James Pre-Release Event: ‘ನಮ್ಮ ಪಕ್ಕದಲ್ಲೇ ದೇವರಿದ್ದರು’; ಪುನೀತ್ ಬಗ್ಗೆ ಶ್ರೀಮುರಳಿ ಭಾವುಕ ಮಾತು
Puneeth Rajkumar | Sriimurali: ಬೆಂಗಳೂರಿನ ಅರಮನೆ ಮೈದಾನದಲ್ಲಿ ‘ಜೇಮ್ಸ್’ ಪ್ರಿ-ರಿಲೀಸ್ ಈವೆಂಟ್ ನಡೆಯುತ್ತಿದೆ. ಈ ವೇಳೆ ಮಾತನಾಡಿದ ನಟ ಶ್ರೀಮುರಳಿ, ಪುನೀತ್ ಜತೆಗಿನ ಒಡನಾಟವನ್ನು ನೆನಪಿಸಿಕೊಂಡಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ (Puneeth Rajkumar) ಅಭಿನಯದ ಕೊನೆಯ ಸಿನಿಮಾ ಜೇಮ್ಸ್ ಚಿತ್ರದ ಪ್ರಿ-ರಿಲೀಸ್ ಇವೆಂಟ್ನಲ್ಲಿ (James Pre Release Event) ದೊಡ್ಡ ತಾರಾಗಣ ಸಮಾಗಮವಾಗಿದೆ. ಕನ್ನಡ ಹಾಗೂ ತೆಲುಗು ರಂಗದ ಕಲಾವಿದರು ಭಾಗಿಯಾಗಿದ್ದಾರೆ. ಇನ್ನು ದೊಡ್ಮನೆಯ ಇಡೀ ಕುಟುಂಬವೇ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಸಿನಿಮಾ ಹಾಗೂ ಅಪ್ಪು ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಸ್ಯಾಂಡಲ್ವುಡ್ ನಟ ಶ್ರೀಮುರಳಿ (Sriimurali) ಮಾತನಾಡಿ ಪುನೀತ್ ಜತೆಗಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ. ‘‘ಬಹಳ ಪ್ರೀತಿಯಿಂದ ಅಪ್ಪು ಮಾಮ, ಅಪ್ಪು ಮಾಮ ಎನ್ನುತ್ತಿದ್ದೆ. ಅವರ ಸಿನಿಮಾಗಳನ್ನು ಬಹಳ ಇಷ್ಟಪಟ್ಟು ನೋಡುತ್ತಿದ್ದೆ. ನಿನ್ನೆ ಯಾರೋ ಅವರ ಸಿನಿಮಾಗಳನ್ನು ನೋಡಿ ನೀವು ಹೇಗೆ ಪ್ರೇರಿತ ಆಗುತ್ತೀರಿ ಎಂದು ಪ್ರಶ್ನೆ ಕೇಳಿದ್ದರು. ಏನೇ ಇನ್ಸ್ಪೈರ್ ಆದರೂ ಅವರ ತರ ಎರಡು ಸ್ಟೆಪ್ ಹಾಕೋಕೆ ಆಗಲ್ಲ, ಎರಡು ಫೈಟ್ ಮಾಡೋಕೆ ಆಗಲ್ಲ. ಇರೋದು ಒಬ್ರೇ ಪವರ್ ಸ್ಟಾರ್. ಅವರು ಪುನೀತ್ ರಾಜ್ ಕುಮಾರ್ ಮಾತ್ರ. ಅವರ ಗುಣನಡತೆ ನೋಡಿ ಎಲ್ಲಾ ಕಲಾವಿದರೂ ಅನುಸರಿಸಬೇಕು. ಅವರು ಮಾಡಿದ ಹಲವಾರು ವಿಚಾರಗಳು ನಮಗೆ ಗೊತ್ತೇ ಇರಲಿಲ್ಲ. ನಮ್ಮ ಪಕ್ಕದಲ್ಲೇ ದೇವರಿದ್ದರು. ಅವರನ್ನು ಮತ್ತೊಬ್ಬ ದೇವರು ಕಿತ್ತುಕೊಂಡಿದ್ದಕ್ಕೆ ಬೇಜಾರಾಗುತ್ತಿದೆ’’ ಎಂದು ಶ್ರೀಮುರಳಿ ಭಾವುಕರಾಗಿದ್ದಾರೆ.
ಮಾರ್ಚ್ 17ರಂದು ಪುನೀತ್ ದೇವರ ದರ್ಶನ ವಿಶ್ವದೆಲ್ಲೆಡೆ ಸಿಗಲಿದೆ. ಆ ದರ್ಶನ ಮುಂದುವರೆಯಲಿ ಎಂದು ಶ್ರೀಮುರಳಿ ಹಾರೈಸಿದ್ದಾರೆ.
‘ಜೇಮ್ಸ್’ ಪ್ರಿ-ರಿಲೀಸ್ ಈವೆಂಟ್ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ:
ಇದನ್ನೂ ಓದಿ:
Priya Anand: ‘ಜೇಮ್ಸ್’ ಹಾಗೂ ಪುನೀತ್ ಬಗ್ಗೆ ಮಾತನಾಡುತ್ತಾ ಭಾವುಕರಾದ ಪ್ರಿಯಾ ಆನಂದ್
James Pre-Release Event: ‘ಜೇಮ್ಸ್’ ಪ್ರಿ-ರಿಲೀಸ್ ಈವೆಂಟ್ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ