AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಸಕನಾಗಿ 20X30 ಅಳತೆಯ ಸೈಟ್‌ ಉಚಿತವಾಗಿ ಮೃತ ಅಶ್ವಿನ್​ ಕುಟುಂಬಸ್ಥರಿಗೆ ನೀಡುತ್ತೇನೆ: ಎಸ್​ಆರ್​ವಿಶ್ವನಾಥ್​

ತನಿಖೆ ಬಳಿಕ ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು. ಪರಿಹಾರದ ಬಗ್ಗೆ ಪಾಲಿಕೆ ಮುಖ್ಯ ಆಯುಕ್ತರ ಜತೆ ಚರ್ಚಿಸಿದ್ದೇನೆ. ಸಿಎಂ ಬೊಮ್ಮಾಯಿ ಗಮನಕ್ಕೆ ತಂದು ಪರಿಹಾರ ಘೋಷಿಸುತ್ತೇವೆ ಎಂದು ಯಲಹಂಕ ಕ್ಷೇತ್ರದ ಶಾಸಕ ಎಸ್.ಆರ್.‌ವಿಶ್ವನಾಥ್ ತಿಳಿಸಿದ್ದಾರೆ.

ಶಾಸಕನಾಗಿ 20X30 ಅಳತೆಯ ಸೈಟ್‌ ಉಚಿತವಾಗಿ ಮೃತ ಅಶ್ವಿನ್​ ಕುಟುಂಬಸ್ಥರಿಗೆ ನೀಡುತ್ತೇನೆ: ಎಸ್​ಆರ್​ವಿಶ್ವನಾಥ್​
ಶಾಸಕ ಎಸ್.ಆರ್.ವಿಶ್ವನಾಥ್
TV9 Web
| Updated By: preethi shettigar|

Updated on:Mar 14, 2022 | 5:28 PM

Share

ಬೆಂಗಳೂರು: ನಗರದಲ್ಲಿ ಇಂದು (ಮಾರ್ಚ್​ 14) ರಸ್ತೆಗುಂಡಿಗೆ ಅಶ್ವಿನ್(27) ಬಲಿಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಲಹಂಕ ಕ್ಷೇತ್ರದ ಶಾಸಕ ಎಸ್.ಆರ್.‌ವಿಶ್ವನಾಥ್(SR Vishwanath) ಪ್ರತಿಕ್ರಿಯೆ ನೀಡಿದ್ದು, ಅಶ್ವಿನ್(Ashwin) ಕುಟುಂಬದವರಿಗೆ ಉಚಿತವಾಗಿ ಸರ್ಕಾರದಿಂದ ನಿವಾಸ ನೀಡಲಾಗುತ್ತದೆ. ಸರ್ಕಾರದಿಂದ‌ ಉಚಿತವಾಗಿ ಮನೆ ಕೊಡಿಸುವ ಕೆಲಸ ಮಾಡುತ್ತೇನೆ. ಶಾಸಕನಾಗಿ 20X30 ಅಳತೆಯ ಸೈಟ್‌(Site) ಉಚಿತವಾಗಿ ನೀಡುತ್ತೇನೆ. ಇನ್ನೂ 20X30 ಅಳತೆ ಸೈಟ್‌ನಲ್ಲಿ ಉಚಿತವಾಗಿ ಮನೆ ಕಟ್ಟಿಸಿಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಯಲಹಂಕ ಕ್ಷೇತ್ರದ ಮುನೇಶ್ವರ ಲೇಔಟ್​ನಲ್ಲಿ ರಸ್ತೆಗುಂಡಿಗೆ ಇಂದು ಅಶ್ವಿನ್ ಬಳಿಯಾಗಿದ್ದಾನೆ. ರಸ್ತೆ ಚೆನ್ನಾಗಿದೆ. ಮ್ಯಾನ್‌ಹೋಲ್‌ನಿಂದ ಅಪಘಾತ ಸಂಭವಿಸಿದೆ. ಅನಧಿಕೃತವಾಗಿ ಸಂಪರ್ಕ ನೀಡಲಾಗಿದೆ. ಎಫ್​ಐಆರ್​ ದಾಖಲಿಸುತ್ತೇವೆ. ತನಿಖೆ ಬಳಿಕ ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು. ಪರಿಹಾರದ ಬಗ್ಗೆ ಪಾಲಿಕೆ ಮುಖ್ಯ ಆಯುಕ್ತರ ಜತೆ ಚರ್ಚಿಸಿದ್ದೇನೆ. ಸಿಎಂ ಬೊಮ್ಮಾಯಿ ಗಮನಕ್ಕೆ ತಂದು ಪರಿಹಾರ ಘೋಷಿಸುತ್ತೇವೆ ಎಂದು ಯಲಹಂಕ ಕ್ಷೇತ್ರದ ಶಾಸಕ ಎಸ್.ಆರ್.‌ವಿಶ್ವನಾಥ್ ತಿಳಿಸಿದ್ದಾರೆ.

ರಸ್ತೆ ಗುಂಡಿಗೆ ಬಿದ್ದು ಯುವಕ ಮೃತಪಟ್ಟಿರುವ ವಿಚಾರ ಬೆಳಿಗ್ಗೆ ಗೊತ್ತಾಗಿದೆ. ಮ್ಯಾನ್ ಹೋಲ್​ನಿಂದ ಅಪಘಾತವಾಗಿದೆ. ಅಲ್ಲಿ‌ ನೀರು ಹರಿಯುವ ಸಂದರ್ಭದಲ್ಲಿ ಸಾರ್ವಜನಿಕರು ಅಧಿಕಾರಿಗಳಿಗೆ ದೂರು ಕೊಟ್ಟಿದ್ರು. ಅದು ಅನಧಿಕೃತ ಕನೆಕ್ಷನ್. ಸಾಕಷ್ಟು ಕೆಲಸ‌ ಮಾಡಿದ್ದೇವೆ. ನಾನು ಇನ್ನೂ ಮುನ್ನೆಚ್ಚರಿಕೆ ಕ್ರಮವಾಗಿ ಕೆಲಸ ಮಾಡಬೇಕು. ಎಲ್ಲಾ ರಸ್ತೆಗಳ ಡಾಂಬರೀಕತಣಕ್ಕೆ ಅನುಮತಿ ಸಿಕ್ಕಿದೆ ಎಂದು ಎಸ್.ಆರ್.‌ವಿಶ್ವನಾಥ್ ತಿಳಿಸಿದ್ದಾರೆ.

ಬೆಂಗಳೂರು: ರಸ್ತೆ ಗುಂಡಿಗೆ ಬಿದ್ದು ಅಶ್ವಿನ್​ ಸಾವು

ನಗರದಲ್ಲಿ ರಸ್ತೆ ಗುಂಡಿಗೆ ಮತ್ತೊಂದು ಜೀವ ಬಲಿ ಆಗಿದೆ. ಎಂ.ಎಸ್. ಪಾಳ್ಯದ ಮುನೇಶ್ವರ ಲೇಔಟ್‌ನಲ್ಲಿ ರಸ್ತೆ ಗುಂಡಿಗೆ ಬಿದ್ದು ಅಪಘಾತ ಸಂಭವಿಸಿದೆ. ಜಲಮಂಡಳಿ ಅಗೆದಿದ್ದ ರಸ್ತೆಗುಂಡಿಗೆ ಬಿದ್ದು ಅಶ್ವಿನ್‌ ಎಂಬವರಿಗೆ ಗಾಯವಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಅಶ್ವಿನ್ (27) ಸಾವನ್ನಪ್ಪಿದ್ದಾರೆ. ತಗ್ಗು ಗುಂಡಿಗೆ ಬಿದ್ದು ಬೈಕ್ ಸವಾರ ಸಾವನ್ನಪ್ಪಿದ್ದಾರೆ. ಗುಂಡಿಗೆ ಬಿದ್ದು, ಅಪಘಾತ ಸಂಭವಿಸಿ ಬೈಕ್ ಸವಾರ ಅಶ್ವಿನ್ ಮೃತಪಟ್ಟ ಜಾಗದಲ್ಲಿ ಅಶ್ವಿನ್ ಸ್ನೇಹಿತರು ಜಮಾಯಿಸಿದ್ದಾರೆ. ಘಟನೆಗೆ ಬಿಬಿಎಂಪಿ, ಜಲಮಂಡಳಿಯ ನಿರ್ಲಕ್ಷ್ಯವೇ ಕಾರಣ ಅಂತ ಆಕ್ರೋಶ ಕೇಳಿಬಂದಿದೆ.

ನಿನ್ನೆ (ಮಾರ್ಚ್ 13) ರಾತ್ರಿ ಘಟನೆ ನಡೆದಿದೆ. ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಫಲಕಾರಿಯಾಗದೇ ಬೆಳಗಿನ ಜಾವ ಅಶ್ವಿನ್ ಸಾವನ್ನಪ್ಪಿದ್ದಾರೆ. ಅಶ್ವಿನ್, ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡ್ತಿದ್ದ. ತಾಯಿಗೆ ಒಬ್ಬನೇ ಮಗ ಅಶ್ವಿನ್. ಮೂಲತಃ ಹಾವೇರಿಯವರು ಎಂದು ತಿಳಿದುಬಂದಿದೆ.

ಅಲ್ಲದೆ, ಅಪಘಾತ ಸಂಭವಿಸಿ ರಕ್ತದ ಮಡುವಿನಲ್ಲಿ ಬಿದ್ದು, ಒದ್ದಾಡ್ತಿದ್ದರೂ ಆಂಬ್ಯೂಲೆನ್ಸ್ ಸ್ಥಳಕ್ಕೆ ಬಂದಿಲ್ಲ ಎಂದು ಆರೋಪ ಕೇಳಿಬಂದಿದೆ. ಒಂದು ಘಂಟೆಯಿಂದ ಆಂಬ್ಯೂಲೆನ್ಸ್​ಗೆ ಕಾಲ್ ಮಾಡಿದ್ರೂ ಆಂಬ್ಯೂಲೆನ್ಸ್ ಸ್ಥಳಕ್ಕೆ ಬಂದಿಲ್ಲ ಎಂದು ಆಕ್ರೋಶ ವ್ಯಕ್ತವಾಗಿದೆ. ನಂತರ ಸ್ಥಳೀಯರೇ ಕಾರಿನಲ್ಲಿ ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಬೆಂಗಳೂರು: ಬೇಕಾಬಿಟ್ಟಿ ಕೆಲಸ ಮಾಡಿ ರಸ್ತೆಗುಂಡಿ ಮುಚ್ಚಿದ ಬಿಬಿಎಂಪಿ; ನಗರದ ಬಹುತೇಕ ವಾರ್ಡ್​ಗಳಲ್ಲಿ ಕಳಪೆ ಕಾಮಗಾರಿ

ಬೆಂಗಳೂರು: ರಸ್ತೆ ಗುಂಡಿಗೆ ಬಿದ್ದು ಮತ್ತೊಂದು ಜೀವ ಬಲಿ; ಜಲಮಂಡಳಿಯ ನಿರ್ಲಕ್ಷ್ಯವೇ ಕಾರಣ ಎಂದು ಆಕ್ರೋಶ

Published On - 5:11 pm, Mon, 14 March 22