ಸಮಾವೇಶ ಜನಸ್ತೋಮದ ಮಧ್ಯೆ ಎಡವಟ್ಟು! ಅಮ್ಮನ ಕಳೆದುಕೊಂಡು ಕಣ್ಣೀರು ಹಾಕ್ತಿರುವ ಪುಟ್ಟ ಬಾಲಕ ಮನ್ವಂತ್!

| Updated By: ಸಾಧು ಶ್ರೀನಾಥ್​

Updated on: Sep 10, 2022 | 2:52 PM

ಸಮಾವೇಶದ ಜನಸ್ತೋಮದಲ್ಲಿ ಅಮ್ಮನ ಕಳೆದುಕೊಂಡು ಕಣ್ಣೀರುಹಾಕಿ ಕಾಯ್ತಿರೋ ಮನ್ವಂತ್, ರಾಧಾ ಮತ್ತು ವೀರಜ್ ದಂಪತಿಯ ಪುತ್ರ. ಚಿಕ್ಕಬಳ್ಳಾಪುರ ಮೂಲದ ಬಾಲಕ ಮನ್ವಂತ್ ವಯಸ್ಸು ಇನ್ನೂ 7 ವರ್ಷ.

ಸಮಾವೇಶ ಜನಸ್ತೋಮದ ಮಧ್ಯೆ ಎಡವಟ್ಟು! ಅಮ್ಮನ ಕಳೆದುಕೊಂಡು ಕಣ್ಣೀರು ಹಾಕ್ತಿರುವ ಪುಟ್ಟ ಬಾಲಕ ಮನ್ವಂತ್!
ಅಮ್ಮನ ಕಳೆದುಕೊಂಡು ಕಣ್ಣೀರು ಹಾಕ್ತಿರುವ ಪುಟ್ಟ ಬಾಲಕ ಮನ್ವಂತ್!
Follow us on

ದೊಡ್ಡಬಳ್ಳಾಪುರ: ಪಕ್ಕದ ತಾಲೂಕಿನಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷದ ಬೃಹತ್ ಸಮಾವೇಶ ನಡೆಯುತ್ತಿದೆ ಎಂದು ನೆರೆಯ ತಾಲೂದು ಚಿಕ್ಕಬಳ್ಳಾಪುರದ ದಂಪತಿ ತಮ್ಮ ಪುಟ್ಟ ಕಂದಮ್ಮನ್ನೂ ಕರೆದುಕೊಂಡು ಸಮಾವೇಶಕ್ಕೆ ಬಂದಿದ್ದಾರೆ. ಆದರೆ ಅಲ್ಲೊಂದು ಎಡವಟ್ಟು ನಡೆದಿದೆ. ಅದು ಹೇಗೋ ಆ ಜನಜಂಗುಳಿಯಲ್ಲಿ ಕಂದಮ್ಮ ಅಮ್ಮಅಪ್ಪನಿಂದ ದೂರವಾಗಿದೆ. ಇದೀಗ ಕಂದ ಅಮ್ಮನಿಗಾಗಿ ಹಂಬಲಿಸ್ತಿದೆ

ಸಮಾವೇಶದ ಜನಸ್ತೋಮದಲ್ಲಿ ಅಮ್ಮನ ಕಳೆದುಕೊಂಡು ಕಣ್ಣೀರುಹಾಕಿ ಕಾಯ್ತಿರೋ ಮನ್ವಂತ್, ರಾಧಾ ಮತ್ತು ವೀರಜ್ ದಂಪತಿಯ ಪುತ್ರ. ಚಿಕ್ಕಬಳ್ಳಾಪುರ ಮೂಲದ ಬಾಲಕ ಮನ್ವಂತ್ ವಯಸ್ಸು ಇನ್ನೂ 7 ವರ್ಷ. ಊಟದ ಕೌಂಟರ್ ಬಳಿ ಬಂದ ವೇಳೆ ಅಮ್ಮನಿಂದ ತಪ್ಪಿಸಿಕೊಂಡ ಬಾಲಕ ಮನ್ವಂತ್ ಕಣ್ಣೀರು ಹಾಕುತ್ತಾ ಕಾಯ್ತಿದಾನೆ.

ತಾಜಾ ಮಾಹಿತಿ ಪ್ರಕಾರ ಮಗುವನ್ನು ಅವರ ಊರಿನ ಮಹಿಳೆಯೊಬ್ಬರು ಜೋಪಾನವಾಗಿ ತಮ್ಮ ಜೊತೆ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ. ವರದಿ: ಜಗ್ಗಿನ್ ಮಾಲ್ತೇಶ್, ಟಿವಿ9

Published On - 2:32 pm, Sat, 10 September 22