AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

James: ‘ಅಪ್ಪುವನ್ನು ಹುಡುಕಿ ಹೋಗುತ್ತೇನೆ’ ಎಂದು ನೋವಿನ ಮಾತನ್ನಾಡಿದ ರಾಘಣ್ಣ; ತಬ್ಬಿ ಸಂತೈಸಿದ ಶಿವಣ್ಣ

Raghavendra Rajkumar | Puneeth Rajkumar: ಬೆಂಗಳೂರಿನ ಅರಮನೆ ಮೈದಾನದಲ್ಲಿ ‘ಜೇಮ್ಸ್’ ಪ್ರಿ-ರಿಲೀಸ್ ಕಾರ್ಯಕ್ರಮ ನಡೆದಿದೆ. ಈ ವೇಳೆ ರಾಘವೇಂದ್ರ ರಾಜ್​ಕುಮಾರ್ ಮಾತನಾಡಿ, ನೋವಿನ ನುಡಿಗಳನ್ನಾಡಿದ್ದಾರೆ. ಶಿವಣ್ಣ ರಾಘಣ್ಣರನ್ನು ಸಂತೈಸಿದ್ದಾರೆ.

TV9 Web
| Edited By: |

Updated on:Mar 13, 2022 | 10:15 PM

Share

ಬೆಂಗಳೂರು: ಅರಮನೆ ಮೈದಾನದಲ್ಲಿ ‘ಜೇಮ್ಸ್’ ಪ್ರಿ-ರಿಲೀಸ್ ಇವೆಂಟ್ (James Pre Release Event) ನಡೆದಿದೆ. ಈ ವೇಳೆ ಮಾತನಾಡಿದ ರಾಘವೇಂದ್ರ ರಾಜ್​ಕುಮಾರ್ (Raghavendra Rajkumar) ಬಹಳ ಭಾವುಕರಾಗಿ ನೋವಿನ ಮಾತುಗಳನ್ನು ಆಡಿದ್ದಾರೆ. ವೇದಿಕೆಯನ್ನೇರಿದ ಅವರು, ಈ ಕ್ಷಣ ಏನನ್ನಿಸುತ್ತಿದೆಯೋ ಆ ಮಾತುಗಳನ್ನು ಆಡುತ್ತೇನೆ ಎಂದು ಹೇಳಿದ್ದಾರೆ. ನಂತರ ಮಾತನಾಡಿದ ರಾಘಣ್ಣ, ‘‘ಎಮೋಶನಲ್ ಆಗಬಾರದು ಅಂತ ಅಂದುಕೊಳ್ಳುತ್ತೇನೆ. ಆದರೆ ಹಾಗೆಯೇ ಆಗುತ್ತದೆ’’ ಎಂದಿದ್ದಾರೆ. ಪುನೀತ್ ನಿಧನವನ್ನು ಉಲ್ಲೇಖಿಸಿ, ಭಾವುಕರಾದ ಅವರು, ‘‘ಚೆನ್ನಾಗಿ ಓಡುತ್ತಿದ್ದ ಗಾಡಿ ನಿಲ್ಲಿಸಿದ್ಯಾಕೆ? ನಂಗೆ ಹಾರ್ಟ್ ಅಟ್ಯಾಕ್ ಆಗಿತ್ತು.. ಸ್ಟ್ರೋಕ್ ಆಗಿತ್ತು. ಆದರೂ ಇದ್ದೇನೆ. ಇನ್ನು ಮುಂದೆ ಆಗುವುದಿಲ್ಲ. ಅವನನ್ನು ಹುಡುಕಿಕೊಂಡು ಹೋಗುತ್ತೇನೆ’’ ಎಂದು ಬಹಳ ಭಾವುಕರಾಗಿ ನೋವಿನ ಮಾತುಗಳನ್ನು ರಾಘಣ್ಣ ನುಡಿದಿದ್ದಾರೆ. ಈ ಮಾತುಗಳನ್ನು ಕೇಳಿ ಶಿವರಾಜ್​ಕುಮಾರ್ (Shiva Rajkumar) ಕೂಡ ಕಣ್ಣೀರು ಹಾಕಿದ್ದಾರೆ.

ನಂತರ ವೇದಿಕೆ ಮೇಲೆ ಬಂದ ಶಿವರಾಜ್​ಕುಮಾರ್ ರಾಘಣ್ಣಗೆ ಸಮಾಧಾನ ಹೇಳಿದರು. ನಂತರ ಸಹೋದರರು ತಬ್ಬಿಕೊಂಡು ಕಣ್ಣೀರಿಟ್ಟರು. ನಂತರ ಪುನಃ ಮಾತನಾಡಿದ ರಾಘವೇಂದ್ರ ರಾಜ್​ಕುಮಾರ್, ‘‘ಭಾವುಕನಾಗಿ ಹೀಗೆ ಹೇಳಿದೆ. ನಿಮ್ಮೆಲ್ಲರನ್ನು (ಅಭಿಮಾನಿಗಳನ್ನು) ಬಿಟ್ಟು ನಾನೆಲ್ಲಿ ಹೋಗಲಿ. ಇಲ್ಲೇ ಇರುತ್ತೇನೆ’’ ಎಂದು ನುಡಿದಿದ್ದಾರೆ. ಈ ಭಾವುಕ ಕ್ಷಣಕ್ಕೆ ಅಭಿಮಾನಿ ವೃಂದ, ದೊಡ್ಮನೆ ಕುಟುಂಬ ಸಾಕ್ಷಿಯಾಗಿದೆ.

ರಾಘವೇಂದ್ರ ರಾಜ್​ಕುಮಾರ್ ಮಾತುಗಳು ಇಲ್ಲಿವೆ:

‘ಜೇಮ್ಸ್’ ಬಗ್ಗೆ ಶಿವಣ್ಣ ಮಾತು:

ನಂತರ ಮಾತನಾಡಿದ ಶಿವರಾಜ್​ಕುಮಾರ್ ‘‘ರಾಘು ಮಾತನಾಡಿದ್ದು ನೋವು ಜಾಸ್ತಿಯಾಯಿತು. ಇವರೀರ್ವರೂ ನನಗಿಂತ ಚಿಕ್ಕವರು. ನಾನು ಹೇಗೆ ಇದನ್ನೆಲ್ಲಾ ನೋಡುತ್ತಾ ಇರಬೇಕು?’’ ಎಂದು ನೋವಿನಲ್ಲೇ ಪ್ರಶ್ನಿಸಿದ್ದಾರೆ. ‘‘ಹೊರಗಿನಿಂದ ನೋಡುವುದಕ್ಕೆ ನಗುತ್ತಾ ಇರುತ್ತೇವೆ. ಆದರೆ ಬಹಳ ಬೇಜಾರಾಗಿದೆ, ನೋವಾಗಿದೆ. ಅಪ್ಪ ಅಮ್ಮನ ಜತೆಗೆ ಚಿಕ್ಕವನು ಹೋಗಿದ್ದು ಬಹಳ ನೋವು ತಂದಿದೆ. ಆದರೆ ಇಂತಹ ತಮ್ಮನನ್ನು ಪಡೆಯಲು ತುಂಬಾ ಪುಣ್ಯ ಮಾಡಿದ್ದೆವು’’ ಎಂದಿದ್ದಾರೆ ಶಿವಣ್ಣ.

ಅಪ್ಪು ಜತೆ ನಟಿಸೋ ಆಸೆ ಇತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಸ್ಕ್ರಿಪ್ಟ್ ಕೂಡ ಕೇಳಿದ್ದೆವು ಎಂದು ಶಿವಣ್ಣ ಸ್ಮರಿಸಿಕೊಂಡಿದ್ದಾರೆ. ಹೊಸಪೇಟೆಯಲ್ಲಿ ಪ್ರಿ-ರಿಲೀಸ್ ಇವೆಂಟ್ ಸಾಧ್ಯವಾಗದ್ದರ ಬಗ್ಗೆ ಮಾತನಾಡಿದ ಶಿವಣ್ಣ, ಅನಿವಾರ್ಯ ಕಾರಣಗಳಿಂದ ಬೆಂಗಳೂರಿನಲ್ಲಿ ಕಾರ್ಯಕ್ರಮ ನಡೆಸುತ್ತಿದ್ದೇವೆ. ಮುಂದೆ ಚಿತ್ರ ರಿಲೀಸ್ ಆದ ನಂತರ ರಾಜ್ಯಾದ್ಯಂತ ಪ್ರವಾಸ ಮಾಡಲಿದ್ದೇವೆ’’ ಎಂದು ಹೇಳಿದ್ದಾರೆ. ಇದೇ ವೇಳೆ ಶಕ್ತಿಧಾಮಕ್ಕೆ ಬಜೆಟ್​ನಲ್ಲಿ ಅನುದಾನ ಘೋಷಿಸಿದ ಸಿಎಂ ಬಸವರಾಜ ಬೊಮ್ಮಾಯಿಗೆ ಶಿವಣ್ಣ ಧನ್ಯವಾದ ಹೇಳಿದ್ದಾರೆ.

ಇದನ್ನೂ ಓದಿ:

James Pre-Release Event: ‘ನಮ್ಮ ಪಕ್ಕದಲ್ಲೇ ದೇವರಿದ್ದರು’; ಪುನೀತ್ ಬಗ್ಗೆ ಶ್ರೀಮುರಳಿ ಭಾವುಕ ಮಾತು

Priya Anand: ‘ಜೇಮ್ಸ್’ ಹಾಗೂ ಪುನೀತ್ ಬಗ್ಗೆ ಮಾತನಾಡುತ್ತಾ ಭಾವುಕರಾದ ಪ್ರಿಯಾ ಆನಂದ್

Published On - 10:11 pm, Sun, 13 March 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್