ಬೆಂಗಳೂರಿನ ಖಾಸಗಿ ಬ್ಯಾಂಕ್ನಲ್ಲಿ ನಕಲಿ ಚಿನ್ನ ಅಡವಿಟ್ಟು, 39 ಲಕ್ಷ ರೂ. ಸಾಲ ಪಡೆದ ಭೂಪ
ನಕಲಿ ಚಿನ್ನದ ಒಡವೆ ಮೇಲೆ ಅಸಲಿ ಚಿನ್ನದಂತೆ ಮೂರು ಪದರು ಲೇಪನ ಮಾಡಿಸಿ, ಬೆಂಗಳೂರಿನ ಖಾಸಗಿ ಬ್ಯಾಂಕ್ನಲ್ಲಿ ಅಡವಿಟ್ಟು ಆರೋಪಿ ಬರೊಬ್ಬರಿ 39 ಲಕ್ಷ ರೂ. ಸಾಲ ಪಡೆದು ವಂಚಿಸಿದ್ದಾನೆ.
ಬೆಂಗಳೂರು ಅ.07: ನಗರದ ಖಾಸಗಿ ಬ್ಯಾಂಕ್ವೊಂದರಲ್ಲಿ (Bank) ನಕಲಿ ಚಿನ್ನ (Fake Gold) ಅಡವಿಟ್ಟು, 39 ಲಕ್ಷದ 59 ಸಾವಿರ ರೂ. ಹಣ ಪಡೆದು ವಂಚಿಸಿದ ಆರೋಪಿ ರಂಗನಾಥ್ ವಿರುದ್ಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ (Ashok Nagar Police Station) ಪ್ರಕರಣ ದಾಖಲಾಗಿದೆ. ಆರೋಪಿ ರಂಗನಾಥ್ 3 ಪದರಗಳ ಲೇಪನದ 1 ಕೆಜಿ ನಕಲಿ ಚಿನ್ನದ ಒಡವೆ ಅಡವಿಟ್ಟು ಮೇ 25ರಂದು 39 ಲಕ್ಷ ರೂ. ಸಾಲ ಪಡೆದಿದ್ದನು.
ಬ್ಯಾಂಕ್ ಸಿಬ್ಬಂದಿ ಒಡವೆಯ ಮೊದಲ ಪದರನ್ನು ಪರೀಕ್ಷಿಸಿದಾಗ ಅಸಲಿ ಎಂದು ತಿಳಿದುಬಂದಿದೆ. ಒಂದೆರಡು ತಿಂಗಳ ನಂತರ ಬ್ಯಾಂಕ್ ಆಡಿಟಿಂಗ್ ವೇಳೆ ಮತ್ತೆ ಚಿನ್ನವನ್ನು ಪರೀಕ್ಷಿಸಿದಾಗ ಅನುಮಾನ ಹುಟ್ಟು ಹಾಕಿದೆ. ಈ ಹಿನ್ನೆಲೆಯಲ್ಲಿ ಮತ್ತೆ ಮೊದಲಿನಿಂದ ಸಂಪೂರ್ಣವಾಗಿ ಚಿನ್ನವನ್ನು ಪರೀಕ್ಷಿಸಿದಾಗ ನಕಲಿ ಎಂದು ತಿಳಿದುಬಂದಿದೆ. ಇನ್ನು ಸಾಲ ಪಡೆದ ಆರೋಪಿ ರಂಗನಾಥ್ ಎರಡೂ ತಿಂಗಳಾದರೂ ಬ್ಯಾಂಕ್ ಕಡೆ ತಲೆ ಹಾಕದಿದ್ದಾಗ, ಸಿಬ್ಬಂದಿ ಅನುಮಾನಗೊಂಡು ಪರೀಕ್ಷೆ ಮಾಡಿದ್ದಾರೆ.
ಇದನ್ನೂ ಓದಿ: ಭಾರತದ ಸೇನೆ ಹೆಸರಲ್ಲಿ ಅಂಗಡಿ ಮಾಲೀಕನಿಗೆ 1.47 ಲಕ್ಷ ವಂಚನೆ
ಪ್ರಕರಣ ಸಂಬಂಧ ಖಾಸಗಿ ಬ್ಯಾಂಕ್ನ ಸ್ಟೇಟ್ ಹೆಡ್ ಮ್ಯಾನೇಜರ್ ಲಕ್ಷೇಶ್ ರಾಲಪಲ್ಲಿ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ