ಚಿಕ್ಕಬಳ್ಳಾಪುರ: ಜೂಜು ಅಡ್ಡೆ ಮೇಲೆ ಪೊಲೀಸರ ದಾಳಿ; ನಗರಸಭೆ ಸದಸ್ಯ, ಹೆಡ್ ಕಾನ್ಸ್​​ಟೇಬಲ್ ಬಂಧನ

ಜೂಜು ಅಡ್ಡೆ ಮೇಲೆ ಗೌರಿಬಿದನೂರು ಗ್ರಾಮಾಂತರ ಪೊಲೀಸರು ದಾಳಿ ನಡೆಸಿದ್ದು, ದಾಳಿ ವೇಳೆ ಗೌರಿಬಿದನೂರು ನಗರಸಭೆ ಸದಸ್ಯ ಆರ್​.ಪಿ.ಗೋಪಿನಾಥ್, ಚಿಕ್ಕಬಳ್ಳಾಪುರ ಸಂಚಾರಿ ಠಾಣೆ ಹೆಡ್ ಕಾನ್ಸ್​​ಟೇಬಲ್ ಮೊಹಮ್ಮದ್ ಸೇರಿ 11 ಜನರನ್ನು ಬಂಧಿಸಲಾಗಿದೆ.

ಚಿಕ್ಕಬಳ್ಳಾಪುರ: ಜೂಜು ಅಡ್ಡೆ ಮೇಲೆ ಪೊಲೀಸರ ದಾಳಿ; ನಗರಸಭೆ ಸದಸ್ಯ, ಹೆಡ್ ಕಾನ್ಸ್​​ಟೇಬಲ್ ಬಂಧನ
ಜೂಜು ಅಡ್ಡೆ ಮೇಲೆ ದಾಳಿ, ನಗರ ಸಭೆ ಸದಸ್ಯ ಸೇರಿ 11 ಜನರ ಬಂಧನ
Follow us
|

Updated on:Mar 22, 2023 | 9:39 AM

ಚಿಕ್ಕಬಳ್ಳಾಪುರ: ಜೂಜು ಅಡ್ಡೆ ಮೇಲೆ ಗೌರಿಬಿದನೂರು ಗ್ರಾಮಾಂತರ ಪೊಲೀಸರು ದಾಳಿ ನಡೆಸಿದ್ದು, ದಾಳಿ ವೇಳೆ ಗೌರಿಬಿದನೂರು ನಗರಸಭೆ ಸದಸ್ಯ ಆರ್​.ಪಿ.ಗೋಪಿನಾಥ್, ಚಿಕ್ಕಬಳ್ಳಾಪುರ ಸಂಚಾರಿ ಠಾಣೆ ಹೆಡ್ ಕಾನ್ಸ್​​ಟೇಬಲ್ ಮೊಹಮ್ಮದ್ ಸೇರಿ 11 ಜನರನ್ನು ಬಂಧಿಸಲಾಗಿದೆ. ಜಿಲ್ಲೆಯ ಗೌರಿಬಿದನೂರು ತಾಲೂಕಿನ ಸಾಗಾನಹಳ್ಳಿ ಬಳಿಯ ತೋಟದ ಮನೆಯಲ್ಲಿ ಜೂಜಾಟ ಆಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಸರ್ಕಲ್​​ ಇನ್ಸ್​​ಪೆಕ್ಟರ್​ ಸತ್ಯನಾರಾಯಣ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಈ ವೇಳೆ ಬಂಧಿತರಿಂದ ಒಂದೂವರೆ ಲಕ್ಷ ಹಣ ನಗದು ಜಪ್ತಿ ಮಾಡಲಾಗಿದೆ.

ಮೊಬೈಲ್ ದೋಚುತ್ತಿದ್ದ ಆರೋಪಿಗಳ ಬಂಧನ

ಬೆಂಗಳೂರು: ಒಂಟಿಯಾಗಿ ಹೋಗುತ್ತಿದ್ದವರ ಬಳಿ ಮೊಬೈಲ್ ದೋಚುತ್ತಿದ್ದ ಮೂವರು ಆರೋಪಿಗಳನ್ನ ಇದೀಗ ವಿವೇಕನಗರ ಪೊಲೀಸರು ಬಂಧಿಸಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ಐಫೋನ್‌ ಕದಿಯುವ ಗ್ಯಾಂಗ್ ಬೀಡು ಬಿಟ್ಟಿದ್ದು, ಫೋನ್ ಕಳ್ಳತನ ಪ್ರಕರಣಗಳು ನಗರದಲ್ಲಿ ಸರ್ವೇಸಾಮಾನ್ಯವಾಗಿದೆ. ಇನ್ನು ಪೊಲೀಸರ ತನಿಖೆ ವೇಳೆ ಈ ನಟೋರಿಯಸ್ ಗ್ಯಾಂಗ್ ಕೇವಲ ಐಫೋನ್​ಗಳನ್ನ ಮಾತ್ರ ಕದಿಯುತ್ತಿದ್ದರಂತೆ ಎಂಬುದು ಗೊತ್ತಾಗಿದೆ. ಇನ್ನು ಸಾಮಾನ್ಯವಾಗಿ ಐಫೋನ್‌ ಕಳ್ಳತನ ಮಾಡಿದ್ರು ಸುಲಭವಾಗಿ ಆ್ಯಫಲ್ ಐಡಿ ಇದ್ರೆ ಫೋನ್ ಪತ್ತೆ ಮಾಡಬಹುದು ಅನ್ಕೋಂಡಿದ್ದೀರಾ. ಸಾಧ್ಯವೇ ಇಲ್ಲ, ಹೌದು ಇವರ ಕೈಗೆ ಐಫೋನ್‌ ಸಿಕ್ಕಿದ್ರೆ ಮತ್ತೆ ಸಿಗೋದಿಲ್ಲ.

ಇದನ್ನೂ ಓದಿ:Madal Virupakshappa: ಲೋಕಾಯುಕ್ತ ಎಫ್ಐಆರ್ ರದ್ದು ಕೋರಿ ಹೈಕೋರ್ಟ್​​​ಗೆ ಅರ್ಜಿ ಸಲ್ಲಿಸಿದ ಮಾಡಾಳ್ ವಿರೂಪಾಕ್ಷಪ್ಪ

ಹಾಗಾದ್ರೆ ಇವರು ಫೋನ್​ನ್ನ ಇವರು ಏನ್​ ಮಾಡುತ್ತಾರೆ ಗೊತ್ತಾ?

ಬೆಂಗಳೂರಿನಲ್ಲಿ ಫೋನ್ ಕದ್ದು ಹೈದರಾಬಾದ್​ಗೆ ರವಾನೆ ಮಾಡುತ್ತಾರೆ. ಹೈದರಾಬಾದ್ನಲ್ಲಿ ಐಫೋನ್‌ ಬಿಡಿಭಾಗಗಳನ್ನ ತೆಗೆದು ಮದರ್ ಬೋರ್ಡ್ ಸೆಫರೇಟ್ ಮಾಡುತ್ತಾರೆ. ಫೋನ್​ನಲ್ಲಿ ಮದರ್ ಬೋರ್ಡ್ ತೆಗೆದ ನಂತರ ಲೋಕೇಷನ್ ಆಗಲಿ ಐಡಿ ಆಗಲಿ ಏನು ಪತ್ತೆಯಾಗಲ್ಲ. ನಂತರ ಬಿಡಿಭಾಗಗಳನ್ನ ಬೇರೆಡೆ ಮಾರಾಟ ಅಥವಾ ಬೇರೆ ಫೋನ್​ಗಳಿಗೆ ಅಳವಡಿಕೆ ಮಾಡುತ್ತಾರೆ ಈ ಖದೀಮರು. ನಗರದಲ್ಲಿ ಒಂಟಿಯಾಗಿ ಓಡಾಡುವವರನ್ನೇ ಟಾರ್ಗೆಟ್​ ಮಾಡುತ್ತಿದ್ದ ಗ್ಯಾಂಗ್​

ಹೀಗೆ ನಗರದಲ್ಲಿ ಐಫೋನ್‌ ಬಳಸುವ ಜನರನ್ನೆ ಟಾರ್ಗೆಟ್ ಮಾಡುತ್ತಿದ್ದ ಈ ಗ್ಯಾಂಗ್. ರಾತ್ರಿ ವೇಳೆ ಊಟ ಮುಗಿಸಿ ವಾಕ್ ಹೋಗುವವರನ್ನ ಪಾಲೋ ಮಾಡಿ ಐಫೋನ್‌ ಬಳಸುತ್ತಾರೆ ಅಂದರೆ ಮಾತ್ರ ಪ್ಲಾನ್ ಮಾಡಿ ಲಕ್ಷ ಲಕ್ಷ ಬೆಲೆಬಾಳುವ ಐಫೋನ್‌ ಕಸಿದು ಪರಾರಿಯಾಗುತ್ತಿದ್ದರು. ಕೇವಲ ಐಫೋನ್​ಗಳನ್ನ ಕದ್ದು ಕೊರಿಯರ್​ ಮೂಲಕ ಹೈದರಾಬಾದ್​ಗೆ ಕಳಿಸುತ್ತಿದ್ದ ಆರೋಪಿಗಳು. ಆರೋಪಿಗಳ ಖತರ್ನಾಕ್ ಪ್ಲಾನ್ ಪೊಲೀಸರ ತನಿಖೆಯಿಂದ ಬಯಲಾಗಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:36 am, Wed, 22 March 23