ಬೆಂಗಳೂರು: ಬುದ್ಧಿಮಾಂದ್ಯನಂತೆ ನಟಿಸಿ ಮೊಬೈಲ್, ಪರ್ಸ್ ಕದಿಯುತ್ತಿದ್ದವ ಅರೆಸ್ಟ್​​

| Updated By: ವಿವೇಕ ಬಿರಾದಾರ

Updated on: Oct 07, 2023 | 10:32 AM

ಬುದ್ಧಿಮಾಂದ್ಯನಂತೆ ನಟಿಸಿ ಮೊಬೈಲ್, ಪರ್ಸ್ ಕದಿಯುತ್ತಿದ್ದವನನ್ನು ಹೊಸಕೋಟೆ ಪೊಲೀಸರು ಬಂಧಿಸಿದ್ದಾರೆ. ಆರೋಪಿ ವಿನಯ್​​​ನಿಂದ ಪೊಲೀಸರು 50 ಲಕ್ಷ ಮೌಲ್ಯದ ವಿವಿಧ ಬ್ರ್ಯಾಂಡ್​ನ 150ಕ್ಕೂ ಹೆಚ್ಚು ಮೊಬೈಲ್​ಗಳನ್ನು​ ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು: ಬುದ್ಧಿಮಾಂದ್ಯನಂತೆ ನಟಿಸಿ ಮೊಬೈಲ್, ಪರ್ಸ್ ಕದಿಯುತ್ತಿದ್ದವ ಅರೆಸ್ಟ್​​
ಹೊಸಕೋಟೆ ಪೊಲೀಸ್​ ಠಾಣೆ
Follow us on

ಬೆಂಗಳೂರು ಗ್ರಾಮಾಂತರ ಅ.07: ಬುದ್ಧಿಮಾಂದ್ಯನಂತೆ ನಟಿಸಿ ಮೊಬೈಲ್, ಪರ್ಸ್ ಕದಿಯುತ್ತಿದ್ದವನನ್ನು (Theft) ಹೊಸಕೋಟೆ (Hoskote) ಪೊಲೀಸರು (Police) ಬಂಧಿಸಿದ್ದಾರೆ. ವಿನಯ್ ಬಂಧಿತ ಆರೋಪಿ. ಆರೋಪಿ ವಿನಯ್​​​ನಿಂದ ಪೊಲೀಸರು 50 ಲಕ್ಷ ಮೌಲ್ಯದ ವಿವಿಧ ಬ್ರ್ಯಾಂಡ್​ನ 150ಕ್ಕೂ ಹೆಚ್ಚು ಮೊಬೈಲ್​ಗಳನ್ನು​ ವಶಪಡಿಸಿಕೊಂಡಿದ್ದಾರೆ. ಆರೋಪಿ ವಿನಯ್ ಬಸ್​ ನಿಲ್ದಾಣದಲ್ಲಿ ಬಸ್ ನಿಲ್ಥಾಣದಲ್ಲಿ ಬೆಳಗ್ಗೆ ಮತ್ತು ಸಂಜೆ ವೇಳೆ ಬುದ್ದಿ ಮಾಂದ್ಯನಂತೆ ನಟಿಸುತ್ತಾ ನಿಲ್ಲುತ್ತಿದ್ದನು. ಬಳಿಕ ನೂಕುನುಗ್ಗಲಿನಲ್ಲಿ ಬಸ್ ಹತ್ತುತ್ತಿದ್ದವರ ಮೊಬೈಲ್, ಪರ್ಸ್ ಕದಿಯುತ್ತಿದ್ದನು.

ಆರೋಪಿ ವಿನಯ್​ ಖದ್ದ ಮೊಬೈಲ್​​ಗಳ ಪಾಸ್​ವರ್ಡ್ ಒಪನ್ ಮಾಡಿ ಗೂಗಲ್ ಪೇ, ಪೋನ್ ಪೇ ಒಪನ್ ಮಾಡುತ್ತಿದ್ದನು. ನಂತರ ಒಟಿಪಿ ಪಡೆದು ಆನ್ ಲೈನ್ ಮೂಲಕ‌ ಆಂದ್ರಪ್ರದೇಶ, ತಮಿಳುನಾಡು ಮಹಾರಾಷ್ಟ್ರ ಸ್ನೇಹಿತರಿಗೆ ಹಣ ಕಳಿಸುತ್ತಿದ್ದನು. ನಂತರ ಇದೇ ಅಕೌಂಟ್​ಗೆ ಹಣ ಹಾಕಿಸಿಕೊಂಡು ಮಜಾ‌ ಮಾಡುತ್ತಿದ್ದನು. ಇದೇ ರೀತಿ 150ಕ್ಕೂ ಹೆಚ್ಚು ಮೊಬೈಲ್​​ಗಳನ್ನು ಖದ್ದು ಆರೋಪಿ ಸಾಕಷ್ಟು ಹಣ ಮಾಡಿಕೊಂಡಿದ್ದನು.

ಇದನ್ನೂ ಓದಿ: ಬೆಂಗಳೂರಿನ ಖಾಸಗಿ ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು, 39 ಲಕ್ಷ ರೂ. ಸಾಲ ಪಡೆದ ಭೂಪ

ಮೆಡಿಕಲ್​ ಸ್ಟೋರ್​​ಗಳ ಮೇಲೆ ಕ್ರೈಂ ಪೊಲೀಸರ ದಾಳಿ

ಕೋಲಾರ: ವೈದ್ಯರ ಅನುಮತಿ ಇಲ್ಲದೆ ಮತ್ತೇರಿಸುವ ಮಾತ್ರೆ ಮಾರಾಟ ಮಾಡುತ್ತಿರುವ ಹಿನ್ನೆಲೆಯಲ್ಲಿ ಕೋಲಾರ ಬಸ್ ನಿಲ್ದಾಣ ಬಳಿಯ ನಂಜುಂಡೇಶ್ವರ ಮೆಡಿಕಲ್ ಸ್ಟೋರ್, ಶ್ರೀಕಾರ್ ಮೆಡಿಕಲ್ ಸ್ಟೋರ್​​ಗಳ ಮೇಲೆ ಸೈಬರ್‌ ಕ್ರೈಂ ಪೊಲೀಸರು ದಾಳಿ ಮಾಡಿದ್ದಾರೆ.

ಈ ಮೆಡಿಕಲ್​ ಸ್ಟೋರ್​ಗಳು ವೈದ್ಯರ ಅನುಮತಿ ಇಲ್ಲದೆ ಯುವಕರಿಗೆ ದುಪ್ಪಟ್ಟು ಬೆಲೆಗೆ ಮತ್ತೇರಿಸುವ ಮಾತ್ರೆ ಮಾರಾಟ ಮಾಡುತ್ತಿದ್ದವು. ಇಲ್ಲಿಂದ ಮಾತ್ರೆ ಪಡೆದು ಯುವಕರು ಮತ್ತೇರಿಸಿಕೊಳ್ಳುತ್ತಿದ್ದ ವೇಳೆ ಸೈಬರ್ ಕ್ರೈಂ ಪೋಲೀಸರ ಕೈಗೆ ಸಿಕ್ಕಿಬಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ