ಆನೇಕಲ್, ಅ.09: ಅತ್ತಿಬೆಲೆ (Attibele) ಪಟಾಕಿ ಗೋಡೌನ್‌ನಲ್ಲಿ (Fireworks godown) ಭಾರೀ ಅಗ್ನಿ ದುರಂತ ಸಂಭವಿಸಿದ್ದು, ಬೆಂಕಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ (Death toll) ಹೆಚ್ಚಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಇನ್ನು ಮತ್ತೊಂದೆಡೆ ಅಗ್ನಿ ಶಾಮಕ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಲೈಸೆನ್ಸ್ ಹಾಗೂ ಗೈಡ್ ಲೈನ್ಸ್ ಪರಿಶೀಲನೆ ನಡೆಸಿದ್ದಾರೆ. ಒಟ್ಟು 35ಕ್ಕೂ ಹೆಚ್ಚು ಪಟಾಕಿ ಅಂಗಡಿಗಳ ಲೈಸೆನ್ಸ್ ಚೆಕ್ ಮಾಡಲಾಗಿದ್ದು ತನಿಖೆ ವೇಳೆ ಆರೋಪಿಗಳ ತಪ್ಪು ಬೆಳಕಿಗೆ ಬಂದಿದೆ.
ಘಟನೆ ಬಳಿಕ ಎಚ್ಚೆತ್ತ ಅಧಿಕಾರಿಗಳು ವರ್ಷಪೂರ್ತಿ ಪಟಾಕಿ ವ್ಯಾಪಾರ ಮಾಡುವ ಅಂಗಡಿಗಳ ಲೈಸೆನ್ಸ್ ಚೆಕ್ ಮಾಡಿದ್ದಾರೆ. ಸ್ಫೋಟಕ ನಿಯಂತ್ರಣಕ್ಕೆ ಜಾರಿ ಮಾಡಲಾದ ಗೈಡ್ ಲೈನ್ಸ್ ಫಾಲ್ಲೋ ಮಾಡುತ್ತಿರುವ ಬಗ್ಗೆ ಚೆಕಿಂಗ್ ನಡೆದಿದೆ. ಈ ವೇಳೆ ಆರೋಪಿಗಳ ತಪ್ಪು ಬೆಳಕಿಗೆ ಬಂದಿದೆ. ಇನ್ನು ಅವಘಡ ಸಂಭವಿಸಿದ ಪಟಾಕಿ ಗೋಡೌನ್‌ಗೆ ಲೈಸೆನ್ಸ್ ಇದ್ದದ್ದು ಮಾರಾಟಕ್ಕೆ ಮಾತ್ರ. ನಕಲಿ ದಾಖಲೆ ಮಾಡಿಕೊಂಡು ಪಟಾಕಿ ಸ್ಟೋರ್ ಮಾಡಿರುವುದು ಬೆಳಕಿಗೆ ಬಂದಿದೆ. ಶೋರೂಮ್ ಮೂಲಕ ಪಟಾಕಿ ಮಾರಾಟಕ್ಕೆ ಮಾತ್ರ ಅನುಮತಿ ಇತ್ತು. ಶೋರೂಮ್ ನಲ್ಲಿ ಒಂದು ಸಾವಿರ ಕೆಜಿ ಪಟಾಕಿ ಮಾತ್ರ ಇಡಬೇಕಿತ್ತು. ಆದರೆ ಇಲ್ಲಿ ಮೂರರಿಂದ ನಾಲ್ಕು ಲಾರಿ ಪಟಾಕಿ ಇಟ್ಟಿದ್ದರು. ಸುಮಾರು ಒಂದು ಲಕ್ಷ ಕೆಜಿಗೂ ಅಧಿಕ ಪಟಾಕಿ ಇರುವ ಬಗ್ಗೆ ಮಾಹಿತಿ ಸಿಕ್ಕಿದೆ.
ಇದನ್ನೂ ಓದಿ: ಆನೇಕಲ್: ಆಕಸ್ಮಿಕ ಬೆಂಕಿಗೆ ಹೊತ್ತಿ ಉರಿದ ಪಟಾಕಿ ಅಂಗಡಿ: 13 ಜನರು ಸಜೀವದಹನ
ಪಟಾಕಿ ಮಾರಾಟಕ್ಕೆ ಎರಡು ಮಾದರಿಯ ಲೈಸೆನ್ಸ್ ನೀಡಲಾಗುತ್ತದೆ. ದೀಪಾವಳಿ ಸಂದರ್ಭದಲ್ಲಿ ಹದಿನೈದು ದಿನಕ್ಕೆ ಒಂದು ಮಾದರಿ ಲೈಸೆನ್ಸ್ ನೀಡಲಾಗುತ್ತದೆ. ಐದು ವರ್ಷಗಳ ಕಾಲಕ್ಕೆ ಪರ್ಮನೆಂಟ್ ಲೈಸೆನ್ಸ್ ನೀಡಲಾಗುತ್ತೆ. ಅತ್ತಿಬೆಲೆ ದುರಂತದಲ್ಲಿ ಆರೋಪಿಗಳ ಬಳಿ ಐದು ವರ್ಷದ ಲೈಸೆನ್ಸ್ ಇತ್ತು. ಗೋಡೌನ್‌ಗೆ ಅನುಮತಿ ಇಲ್ಲದಿದ್ರು ಪಟಾಕಿ ಶೇಖರಣೆ ಮಾಡಲಾಗಿದೆ. ಗೋಡೌನ್‌ಗೆ ಕನಿಷ್ಠ ಎರಡರಿಂದ ಮೂರು ಬಾಗಿಲು ಇರಬೇಕಿತ್ತು. ಆದ್ರೆ ಇಲ್ಲಿ ಅದೂ ಸಹ ಇರಲಿಲ್ಲ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ