ST Somashekar: ಗೆಳೆಯ ಬಿಸಿ ಪಾಟೀಲ್ ಒತ್ತಾಸೆಯಂತೆ ಯೋಗರಾಜ್ ಭಟ್ ‘ಗರಡಿ’ ಸೇರಿದ ಸಚಿವ ಎಸ್ಟಿ ಸೋಮಶೇಖರ್!
BC Patil | Garadi: ಕೃಷಿ ಸಚಿವ ಬಿ.ಸಿ ಪಾಟೀಲ್ ಯೋಗರಾಜ್ ಭಟ್ ನಿರ್ದೇಶನದ ‘ಗರಡಿ’ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಸ್ನೇಹಿತ, ಸಚಿವ ಎಸ್.ಟಿ.ಸೋಮಶೇಖರ್ ಕೂಡ ಚಿತ್ರತಂಡ ಸೇರಿಕೊಂಡಿದ್ದಾರೆ.
ಸಚಿವ ಬಿ.ಸಿ ಪಾಟೀಲ್ ಒತ್ತಾಸೆಗೆ ಮಣಿದು ರಾಜ್ಯದ ಮತ್ತೋರ್ವ ಸಚಿವರು ನಿರ್ದೇಶಕ ಯೋಗರಾಜ ಭಟ್ಟರ ‘ಗರಡಿ’ ಸೇರಿದ್ದಾರೆ. ಏನಿದು ಎಂದು ಯೋಚಿಸುತ್ತೀದೀರಾ? ಸ್ಯಾಂಡಲ್ವುಡ್ ಅಂಗಳದಿಂದ ಹೊಸ ಸಮಾಚಾರ ಬಂದಿದ್ದು, ರಾಜ್ಯದ ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ (ST Somashekar) ‘ಗರಡಿ’ ಚಿತ್ರದಲ್ಲಿ (Garadi Movie) ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ಖ್ಯಾತ ನಿರ್ದೇಶಕ ಯೋಗರಾಜ್ ಭಟ್ (Yogaraj Bhat). ಕೃಷಿ ಸಚಿವ ಬಿ.ಸಿ.ಪಾಟೀಲ್ (BC Patil) ‘ಗರಡಿ’ಗೆ ಬಂಡವಾಳ ಹೂಡುತ್ತಿದ್ದಾರೆ.
ಸಿನಿಮಾದಲ್ಲಿ ಸೋಮಣ್ಣ ಎನ್ನುವ ಪಾತ್ರವನ್ನು ಸಚಿವ ಸೋಮಶೇಖರ್ ನಿರ್ವಹಿಸಿದ್ದಾರೆ. ಅವರು ಚಿತ್ರೀಕರಣದಲ್ಲಿ ಭಾಗಿಯಾಗಿರುವ ಸಂದರ್ಭದ ಫೋಟೋಗಳು ಇದೀಗ ಸಖತ್ ಸದ್ದು ಮಾಡುತ್ತಿದೆ. ಚಿತ್ರದ ನಿರ್ಮಾಪಕ, ಸಚಿವ ಬಿ.ಸಿ ಪಾಟೀಲ್ ಕೂಡ ‘ಗರಡಿ’ಯಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸೋಮಶೇಖರ್ ಅವರು ಸ್ನೇಹಿತ ಬಿಸಿ ಪಾಟೀಲ್ ಒತ್ತಾಸೆಯಂತೆ ಚಿತ್ರದಲ್ಲೂ ಅವರ ಗೆಳೆಯನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಗ್ರಾಮ್ಯ ವೇಷಭೂಷಣದಲ್ಲಿ ಬಣ್ಣಹಚ್ಚಿದ್ದಾರೆ.
ಬೆಂಗಳೂರಿನ ಜಿ.ವಿ.ಅಯ್ಯರ್ ಸ್ಟುಡಿಯೋದಲ್ಲಿ ಚಿತ್ರೀಕರಣ ನಡೆಯುತ್ತಿದೆ. ಯಶಸ್ ಸೂರ್ಯ ಚಿತ್ರದ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ:
James: ‘ಅಪ್ಪುವನ್ನು ಹುಡುಕಿ ಹೋಗುತ್ತೇನೆ’ ಎಂದು ನೋವಿನ ಮಾತನ್ನಾಡಿದ ರಾಘಣ್ಣ; ತಬ್ಬಿ ಸಂತೈಸಿದ ಶಿವಣ್ಣ