ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಮಾಜಿ ಶಾಸಕ ವೆಂಕಟಸ್ವಾಮಿ ಅವರಿಗೆ ಇಂದು ಮುಂಜಾನೆ ಹೃದಯಾಘಾತವಾಗಿದ್ದು ಬೆಂಗಳೂರಿನ ಖಾಸಗಿ ಆಸ್ಪತ್ರೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯ ವಿಧಾನ ಸಭಾ ಚುನಾವಣೆ ಹಿನ್ನೆಲೆ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಮಾಡ್ತಿದ್ದ ವೆಂಕಟಸ್ವಾಮಿ, ನಿನ್ನೆ(ಮಾರ್ಚ್ 21) ಪ್ರಚಾರ ಮುಗಿಸಿ ಮನೆಗೆ ಬಂದಿದ್ದಾಗ ಹೃದಯಾಘಾತವಾಗಿದೆ. ವೆಂಕಟಸ್ವಾಮಿ, ದೇವನಹಳ್ಳಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
2008ರಲ್ಲಿ ಕಾಂಗ್ರೆಸ್ ಪಕ್ಷದಿಂದ ಶಾಸಕನಾಗಿ ಆಯ್ಕೆಯಾಗಿದ್ದ ಮಾಜಿ ಶಾಸಕ ವೆಂಕಟಸ್ವಾಮಿ ಈ ವೇಳೆ ಸಾಕಷ್ಟು ಜನಪ್ರಿಯತೆಯನ್ನ ಬೆಳೆಸಿಕೊಂಡಿದ್ದು ತಮ್ಮದೆ ಒಂದಷ್ಟು ಬಳಗವನ್ನು ಕ್ಷೇತ್ರದಲ್ಲಿ ಹೊಂದಿದ್ದಾರೆ. ಜೊತೆಗೆ 2013 ರಲ್ಲೂ ದೇವನಹಳ್ಳಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ವೆಂಕಟಸ್ವಾಮಿ ಕಾಂಗ್ರೆಸ್ ಪಕ್ಷದ ಮುಖಂಡರ ಒಳ ಜಗಳದಿಂದ ಜೆಡಿಎಸ್ ಅಭ್ಯರ್ಥಿ ಮುಂದೆ ಸೋಲನ್ನ ಅನುಭವಿಸಿದ್ರು. ಇನ್ನೂ 2018 ರಲ್ಲಿ ಸೋಲನ್ನ ಅನುಭವಿಸಿದ ಕಾರಣ ವಾಸವಿರುವ ಮನೆಯನ್ನ ಸಹ ಮಾಜಿ ಶಾಸಕ ವೆಂಕಟಸ್ವಾಮಿ ಅಡಮಾನವಿಟ್ಟು ಚುನಾವಣೆ ಎದುರಿಸಿದ್ದು ಇದೀಗ ಸಾಲದ ಸುಳಿಯಲ್ಲಿ ಸಿಲುಕಿ ಪರದಾಡುತ್ತಿದ್ದಾರೆ. ಇನ್ನೂ ಈ ನಡುವೆ ಕ್ಷೇತ್ರದಲ್ಲಿ 2023 ರ ಚುನಾವಣೆಗೂ ಕಾಂಗ್ರೆಸ್ ಪಕ್ಷದ ಆಕಾಂಕ್ಷಿಯಾಗಿ ಟಿಕೆಟ್ ಗಾಗಿ ಸಾಕಷ್ಟು ಕಸರತ್ತು ನಡೆಸುತ್ತಿದ್ದಾರೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರ: ಜೂಜು ಅಡ್ಡೆ ಮೇಲೆ ಪೊಲೀಸರ ದಾಳಿ; ನಗರಸಭೆ ಸದಸ್ಯ, ಹೆಡ್ ಕಾನ್ಸ್ಟೇಬಲ್ ಬಂಧನ
ಜೊತೆಗೆ ಈಗಾಗಲೆ ಕ್ಷೇತ್ರದಲ್ಲಿ ಬೂತ್ ಮಟ್ಟದಲ್ಲಿ ಒಂದು ರೌಂಡ್ ಪ್ರಚಾರ ಮುಗಿಸಿರುವ ವೆಂಕಟಸ್ವಾಮಿ ಎರಡನೆ ಹಂತದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಕ್ಷೇತ್ರದಲ್ಲಿ ಜನಾಶೀರ್ವಾದ ಯಾತ್ರೆ ಯುವಕರ ಸಮಾವೇಶಗಳನ್ನ ಸಹ ಒಬ್ಬಂಟಿಯಾಗಿ ಮಾಡ್ತಿದ್ದು ಕಳೆದ ಭಾರಿಯ ಸೋಲಿನ ಕಹಿಯನ್ನ ಈ ಭಾರಿ ಮರೆತು ಸಿಹಿ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಇನ್ನೂ ಇದೇ ನಿರೀಕ್ಷೆಯಲ್ಲೆ ನಿನ್ನೆ ಸಹ ಕ್ಷೇತ್ರದ ಗ್ರಾಮಗಳಲ್ಲಿ ಅಬ್ಬರದ ಪ್ರಚಾರ ಮುಗಿಸಿ ಮನೆಗೆ ಬಂದ ವೇಳೆ ಮುಂಜಾನೆ ಹೃದಯಾಘಾತವಾಗಿದ್ದು ಕುಟುಂಬಸ್ಥರು ಕೂಡಲೆ ಬೆಂಗಳೂರಿನ ಆಸ್ವತ್ರೆಗೆ ಕರೆದೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಇನ್ನೂ ಆಸ್ವತ್ರೆಯಲ್ಲಿ ಬೆಳಗಿನಿಂದ ಚಿಕಿತ್ಸೆ ನೀಡಿರುವ ವೈದ್ಯರು ಯಾವುದೇ ಅಪಾಯವಿಲ್ಲ ಅಂತ ಕುಟುಂಬಸ್ಥರಿಗೆ ತಿಳಿಸಿದ್ದು ಸ್ಟಂಟ್ ಹಾಕಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಇನ್ನೂ ವೆಂಕಟಸ್ವಾಮಿ ಅವರಿಗೆ ಹೃದಯಾಘಾತವಾಗಿರುವ ವಿಚಾರ ತಿಳಿದು ಅವರ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದ್ದು ಕೆಲ ಅಭಿಮಾನಿಗಳು ಆಸ್ವತ್ರೆ ಹಾಗೂ ಮನೆ ಬಳಿ ತೆರಳಿ ಅವರ ಆರೋಗ್ಯ ವಿಚಾರಣೆ ಮಾಡ್ತಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:25 am, Wed, 22 March 23