್ನೇಹಿ ಬಸ್ ಸಂಪೂರ್ಣವಾಗಿ ಸೆನ್ಸಾರ್ ಹಿಡಿತದಲ್ಲಿ ಇರಲಿದ್ದು, ಒಟ್ಟಾರೆ ಬಸ್​​ನಲ್ಲಿ 43 + 2 ಸೀಟಿಂಗ್ ಕೆಪಾಸಿಟಿ ಇದೆ. ಫ್ರಂಟ್ ಲಾಗ್ ಮತ್ತು ಬ್ಯಾಕ್ ಲಾಗ್ ಕ್ಯಾಮೆರಾ ವ್ಯವಸ್ಥೆ ಇರಲಿದೆ. ಡ್ರೈವರ್ ಎಂಡ್ ಸಂಪೂರ್ಣವಾಗಿ ಡಿಜಿಟಲೈಸ್ಡ್ ಸಿಸ್ಟಮ್ ಹೊಂದಿದೆ.

ಇದನ್ನೂ ಓದಿ: Bengaluru New Year Guidelines: ಹೊಸ ವರ್ಷದ ಸಂಭ್ರಮಕ್ಕೆ ರಾಜಧಾನಿ ಬೆಂಗಳೂರು ಸಿದ್ಧ, ಸಂಚಾರ ಮಾರ್ಗದಲ್ಲಿ ಬದಲಾವಣೆ, ಬಿಗಿ ಪೊಲೀಸ್ ಭದ್ರತೆ

ಅಪಘಾತದಲ್ಲಿ ಮೃತ್ತಪಟ್ಟಿದ್ದ ಚಾಲಕನ ಕುಟುಂಬಕ್ಕೆ 1 ಕೋಟಿ ನೆರವು

ಇತ್ತೀಚೆಗೆ ಅಪಘಾತದಲ್ಲಿ ಮೃತಪಟ್ಟ ಚಾಲಕನ ಕುಟುಂಬಕ್ಕೆ ಕೆಎಸ್​​ಆರ್​​ಟಿಸಿ ಒಂದು ಕೋಟಿ ರೂಪಾಯಿ ನೆರವು ನೀಡಿದೆ. ಇದರ ಚೆಕ್​ ಅನ್ನು ಸಚಿವ ಶ್ರೀರಾಮುಲು ಅವರು ವಿತರಿಸಿದರು. ಚಿತ್ರದುರ್ಗ ಡಿಪೋದ ಚಾಲಕ ಕಂ ನಿರ್ವಾಹಕರಾಗಿದ್ದ ಉಮೇಶ್ ಜೆ.ಎಸ್ ಬಸ್ ಚಾಲನೆ ಮಾಡುವ ವೇಳೆ ಅಪಘಾತಗೊಂಡು ಮೃತಪಟ್ಟಿದ್ದರು. ಸದ್ಯ ಇನ್ಶ್ಯೂರೆನ್ಸ್ ಕೋಟಾ ಮೂಲಕ ಒಂದು ಕೋಟಿ ಚೆಕ್ ವಿತರಣೆ ರೂಪಾಯಿ ಪ್ರತ್ಯೇಕ ನೆರವು ವಿತರಿಸಲಾಯಿತು. ಆ ಮೂಲಕ ಶಾಂತಿನಗರ KSRTC ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೃತನ ಕುಟುಂಬಕ್ಕೆ ಒಟ್ಟು ಒಂದು ಕೋಟಿ ಹದಿಮೂರು ಲಕ್ಷ ರೂಪಾಯಿ ವಿತರಣೆ ಮಾಡಲಾಯಿತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:55 pm, Sat, 31 December 22

ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್