ಸದನದಲ್ಲಿ ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ನಡುವೆ ಮಾತಿನ ಚಕಮಕಿ!
ಉಪಸಭಾಪತಿ ವಿಶ್ವನಾಥ ಚಂದ್ರಶೇಖರ ಮಾಮನಿ ಅವರು ಜಮೀರ್ ಗೆ ದಯವಿಟ್ಟು ಕೂತ್ಕೊಳ್ಳಿ ಅಂತ ಪದೇಪದೆ ಹೇಳಿದರೂ ಕಾಂಗ್ರೆಸ್ ಶಾಸಕ ನಿಲ್ಲಿಸುವುದಿಲ್ಲ. ಮಾತಾಡಲಿ ಬಿಡಿ ಅಂತ ಕುಮಾರಸ್ವಾಮಿ ಹೇಳುತ್ತಾರೆ.
ಬೆಂಗಳೂರು: ಕಳೆದ ಕೆಲ ದಿನಗಳಿಂದ ವಿಧಾನ ಮಂಡಲದ ಕಾರ್ಯಕಲಾಪ (Assembly proceedings) ಆಡಳಿತ (ruling) ಮತ್ತು ವಿರೋಧ ಪಕ್ಷಗಳ (opposition party) ನಡುವಿನ ವಾಗ್ವಾದ ಬಿಟ್ಟು ವಿರೋಧ ಪಕ್ಷಗಳಾಗಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ಕಲಹಕ್ಕೆ ಸಾಕ್ಷಿಯಾಗುತ್ತಿದೆ. ಮತ್ತೊಂದು ಆಸಕ್ತಿಕರ ವಿಷಯವೇನೆಂದರೆ, ಮಾತಿನ ಚಕಮಕಿ ನಡೆಯುತ್ತಿರೋದು ಜೆಡಿಎಸ್ ಪಕ್ಷದ ಹಾಲಿ ಮತ್ತು ಮಾಜಿ ಶಾಸಕರ ನಡುವೆ. ಕಳೆದ ವಾರ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಹೆಚ್ ಡಿ ಕುಮಾರಸ್ವಾಮಿ ನಡುವೆ ತೀವ್ರ ಸ್ವರೂಪದ ವಾಗ್ವಾದ ನಡೆದಿತ್ತು. ಸಿದ್ದರಾಮಯ್ಯ 2008 ರಲ್ಲಿ ಕಾಂಗ್ರೆಸ್ ಸೇರುವ ಮೊದಲು ಜೆಡಿಎಸ್ ಪಕ್ಷದಲ್ಲಿದ್ದರು. ಇವತ್ತು ಅಂದರೆ ಸೋಮವಾರ ಕುಮಾರಸ್ವಾಮಿ ಮತ್ತು ಹಿಂದೆ ಅವರ ಆಪ್ತಮಿತ್ರ ಮತ್ತು ಜೆಡಿಎಸ್ ಪಕ್ಷದ ಕಾರ್ಯಕರ್ತರಾಗಿದ್ದ ಜಮೀರ್ ಅಹ್ಮದ್ ನಡುವೆ ಮಾತಿನ ಜುಗಲ್ ಬಂದಿ ನಡೆಯಿತು.
ಸಮವಸ್ತ್ರ ವಿಚಾರವಾಗಿ ವಿಧಾನಸಭೆಯಲ್ಲಿ ನಿಲುವಳಿ ಸೂಚನೆ ಪ್ರಸ್ತಾಪ ಮಂಡಿಸಿ ಕುಮಾರಸ್ವಾಮಿ ಅದರ ಅಡಿಯಲ್ಲಿ ಚರ್ಚೆಗೆ ಅವಕಾಶ ಕೋರಿದ ಬಳಿಕ ಅವರ ಮತ್ತು ಜಮೀರ್ ನಡುವೆ ಮಾತಿನ ಚಕಮಕಿ ನಡೆಯಿತು. ಜಮೀರ್ ಏನು ಹೇಳಲು ಬಯಸುತ್ತಿದ್ದಾರೆ ಅಂತ ಆರ್ಥವಾಗುವುದಿಲ್ಲ. ಅವರು ಹಿಜಾಬ್ ಬಗ್ಗೆ ಪ್ರಸ್ತಾಪ ಮಾಡಿರಬಹುದು ಅನಿಸುತ್ತದೆ.
ನಿಮಗೆ ನೆನಪಿರಬಹುದು, ಹಿಜಾಬ್ ವಿವಾದ ಉತ್ತುಂಗದಲ್ಲಿದ್ದಾಗ ಜಮೀರ್ ಅವರು ಒಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಮುಸ್ಲಿಂ ಸಮುದಾಯದ ನಾಯಕರೇ ಅವರ ಹೇಳಿಕೆಯನ್ನು ಖಂಡಿಸಿದ್ದರು. ಅವರು ಅದೇ ಸಂಗತಿಯ ಮೇಲೆ ಮಾರಾಡಬೇಕು ಅಂತ ಅಂದುಕೊಂಡಿರಬಹುದು.
ಉಪಸಭಾಪತಿ ವಿಶ್ವನಾಥ ಚಂದ್ರಶೇಖರ ಮಾಮನಿ ಅವರು ಜಮೀರ್ ಗೆ ದಯವಿಟ್ಟು ಕೂತ್ಕೊಳ್ಳಿ ಅಂತ ಪದೇಪದೆ ಹೇಳಿದರೂ ಕಾಂಗ್ರೆಸ್ ಶಾಸಕ ನಿಲ್ಲಿಸುವುದಿಲ್ಲ. ಮಾತಾಡಲಿ ಬಿಡಿ ಅಂತ ಕುಮಾರಸ್ವಾಮಿ ಹೇಳುತ್ತಾರೆ. ಅವರ ಬೆಂಬಲಕ್ಕೆ ಬಂಡೆಪ್ಪ ಕಾಶೆಂಪುರ ಸಹ ನಿಂತುಕೊಳ್ಳುತ್ತಾರೆ.
ಇದನ್ನೂ ಓದಿ: ಕಿಕ್ಕಿರಿದು ತುಂಬಿದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೊಳಗಿದ ‘ಬೊಂಬೆ ಹೇಳುತೈತೆ’; ರೋಮಾಂಚನಕಾರಿ ವಿಡಿಯೋ ಇಲ್ಲಿದೆ