ಅಶ್ವಿನ್ ಪ್ರಾಣ ಕಳೆದುಕೊಂಡ ನಂತರ ಬಿ ಬಿ ಎಮ್ ಪಿ ಗುಂಡಿಯನ್ನು ಮುಚ್ಚಿ ರಸ್ತೆ ದುರಸ್ತಿ ಮಾಡಿದೆ!
ಲಭ್ಯವಾಗಿರುವ ಮಾಹಿತಿ ಪ್ರಕಾರ ಆಶ್ವಿನ್ ಹಾವೇರಿ ಮೂಲದವರಾಗಿದ್ದರು ಮತ್ತು ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ತಾಯಿಗೆ ಅಶ್ವಿನ್ ಒಬ್ಬನೇ ಮಗನಾಗಿದ್ದರು. ಅವರ ಮೇಲೆ ಈಗ ಆಕಾಶವೇ ಕಳಚಿಬಿದ್ದಿದೆ. ಸರ್ಕಾರ ಸಹಾಯ ಮಾಡುವ ಭರವಸೆ ನೀಡಿದೆ.
ಬೆಂಗಳೂರು: ಬೆಂಗಳೂರು ಜಲಮಂಡಳಿ (BWSSB) ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (BBMP) ಬೇಜವಾಬ್ದಾರಿ, ನಿರ್ಲಕ್ಷ್ಯ ಮತ್ತು ಉಢಾಫೆ ದೋರಣೆ ಕೋರ್ಟ್ ಗಳು ಛೀಮಾರಿ ಹಾಕಿದರೂ ಮುಂದುವರಿದಿದೆ. ನಗರದ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ಗುಂಡಿಗಳು (potholes) ಬಿದ್ದಿವೆ. ಅವುಗಳನ್ನು ದುರಸ್ತಿ ಮಾಡಬೇಕು ಅಂತ ಬಿ ಬಿ ಎಮ್ ಪಿಗೆ ಅನಿಸುವುದೇ ಇಲ್ಲ. ಇನ್ನು ಜಲಮಂಡಳಿ ನಗರದ ಪ್ರತಿಯೊಂದು ಏರಿಯಾನಲ್ಲಿ ನೀರನ ಪೈಪ್ ಅಳವಡಿಸಲು ರಸ್ತೆಗಳನ್ನು ಸಿಕ್ಕಾಪಟ್ಟೆ ಅಗೆಯುತ್ತಿದೆ. ಪೈಪ್ ಅಳವಡಿಸಿದ ಬಳಿಕ ಇಲಾಖೆಯ ಸಿಬ್ಬಂದಿ ರಸ್ತೆಯನ್ನು ಮೊದಲಿನಂತೆ ಮಾಡುವುದಿಲ್ಲ. ನಗರದ ಎಮ್ ಎಸ್ ಪಾಳ್ಯದ ಮುನೇಶ್ವರ ಲೇಔಟ್ ನಲ್ಲಿ ಜಲಮಂಡಳಿ ಅಗೆದಿದ್ದ ಗುಂಡಿಗೆ ಬಿದ್ದು ಆಶ್ವಿನ್ ಹೆಸರಿನ 27-ವರ್ಷದ ಬೈಕ್ ಸವಾರನೊಬ್ಬ ಪ್ರಾಣ ಕಳೆದುಕೊಂಡಿದ್ದಾರೆ. ಅಶ್ವಿನ್ ರವಿವಾರ ರಾತ್ರಿ ಗುಂಡಿಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಅವರ ಸ್ನೇಹಿತರು ಕೂಡಲೇ ಆಸ್ಪತ್ರೆಗೆ ಸೇರಿಸಿದರಾದರೂ ಸೋಮವಾರದಂದು ಅಶ್ವಿನ್ ಕೊನೆಯುಸಿರೆಳೆದರು.
ಅಶ್ವಿನ್ ಅವರನ್ನು ಬಲಿ ತೆಗೆದುಕೊಂಡ ಬಳಿಕ ಬಿ ಬಿ ಎಮ್ ಪಿ ಅಧಿಕಾರಿಗಳು ತರಾತುರಿಯಲ್ಲಿ ಗುಂಡಿ ಮುಚ್ಚಿ ರಸ್ತೆ ದುರಸ್ತಿ ಮಾಡುತ್ತಿದ್ದಾರೆ. ಕೆಲಸ ಮಾಡಿಸಲು ಬಂದ ಅಧಿಕಾರಿಗಳನ್ನು ಸ್ಥಳೀಯರು ವಾಚಾಮಗೋಚರವಾಗಿ ಜರಿದರು. ಅವರ ವಿರುದ್ಧ ಕ್ರಿಮಿನಲ್ ಕೇಸ್ ಜಡಿಯಬೇಕೆಂದು ಸರ್ಕಾರವನ್ನು ಆಗ್ರಹಿಸಿದರು. ಇಂಥ ಸಾವಿರಾರು ಗುಂಡಿಗಳು ನಗರದಲ್ಲಿ ಸಿಗುತ್ತವೆ. ಅವನ್ನೆಲ್ಲ ಯಾರು ಮುಚ್ಚುತ್ತಾರೆ?
ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಆಶ್ವಿನ್ ಹಾವೇರಿ ಮೂಲದವರಾಗಿದ್ದರು ಮತ್ತು ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ತಾಯಿಗೆ ಅಶ್ವಿನ್ ಒಬ್ಬನೇ ಮಗನಾಗಿದ್ದರು. ಅವರ ಮೇಲೆ ಈಗ ಆಕಾಶವೇ ಕಳಚಿಬಿದ್ದಿದೆ. ಸರ್ಕಾರ ಸಹಾಯ ಮಾಡುವ ಭರವಸೆ ನೀಡಿದೆ.
ಆದರೆ ಮಗನನ್ನು ಕಳೆದುಕೊಂಡಿರುವ ತಾಯಿಗೆ ಭೌತಿಕ ನೆರವುಗಳಿಂದ ದುಃಖ ಶಮನವಾದೀತೇ? ಅವರ ನೋವು-ಯಾತನೆ ನಿರಂತರ. ಪುತ್ರಶೋಕ ನಿರಂತರ ಅಂತ ಹೇಳುವುದಿಲ್ಲವೇ?
ಇದನ್ನೂ ಓದಿ: ಶಾಸಕನಾಗಿ 20X30 ಅಳತೆಯ ಸೈಟ್ ಉಚಿತವಾಗಿ ಮೃತ ಅಶ್ವಿನ್ ಕುಟುಂಬಸ್ಥರಿಗೆ ನೀಡುತ್ತೇನೆ: ಎಸ್ಆರ್ವಿಶ್ವನಾಥ್