ಸಲ್ಮಾನ್ ಖಾನ್ ಮನೆ ಮುಂದೆ ಇನ್ನೂ ಯಾರೂ ನಿಲ್ಲಂಗಿಲ್ಲ; ಪೊಲೀಸ್ ಇಲಾಖೆಯಿಂದ ಆದೇಶ

ಸಲ್ಮಾನ್ ಖಾನ್​ರ ಆತ್ಮೀಯ ಗೆಳೆಯ ಹಾಗೂ ಮ್ಯಾನೇಜರ್ ಆಗಿರುವ ಪ್ರಶಾಂತ್ ಗುಂಜಲ್ಕರ್ ಅವರಿಗೆ ಬೆದರಿಕೆ ಇ-ಮೇಲ್ ಬಂದಿದೆ. ಹೀಗಾಗಿ ಭದ್ರತೆ ಹೆಚ್ಚಿಸಲಾಗಿದೆ.

ಸಲ್ಮಾನ್ ಖಾನ್ ಮನೆ ಮುಂದೆ ಇನ್ನೂ ಯಾರೂ ನಿಲ್ಲಂಗಿಲ್ಲ; ಪೊಲೀಸ್ ಇಲಾಖೆಯಿಂದ ಆದೇಶ
ಸಲ್ಮಾನ್ ಖಾನ್
Follow us
ರಾಜೇಶ್ ದುಗ್ಗುಮನೆ
|

Updated on: Mar 22, 2023 | 6:30 AM

ಸ್ಟಾರ್ ನಟರ ಮನೆ ಎದುರು ಫ್ಯಾನ್ಸ್ ನಿಲ್ಲೋದು ಕಾಮನ್. ಅದರಲ್ಲೂ ಶಾರುಖ್ ಖಾನ್ (Shah Rukh Khan) , ಸಲ್ಮಾನ್ ಖಾನ್ ಅವರಂತಹ ಸ್ಟಾರ್ ನಟರ ಮನೆ ಎದುರು ನಿತ್ಯವೂ ಅಭಿಮಾನಿಗಳು ಬಂದು ನಿಲ್ಲುತ್ತಾರೆ. ಕೆಲವೊಮ್ಮೆ ಸ್ಟಾರ್​ಗಳು ಬಂದು ಅಭಿಮಾನಿಗಳಿಗೆ ದರ್ಶನ ನೀಡುತ್ತಾರೆ. ಆದರೆ, ಈಗ ಸಲ್ಲು ಮನೆ ಎದುರು ಅಭಿಮಾನಿಗಳು ನಿಲ್ಲಂಗಿಲ್ಲ. ಈ ಬಗ್ಗೆ ಪೊಲೀಸರಿಂದಲೇ ಅಧಿಕೃತ ಆದೇಶ ಬಂದಿದೆ. ಸಲ್ಮಾನ್ ಖಾನ್​ (Shah Rukh Khan) ಮ್ಯಾನೇಜರ್​​ಗೆ ಇ-ಮೇಲ್ ಮೂಲಕ ಬೆದರಿಕೆ ಬಂದಿದೆ. ಈ ಕಾರಣಕ್ಕೆ ಪೊಲೀಸರು ಈ ಆದೇಶ ನೀಡಿದ್ದಾರೆ.

ಸಲ್ಮಾನ್ ಖಾನ್​ರ ಆತ್ಮೀಯ ಗೆಳೆಯ ಹಾಗೂ ಮ್ಯಾನೇಜರ್ ಆಗಿರುವ ಪ್ರಶಾಂತ್ ಗುಂಜಲ್ಕರ್ ಅವರಿಗೆ ಬೆದರಿಕೆ ಇ-ಮೇಲ್ ಬಂದಿದೆ. ‘ನಿಮ್ಮ ಬಾಸ್ ಜೊತೆ (ಸಲ್ಮಾನ್ ಖಾನ್) ಗೋಲ್ಡಿ ಅಣ್ಣ ಮಾತನಾಡಬೇಕು. ಲಾರೆನ್ಸ್​ ಸಂದರ್ಶನ ನೋಡಿದ್ದಾನಾ ಅವನು? ಸಂದರ್ಶನ ನೋಡದಿದ್ದರೆ ತೋರಿಸು. ಈ ಪ್ರಕರಣ ಮುಗಿಯಬೇಕು ಎಂದರೆ ನಿಮ್ಮ ಬಾಸ್ ಜೊತೆ ಮಾತನಾಡೋಕೆ ಹೇಳಿ’ ಎಂದು ಇ-ಮೇಲ್​ನಲ್ಲಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಕೇಸ್ ದಾಖಲಾಗಿದೆ.

ಇದನ್ನೂ ಓದಿ: Salman Khan: ಸಲ್ಮಾನ್ ಖಾನ್​ಗೆ ಮತ್ತೆ ಬೆದರಿಕೆ, ಅದೇ ಗ್ಯಾಂಗ್​ ಆದರೆ ವಿಧಾನ ಬೇರೆ

‘ಇಬ್ಬರು ಸಹಾಯಕ ಪೊಲೀಸರು ಹಾಗೂ 8 ಕಾನ್ಸ್​ಟೇಬಲ್​ಗಳು ಸಲ್ಮಾನ್ ಖಾನ್ ಮನೆ ಬಳಿ ಇರುತ್ತಾರೆ. 24 ಗಂಟೆಯೂ ಅವರು ಡ್ಯೂಟಿ ಮಾಡಲಿದ್ದಾರೆ. ಅಭಿಮಾನಿಗಳು ಇಲ್ಲಿ ನೆರೆಯುವಂತಿಲ್ಲ. ಇದರಿಂದ ಅವರ ಅಭಿಮಾನಿಗಳಿಗೆ ಬೇಸರ ಆಗಿದೆ. ಕೆಲವರು ಭದ್ರತೆ ದೃಷ್ಟಿಯಿಂದ ಇದು ಒಳ್ಳೆಯ ನಿರ್ಧಾರ ಎಂದಿದ್ದಾರೆ.

ಲಾರೆನ್ಸ್ ಬಿಷ್ಣೋಯ್ ಸಂದರ್ಶನದಲ್ಲಿ ಹೇಳಿದ್ದೇನು?

‘ಸಲ್ಮಾನ್ ಖಾನ್ ಕ್ಷಮೆ ಕೇಳಬೇಕು. ಅವರು ಬಿಕಾನೇರ್‌ನಲ್ಲಿರುವ ನಮ್ಮ ದೇವಸ್ಥಾನಕ್ಕೆ ಹೋಗಿಯೇ ತಪ್ಪಾಯಿತು ಎಂದು ಹೇಳಬೇಕು. ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದೇ ನನ್ನ ಜೀವನದ ಗುರಿ. ಸಲ್ಮಾನ್ ಖಾನ್ ಅವರ ಭದ್ರತೆಯನ್ನು ತೆಗೆದುಹಾಕಿದರೆ ನಾನು ಅವರನ್ನು ಕೊಲ್ಲುತ್ತೇನೆ’ ಎಂದು ಬಿಷ್ಣೋಯ್ ಎಬಿಪಿ ನ್ಯೂಸ್​ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದ.

ಇದನ್ನೂ ಓದಿ: ಸಲ್ಮಾನ್ ಖಾನ್ ಒಟ್ಟೂ ಆಸ್ತಿ ಮೊತ್ತ ಇಷ್ಟೊಂದಾ? ಸ್ಟಾರ್ ನಟನ ಪ್ರಾಪರ್ಟಿ ಬಗ್ಗೆ ಇಲ್ಲಿದೆ ಮಾಹಿತಿ

‘ಸಲ್ಮಾನ್ ಖಾನ್ ಕ್ಷಮೆಯಾಚಿಸಿದರೆ ಅಲ್ಲಿಗೆ ವಿಷಯ ಕೊನೆಗೊಳ್ಳುತ್ತದೆ. ಸಲ್ಮಾನ್ ಅಹಂಕಾರಿ. ಮೂಸೆ ವಾಲಾ ಕೂಡ ಹಾಗೇ ಇದ್ದರು. ಸಲ್ಮಾನ್ ಖಾನ್‌ನ ಅಹಂ ರಾವಣನಿಗಿಂತ ದೊಡ್ಡದಾಗಿದೆ’ ಎಂದಿದ್ದ ಲಾರೆನ್ಸ್.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ