ಆನೇಕಲ್: ವಿದ್ಯುತ್ ಹರಿದು ಬೆಸ್ಕಾಂ ಸಿಬ್ಬಂದಿ ಮೃತಪಟ್ಟ ಘಟನೆ ಆನೇಕಲ್ ತಾಲೂಕಿನ ಸರ್ಜಾಪುರ ಹೊರವಲಯದಲ್ಲಿ ನಡೆದಿದೆ. ವಿಜಯಪುರ ಮೂಲದ ಪವನ್ (24) ಮೃತ ದುರ್ದೈವಿ. ಇಂದು ಮಧ್ಯಾಹ್ನ ಸರ್ಜಾಪುರದ ಯಮರೆ ಗ್ರಾಮದ ಬಳಿ ರೋಡ್ ಕಾಮಗಾರಿ ಪೂರ್ಣ ಆದ ಹಿನ್ನೆಲೆ ಕನೆಕ್ಷನ್ ನೀಡಲು ಬಂದಿದ್ದ ವೇಳೆ ರಿವರ್ಸ್ ವಿದ್ಯುತ್ ಹರಿದು ಘಟನೆ ನಡೆದಿದೆ. ಜೆಇ ಸುರೇಶ್ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸರ್ಜಾಪುರದಲ್ಲಿ ಡಬಲ್ ರೋಡ್ ಕಾಮಗಾರಿ ಪ್ರಯುಕ್ತ ಕೆಲ ಗಂಟೆಗಳ ಕಾಲ ವಿದ್ಯುತ್ ಕಡಿತಗೊಳಿಸಲಾಗಿತ್ತು, ಕಟ್ ಮಾಡಲಾದ ಕನೆಕ್ಷನ್ ಮತ್ತೆ ವಾಪಾಸ್ ನೀಡುವ ಸಂದರ್ಭದಲ್ಲಿ ಇದಕ್ಕಿದ್ದಂತೆ ತಂತಿಯಲ್ಲಿ ರಿವರ್ಸ್ ವಿದ್ಯುತ್ ಹರಿದಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಕೆಲಸದಲ್ಲಿ ನಿರತನಾಗಿದ್ದ ಪವನ್ ವಿದ್ಯುತ್ ಹರಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಮೂರು ವರ್ಷದ ಹಿಂದೆ ಬೆಸ್ಕಾಂ ಸಿಬ್ಬಂದಿಯಾಗಿ ಸೇರಿದ್ದ ಇಪ್ಪತ್ನಾಲ್ಕು ವರ್ಷದ ಪವನ್ ಬಹಳ ಆ್ಯಕ್ಟೀವ್ ಆಗಿ ಕೆಲಸ ಮಾಡುತ್ತಿದ್ದ. ಘಟನೆ ನಡೆದ ಬಳಿಕ ಸ್ಥಳೀಯರು ಮೇಲಾಧಿಕಾರಿಗಳ ವಿರುದ್ಧ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಜೆಇ ಸುರೇಶ್ ಇದಕ್ಕೆ ನೇರ ಹೊಣೆ ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಕೆಲ ತಿಂಗಳ ಹಿಂದೆ ಇಂತಹದ್ದೇ ಕಾರಣಕ್ಕೆ ಹಾಜಿ ಮಲಂಗ್ ಎನ್ನುವ ಒಬ್ಬ ಬೆಸ್ಕಾಂ ಸಿಬ್ಬಂದಿ ಸಾವನಪ್ಪಿದ್ದ, ಇಷ್ಟಾದ್ರೂ ಮೇಲಾಧಿಕಾರಿಗಳು ಸೇಫ್ಟಿ ಮೆಜರ್ಸ್ ತೆಗೆದುಕೊಳ್ಳದೇ ಸಿಬ್ಬಂದಿಯನ್ನು ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ
ಚಾಮರಾಜನಗರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದ ಕೆಎಸ್ಆರ್ಟಿಸಿ ಬಸ್
ಚಾಮರಾಜನಗರ: ಕೆಎಸ್ಆರ್ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಸೇತುವೆ ಕೆಳಕ್ಕೆ ಬಿದ್ದಿದ್ದು ಇಬ್ಬರು ಮೃತಪಟ್ಟಿದ್ದಾರೆ. ಹಾಗೂ ಐದು ಮಂದಿ ಸ್ಥಿತಿ ಗಂಭೀರವಾಗಿರುವ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಕುಡುವಾಳೆ ಬಳಿ ನಡೆದಿದೆ. ಕೊಳ್ಳೇಗಾಲದಿಂದ ಪಿ.ಜಿ.ಪಾಳ್ಯಕ್ಕೆ ಹೋಗುತ್ತಿದ್ದ ಬಸ್ ಅಪಘಾತಕ್ಕೀಡಾಗಿದೆ.
ಸೇತುವೆ ಕೆಳಗಿನ ಕಾಲುವೆಗೆ ಬಸ್ ಬಿದ್ದಿದೆ. ಕಾಲುವೆಯಲ್ಲಿನ ನೀರಿಗೆ ಬಸ್ ಬಿದ್ದ ಕಾರಣ ಸದ್ಯ ಸ್ಥಳೀಯರು ಪ್ರಯಾಣಿಕರ ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದಾರೆ. ಸ್ಥಳಕ್ಕೆ ಹನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆಯಲ್ಲಿ ಮಾಳಿಗನತ್ತ ಗ್ರಾಮದ ಶಿವಮ್ಮ(70), ಪಿ.ಜಿ.ಪಾಳ್ಯದ ರಮೇಶ್(28) ಮೃತಪಟ್ಟಿದ್ದಾರೆ. ಶಿವಮ್ಮ ಸ್ಥಳದಲ್ಲೇ ಮೃತಪಟ್ಟಿದ್ದು, ರಮೇಶ್ ಕಾಮಗೆರೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಶಾಸಕನಾಗಿ 20X30 ಅಳತೆಯ ಸೈಟ್ ಉಚಿತವಾಗಿ ಮೃತ ಅಶ್ವಿನ್ ಕುಟುಂಬಸ್ಥರಿಗೆ ನೀಡುತ್ತೇನೆ: ಎಸ್ಆರ್ವಿಶ್ವನಾಥ್
ಸದನದಲ್ಲಿ ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ನಡುವೆ ಮಾತಿನ ಚಕಮಕಿ!
Published On - 5:25 pm, Mon, 14 March 22